ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಹೊಸ ಕೆಲಸಗಳನ್ನು ಸಾಕಷ್ಟು ಇಷ್ಟದಿಂದ ನಿರ್ವಹಿಸುತ್ತೀರಿ. ದಿನದ ಕೊನೆಗೆ ಸಿಗುವ ತೃಪ್ತಿಯೇ ಕೈಗೆ ಬರುವ ಲಾಭ.ವೃಷಭ : ನಿಮಗೆ ವಹಿಸಿಕೊಟ್ಟಿರುವ ಜವಾಬ್ದಾರಿಗಳ ಬಗ್ಗೆ ಅತಿ ಧಾವಂತದಿಂದ ವರ್ತಿಸಿದರೆ ಸುಮ್ಮನೇ ಸೋಲನ್ನು ಆಹ್ವಾನಿಸಿಕೊಂಡಂತೆ.
ಮಿಥುನ : ಕೈಗೆತ್ತಿಕೊಂಡ ಯಾವ ಕೆಲಸವೂ ಸರಿಯಾಗಿ ಮುಂದೆ ಹೋಗುತ್ತಿಲ್ಲ ಎಂಬ ಬಗ್ಗೆ ಇರುವ ಬೇಸರವನ್ನು ಪಕ್ಕಕ್ಕಿಟ್ಟು ಜವಾಬ್ದಾರಿಯಿಂದ ವರ್ತಿಸಿ.
ಕಟಕ : ಮನೆಯಲ್ಲಿ ಅರಳು ಹುರಿದಂತೆ ಮಾತನಾಡಿದರೆ ಎಲ್ಲ ಸಂದರ್ಭದಲ್ಲಿಯೂ ಅದು ಸೂಟ್ ಆಗುವುದಿಲ್ಲ. ಹರಟೆ ಕೆಲಸಗಳನ್ನು ಬಿಟ್ಟು ವಾಸ್ತವದ ಕಡೆಗೆ ಗಮನ ಹರಿಸಬೇಕು.
ಸಿಂಹ : ಎಲ್ಲಿದ್ದೀರಿ ಸ್ವಾಮಿ ನೀವು, ಎಷ್ಟು ಕೆಲಸಗಳು ನಿಮ್ಮ ಕಾಯುತ್ತಿವೆ. ಸೋಮಾರಿತನದೊಡನೆ ನಿಮ್ಮ ದೊಡ್ಡ ಯುದ್ಧದಲ್ಲಿ ನೀವು ಗೆಲ್ಲಬೇಕು.
ಕನ್ಯಾ : ಪೋಸ್ಟ್ ಮ್ಯಾನ್ ನಿಂದ ಇವತ್ತು ಶುಭ ಸುದ್ದಿ ನಿರೀಕ್ಷಿಸಿ. ಮನೆಯಲ್ಲಿ ಶುಭ ಕಾರ್ಯಗಳಿರುವುದರಿಂದ ಖರ್ಚಿನ ಬಗ್ಗೆ ಚಿಂತೆ ಸಲ್ಲ.
ತುಲಾ : ನಿಮ್ಮ ಅಮಾಯಕತೆಯನ್ನು ಇತರರು ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಆದ್ದರಿಂದ ತುಂಬಾ ಜಾಗ್ರತೆಯಿಂದ ಇರಬೇಕು.
ವೃಶ್ಚಿಕ : ಮುನಿಸು, ಕೋಪಗಳ ಬಗ್ಗೆ ಸ್ನೇಹಿತರು ನುರಿತವರಾಗಿದ್ದಾರೆ. ನಿಮ್ಮ ಇನ್ನಷ್ಟು ಮುಖಗಳ ಕಂಡು ಅವರೇನೂ ಬೇಸರ ಪಟ್ಟುಕೊಳ್ಳುವುದಿಲ್ಲ. ಎಷ್ಟೆಂದರೂ ಹಚ್ಚಿಕೊಂಡವರು ತಾನೇ ?
ಧನಸ್ಸು : ಲಗೇಜು ರೆಡಿ ಆಯ್ತಾ ? ಪುಣ್ಯ ಕ್ಷೇತ್ರ ಪ್ರವಾಸ ಯೋಗ ನಿಮ್ಮನರಸಿಕೊಂಡು ಬಂದಿದೆ. ಜೊತೆಗೆ ಪುತ್ರವರ್ಗದಿಂದ ಧನಲಾಭ.
ಮಕರ : ನೀವೆದುರಿಸುತ್ತಿರುವ ಪರಿಸ್ಥಿತಿಗಳು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವುದು. ಆದ್ದರಿಂದ ಧೈರ್ಯವೇ ನಿಮ್ಮ ಬಂಡವಾಳವಾಗಿರಬೇಕು.
ಕುಂಭ : ಅಪರೂಪದ ಸ್ನೇಹಿತರು ನಿಮ್ಮ ಭೇಟಿಗಾಗಿ ಹಲವು ದಿನಗಳಿಂದ ಕಾಯುತ್ತಿದ್ದಾರೆ. ಆದರೆ ನಿಮ್ಮ ನಿರಾಸಕ್ತಿಯೇ ಅವರನ್ನು ಹಿಂದಿರಿಸಿದೆ. ಇವತ್ತಾದರೂ ಮುಹೂರ್ತ ಕೂಡಿ ಬರುತ್ತದೆಯೇ ?
ಮೀನ : ಸೋತರೆ ನೋವಿರುವುದಿಲ್ಲ. ರಕ್ಷಣೆ ಇರುತ್ತದೆ ಎಂಬುದು ನಿಮಗೆ ಚೆನ್ನಾಗಿ ಗೊತ್ತು. ಆ ವಿಷಯದಲ್ಲಿ ನೀವು ಪರಿಣತರಾದ್ದರಿಂದ ಇವತ್ತು ಶುಭದಿನ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications