ಏಷ್ಯಾದ ಅತಿ ದೊಡ್ಡ ಬಡಾವಣೆಯಲ್ಲಿ ವಿಶೇಷ ಸಂಗೀತೋತ್ಸವ
ಬೆಂಗಳೂರು : ಮೇ 13ನೇ ತಾರೀಖು ಜಯನಗರದ ಜೆ. ಎಸ್. ಎಸ್. ಸಭಾಂಗಣದಲ್ಲೊಂದು ವಿಶೇಷ ಸಂಗೀತ ಉತ್ಸವ. ಐವರು ಶಾಸ್ತ್ರೀಯ ಸಂಗೀತಗಾರರ ಕಲೋತ್ಸವ ಅದು. ಅಲ್ಲಿ ಪಕ್ಕ ವಾದ್ಯ ಕಲಾವಿದರಿರುವುದಿಲ್ಲ. ಆದರೂ ಶಾಸ್ತ್ರೀಯ ಸಂಗೀತಕ್ಕೆ ಅಗತ್ಯವಾದ ವಾದನಗಳ ದನಿ ಕೇಳಲಿದೆ.
ಇದು ಮ್ಯಾಜಿಕ್ ಅಲ್ಲ . ರಾಡೆಲ್ ವಿದ್ಯುನ್ಮಾನ ಸಂಗೀತ ಉಪಕರಣ ತಯಾರಿಕಾ ಸಂಸ್ಥೆ ತಯಾರಿಸಿರುವ ವಿದ್ಯುನ್ಮಾನ ಸಂಗೀತ ಉಪಕರಣಗಳ ಶೃತಿಪೆಟ್ಟಿಗೆಯನ್ನು ಉಪಯೋಗಿಸಿ, ಸಂಗೀತ ಹೊಮ್ಮಿಸುವರು ಕಲಾವಿದರು. ಸಂಗೀತ ಕಲಾನಿಧಿ ಆರ್.ಕೆ.ಶ್ರೀಕಂಠನ್ ಸಂಗೀತೋತ್ಸವ ಉದ್ಘಾಟಿಸುವರು. ಕರ್ನಾಟಕದ ಎಂ. ಕೋದಂಡರಾಮ, ಕೇರಳದ ಶಂಕರನ್ ನಂಬೂದಿರಿ, ತಮಿಳುನಾಡಿನ ವೀಣೈ ಆರ್.ಜಯಂತಿ ಹಾಗೂ ಹೈದರಾಬಾದ್ ಸಹೋದರರಾದ ಶೇಷಾಚಾರಿ ಮತ್ತು ರಾಘವಾಚಾರಿ ಉತ್ಸವದಲ್ಲಿ ಹಾಡಲಿರುವ ಸಂಗೀತ ವಿದ್ವಾಂಸರು.
ಪ್ರತಿ ರಾಜ್ಯದ ಕಲಾವಿದರೂ ತಲಾ ಒಂದು ತಾಸು ಸಂಗೀತದ ಸವಿ ಉಣಿಸಲಿದ್ದಾರೆ. ಪಂಡಿತ್ ರವಿಶಂಕರ್, ಡಾ.ಬಾಲಮುರಳಿ ಕೃಷ್ಣ ಮೊದಲಾದವರು ವಿದ್ಯುನ್ಮಾನ ಸಂಗೀತ ಉಪಕರಣಗಳನ್ನು ಬಳಸಿ ಹಾಡಿದ್ದಾರೆ. ಈ ಶೃತಿಪೆಟ್ಟಿಗೆ ಪಕ್ಕವಾದ್ಯ ಕಲಾವಿದರ ಕೊರತೆಯನ್ನು ತುಂಬುವುದರ ಜೊತೆಗೆ ಶೃತಿಯಲ್ಲಿ ಸಂಗೀತವನ್ನು ಕೆಡಿಸದಂತೆ ರೂಪುಗೊಂಡಿದೆ. ಕಲಾವಿದ ಬಯಸುವ ಯಾವುದೇ ಶೃತಿ ಇದರಲ್ಲಿ ಲಭ್ಯ ಎಂದು ಸಂಸ್ಥೆಯ ವ್ಯವಸ್ಥಾಪಕ ದಂಪತಿಗಳಾದ ಜಿ.ರಾಜ್ ನಾರಾಯಣ್ ಮತ್ತು ರಾಧಿಕಾ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications