ಮೂಡಿಗೆರೆ : ವಿದ್ಯುದಾಲಿಂಗನಕೆ ಒಂದೇಕುಟುಂಬದ ನಾಲ್ವರ ಬಲಿ
ಮೂಡಿಗೆರೆ : ಹಬ್ಬ ಮಾಡಬೇಕಿದ್ದ ಗೌಡಹಳ್ಳಿ ಬುಧವಾರ ಹಾಡಿದ್ದು ಚರಮಗೀತೆ. ಮೊಗೆಹಬ್ಬದ ಸಂಭ್ರಮದ ಆಚರಣೆಗೆ ಮಂಗಳವಾರ ಬಿದಿರು ಕಳಲೆ ತರಲು ಹೋದ ನಾಲ್ವರು ಹೆಣವಾಗಿದ್ದರು.
ಸಿದ್ದಮ್ಮ (70), ರತ್ನಮ್ಮ (35), ಅವಿನಾಶ್(8) ಹಾಗೂ ಅಶ್ವತ್ಥ್ (6) ಇವರೇ ವಿದ್ಯುತ್ ಶಾಕ್ಗೆ ಬಲಿಯಾದ ನತದೃಷ್ಟರು. ಕಳಲೆ ತರಲು ಗೌಡಹಳ್ಳಿಯ ಅರಣ್ಯ ಪ್ರದೇಶಕ್ಕೆ ಹೊರಟ ಈ ನಾಲ್ವರ ಪೈಕಿ ರತ್ನಮ್ಮ ರಸ್ತೆಯಲ್ಲಿ ಇಳಿಬಿದ್ದಿದ್ದ ತಂತಿ ದಾಟುವಾಗ ಎಡವಿದರು. ತಂತಿಯಾಟ್ಟಿಗೆ ವಿದ್ಯುತ್ ಸ್ಪರ್ಶ ಬಲವಾಗಿ ಬಡಿಯಿತು. ಒದ್ದಾಡುತ್ತಿದ್ದ ಇವರನ್ನು ಬಿಡಿಸಲು ಸಿದ್ದಮ್ಮ ಹಾಗೂ ಮಕ್ಕಳು ಯತ್ನಿಸಿದಾಗ ಒಬ್ಬರಿಂದೊಬ್ಬರಿಗೆ ವಿದ್ಯುತ್ ಹರಿದು ಎಲ್ಲಾ ಸಾವಪ್ಪಿದರು.
ಮಂಗಳವಾರ ಬೆಳಗ್ಗೆ ಹೊರಟ ಮಂದಿ ಸಂಜೆಯಾದರೂ ಬರದಿದ್ದ ಕಾರಣ ಗ್ರಾಮದವರು ಹುಡುಕಿದಾಗ, ರಾತ್ರಿ 8 ಗಂಟೆ ಹೊತ್ತಿಗೆ ವಿದ್ಯುತ್ ತಂತಿ ಬಳಿ ನಾಲ್ವರೂ ಹೆಣವಾಗಿದ್ದರು. ಶವ ಪರೀಕ್ಷೆಯ ನಂತರ ಬುಧವಾರ ಇವರ ಅಂತ್ಯ ಸಂಸ್ಕಾರ ಮಾಡಲಾಯಿತು.
ತಾಲೂಕಿನ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆ ಮೇಲೆ ಬಿದ್ದಿರುವುದು ಇಲ್ಲಿ ಸರ್ವೇ ಸಾಮಾನ್ಯ. ಇಲಾಖೆಗೆ ದೂರಿತ್ತರೂ, ಅಧಿಕಾರಿಗಳು ಲಕ್ಷ್ಯ ಕೊಡದಿರುವುದೇ ಈ ದುರಂತಕ್ಕೆ ಕಾರಣ ಎನ್ನುತ್ತಿದ್ದಾರೆ ಗ್ರಾಮಸ್ಥರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications