ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಅಕ್ಕಿ ಬಂತೋ ಇಲ್ಲವೋ ..ಭಾರತದ ಅಕ್ಕಿ ಪರದೇಶಕ್ಕೆ

By Staff
|
Google Oneindia Kannada News

ನವದೆಹಲಿ : ಭಾರತೀಯ ಆಹಾರ ನಿಗಮದ ಬಳಿ ಇರುವ ಹೆಚ್ಚುವರಿ ಸಂಗ್ರಹವನ್ನು ಕಡಿಮೆ ಮಾಡುವ ಉದ್ದೇಶದಿಂದ 30 ಲಕ್ಷ ಟನ್‌ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ಜರುಗಿದ ಕೇಂದ್ರ ಸಚಿವ ಸಂಪುಟ ಸಭೆ ಈ ತೀರ್ಮಾನವನ್ನು ಕೈಗೊಂಡಿದೆ.

ಅಂತರರಾಷ್ಟ್ರೀಯ ಬೆಲೆಯೂ ಸೇರಿದಂತೆ ವಿವಿಧ ಸಂಗತಿಗಳನ್ನು ಗಮನದಲ್ಲಿರಿಸಿಕೊಂಡು ರಫ್ತು ಮಾಡುವ ಅಕ್ಕಿಯ ಬೆಲೆಯನ್ನು ನಿರ್ಧರಿಸಲಾಗುವುದು. ಆದರೆ, ಬಡತನ ರೇಖೆಗಿಂತ ಕೆಳಗೆ ಇರುವವರಿಗೆ ವಿತರಿಸುವ ಅಕ್ಕಿಗಿಂತ ರಫ್ತು ಅಕ್ಕಿಯ ಬೆಲೆ ಯಾವುದೇ ಕಾರಣಕ್ಕೂ ಕಡಿಮೆ ಇರುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕೇಂದ್ರ ಸಚಿವ ಪ್ರಮೋದ್‌ ಮಹಾಜನ್‌ ತಿಳಿಸಿದರು.

ಪ್ರಸ್ತುತ , ದೇಶದ ಉಗ್ರಾಣಗಳಲ್ಲಿ 232 ಲಕ್ಷ ಟನ್‌ಗಳಷ್ಟು ಅಕ್ಕಿಯ ದಾಸ್ತಾನಿದ್ದು , ಇದರೊಂದಿಗೆ 113 ಲಕ್ಷ ಟನ್‌ ಕಾಪು ದಾಸ್ತಾನಿದೆ. ದೇಶದಲ್ಲಿ 114.24 ಲಕ್ಷ ಟನ್‌ಗಳಷ್ಟು ಅಕ್ಕಿ ಮಿಗಿತವಿದ್ದು , ಅಕ್ಕಿಯನ್ನು ರಫ್ತು ಮಾಡುವುದರಿಂದ ದೇಶದ ಆಂತರಿಕ ಮಾರುಕಟ್ಟೆ ಬಲಗೊಳ್ಳಲಿದೆ. ಮತ್ತಷ್ಟು ಅಕ್ಕಿ ರಫ್ತು ಮಾಡುವ ಬಗ್ಗೆ ಆಗಸ್ಟ್‌ನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಪ್ರಸಕ್ತ ವರ್ಷವನ್ನು ಪುಸ್ತಕ ವರ್ಷವಾಗಿ ಘೋಷಣೆ, ಉಗ್ರಾಣ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿಕೆ, ಸಂಘಟಿತ ಅಪರಾಧ ತಡೆಗೆ ಪೋಲೆಂಡ್‌ ಜತೆ ಒಪ್ಪಂದ ಹಾಗೂ ಹಿಮಾಚಲ ಪ್ರದೇಶದ ಎರಡು ವಿಮಾನ ನಿಲ್ದಾಣಗಳಿಗೆ ಹೊಸ ನಾಮಕರಣ ಕುರಿತಾದ ಮಹತ್ವದ ತೀರ್ಮಾನಗಳನ್ನು ಕೂಡ ಬುಧವಾರದ ಸಂಪುಟ ಸಭೆ ಕೈಗೊಂಡಿತು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X