Get Updates
Get notified of breaking news, exclusive insights, and must-see stories!

ಮ್ಯಾಕ್ಸ್‌ ನ್ಯೂಯಾರ್ಕ್‌ ಭಾರತಕ್ಕೆ ಕಾಲಿಟ್ಟ ಪ್ರಥಮಜೀವವಿಮಾ ಸಂಸ್ಥೆ

ಬೆಂಗಳೂರು : ವಿದೇಶೀ ಬಂಡವಾಳಕ್ಕೆ ಈಗ ವಿಮಾ ಕ್ಷೇತ್ರವೂ ಮುಕ್ತ. ಜೀವವಿಮಾ ಕ್ಷೇತ್ರದಲ್ಲಂತೂ ಭಾರತ ಅತಿ ಫಲವತ್ತಾದ ಪ್ರದೇಶ. ಇಲ್ಲಿ ಎಷ್ಟು ಬೇಕಾದರೂ ಬೆಳೆ ತೆಗೆಯಬಹುದು ಎಂಬುದು ವಿದೇಶೀ ವಿಮಾ ಕಂಪನಿಗಳ ಅನಿಸಿಕೆ.

ಈ ಹಿನ್ನೆಲೆಯಲ್ಲಿ ವಿಶ್ವದ ಅತಿ ದೊಡ್ಡ ವಿಮಾ ಕಂಪನಿಗಳಲ್ಲಿ ಒಂದಾದ ಮ್ಯಾಕ್ಸ್‌ ನ್ಯೂಯಾರ್ಕ್‌ ಜೀವವಿಮಾ ಸಂಸ್ಥೆ ಭಾರತಕ್ಕೆ ಪದಾರ್ಪಣ ಮಾಡಿದೆ. ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಏಷ್ಯಾ ಪ್ರತಿನಿಧಿ ಡೆನ್ನಿಸ್‌ ಪೆಡಿನಿ ಈ ವಿಷಯ ತಿಳಿಸಿದರು.

ಜಾಗತಿಕ ಲೆಕ್ಕಾಚಾರದಲ್ಲಿ ಭಾರತದಲ್ಲಿ ವಿಮಾ ಕ್ಷೇತ್ರಕ್ಕೆ ವಿಫುಲ ಅವಕಾಶವಿದೆ, ಇಲ್ಲಿ ತಮ್ಮ ಸಂಸ್ಥೆ ಅಭೂತಪೂರ್ವ ಯಶಸ್ಸು ಕಂಡೇ ಕಾಣುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮ್ಯಾಕ್ಸ್‌ ಇಂಡಿಯಾದೊಂದಿಗಿನ ಸಹಯೋಗದೊಂದಿಗೆ ಮ್ಯಾಕ್ಸ್‌ ನ್ಯೂಯಾರ್ಕ್‌ ಬೆಂಗಳೂರಿನಲ್ಲಿ ಈಗ ಕಾರ್ಯಾರಂಭ ಮಾಡಿದೆ.

ಅಮೆರಿಕದಲ್ಲಿ ಅತಿ ಹೆಚ್ಚು ಜೀವವಿಮೆ ಮಾಡಿಸಿರುವ ಕಂಪನಿ ಎಂಬ ಹೆಗ್ಗಳಿಕೆ ಮ್ಯಾಕ್ಸ್‌ ನ್ಯೂಯಾರ್ಕ್‌ಗೆ ಸಲ್ಲುತ್ತದೆ. ಚೀನಾದಲ್ಲಿ ಮಾಕ್ಸ್‌ ನ್ಯೂಯಾರ್ಕ್‌ಗೆ ಕೇವಲ ಒಂದೇ ಒಂದು ನಗರದಲ್ಲಿ ಮಾತ್ರ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ. ಆದರೆ, ಭಾರತದಲ್ಲಿ ಇಂತಹ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ ಎಂದರು.

ಭಾರತದ ವಿಮಾ ಕಂಪನಿಗಳ ಸಾಲಿನಲ್ಲಿ ತಮ್ಮ ಸಂಸ್ಥೆ ನಂ1 ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದ ಮ್ಯಾಕ್ಸ್‌ ನ್ಯೂಯಾರ್ಕ್‌ ಲೈಫ್‌ ವ್ಯವಸ್ಥಾಪಕ ನಿರ್ದೇಶಕ ಅನುರೂಪ್‌ ಟೋನಿ ಸಿಂಗ್‌, ತಮ್ಮ ಸಂಸ್ಥೆ ಭಾರತದ 8 ನಗರಗಳಲ್ಲಿ ಶಾಖೆ ತೆರೆದ ಮೊದಲ ಖಾಸಗಿ ವಿಮಾ ಸಂಸ್ಥೆಯಾಗಿದೆ ಎಂದೂ ಹೇಳಿದರು. ಈಗಾಗಲೇ ಸಂಸ್ಥೆ 500 ಮಂದಿ ಅರ್ಹ ಏಜೆಂಟರನ್ನೂ ನೇಮಕ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+