ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಷೇಧದ ವಿರುದ್ಧ ಸುಪ್ರಿಂಕೋರ್ಟ್‌ಗೆ ದೀನ್‌ದಾರ್‌ ಅಂಜುಮಾನ್‌

By Staff
|
Google Oneindia Kannada News

ಬೆಂಗಳೂರು : ಕರ್ನಾಟಕ, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯಗಳ ಚರ್ಚ್‌ಗಳಲ್ಲಿ ಕಳೆದ ವರ್ಷ ಸರಣಿ ಬಾಂಬ್‌ ಸ್ಫೋಟಿಸಿದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೇರಿರುವ ನಿಷೇಧವನ್ನು ಸುಪ್ರಿಂಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೈದರಾಬಾದ್‌ ಮೂಲದ ದೀನ್‌ದಾರ್‌ ಅಂಜುಮಾನ್‌ ಸಂಘಟನೆ ಶುಕ್ರವಾರ ಹೇಳಿಕೊಂಡಿದೆ.

ಯಾವುದೇ ಸಮರ್ಪಕ ಕಾರಣವಿಲ್ಲದೆ ಸಂಘಟನೆಯ ಮೇಲೆ ನಿಷೇಧ ಹೇರಲಾಗಿದೆ. ಇದು ಜಾತ್ಯತೀತ ಮೌಲ್ಯಗಳಿಗಾಗಿ ದುಡಿಯುತ್ತಿರುವ ಸಂಘಟನೆಯ ಮೇಲಿನ ದಾಳಿಯಾಗಿದೆ ಎಂದು ದೀನಾದಾರ್‌ನ ಕಾರ್ಯದರ್ಶಿ ಸಯ್ಯದ್‌ ಬಾಷಾ ತಿಳಿಸಿದ್ದಾರೆ.

ಕರ್ನಾಟಕದ ಗದಗ್‌ನಲ್ಲಿ 1923 ರಲ್ಲಿ ಸ್ಥಾಪನೆಯಾದ ಸಂಘಟನೆ, ಹಿಂದೂ- ಮುಸ್ಲಿಂ ಭಾವೈಕ್ಯತೆಗಾಗಿ ದುಡಿಯುತ್ತಿದೆ. ಚರ್ಚ್‌ಗಳಲ್ಲಿನ ಬಾಂಬ್‌ ಸ್ಫೋಟಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ . ಸಂಘಟನೆಯ ಚಟುವಟಿಕೆಗಳ ಬಗ್ಗೆ ಅನುಮಾನವಿದ್ದರೆ ಯಾವುದೇ ಬಗೆಯ ತನಿಖೆ ನಡೆಸುವಂತೆ ಕೇಂದ್ರ ಗೃಹಸಚಿವ ಅದ್ವಾನಿಯವರಲ್ಲಿ ಅನೇಕ ಬಾರಿ ಮಾಡಿಕೊಂಡಿರುವ ಮನವಿಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಬಾಷಾ ಹೇಳಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X