ಏ ಮುಂಗಾರು, ನಿನ್ನ ನಂಬಿ ಗಿಡ ನೆಡುತ್ತಿದ್ದೇವೆ
ಬೆಂಗಳೂರು : ಕನ್ನಡಿಗನಿಗೊಂದು ಗಿಡದಂತೆ ಆದಿ ಚುಂಚನಗಿರಿ ಸಂಸ್ಥಾನದ ನೇತೃತ್ವದಲ್ಲಿ 5 ಕೋಟಿ ಹಣ್ಣಿನ ಗಿಡಗಳನ್ನು ನೆಡುವ ಮಹತ್ವಾಕಾಂಕ್ಷೆಯ ಯೋಜನೆ ಜೂನ್ ಮೊದಲ ವಾರದಿಂದ ಪ್ರಾರಂಭವಾಗಲಿದೆ.
ರಸ್ತೆ ಬದಿ, ಗೋಮಾಳ ಹಾಗೂ ಖಾಲಿ ಜಾಗೆಗಳಲ್ಲಿ ಗಿಡ ನೆಡಲು ಉದ್ದೇಶಿಸಲಾಗಿದ್ದು, ಸಸಿಗಳನ್ನು ನೀಡಲು ಅರಣ್ಯ ಇಲಾಖೆ ಒಪ್ಪಿಕೊಂಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಿ ಚುಂಚನಗಿರಿ ಸಂಸ್ಥಾನದ ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದರು. ಸರ್ವ ಧರ್ಮಗಳ ಗುರುಗಳನ್ನೊಳಗೊಂಡ ಕರ್ನಾಟಕ ವನ ಸಂವರ್ಧನ ಟ್ರಸ್ಟ್‌ನ ಸೋಮವಾರದ ಸಭೆ ಗಿಡ ನೆಡುವ ಕುರಿತು ರೂಪುರೇಷೆಗಳನ್ನು ಅಂತಿಮಗೊಳಿಸಿದೆ ಎಂದು ಸ್ವಾಮೀಜಿ ಹೇಳಿದರು.
ಗಿಡ ನೆಡುವ ಕುರಿತಂತೆ ಸ್ವಾಮೀಜಿ ಹೇಳಿದ ಇತರ ಮುಖ್ಯಾಂಶಗಳು
- ತುಮಕೂರು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸಸಿ ಬೆಳೆಸುವ ನರ್ಸರಿಗಳನ್ನು ಸ್ಥಾಪಿಸಲಾಗುವುದು. ರಾಜ್ಯದ ಎಲ್ಲ ಆಯುರ್ವೇದ ಕಾಲೇಜುಗಳ ಸಲಹೆ ಪಡೆದು ಔಷಧಿ ಸಸ್ಯಗಳನ್ನು ಬೆಳೆಸಲಾಗುವುದು.
- ಟಿಬೆಟಿಯನ್ನರ ಧರ್ಮಗುರು ದಲೈಲಾಮಾ ಜಯಂತಿ ಪ್ರಯುಕ್ತ ಜುಲೈ 6 ರಂದು ಹುಣಸೂರು ಬಳಿಯ ಟಿಬೇಟಿಯನ್ನರ ಕಾಲೋನಿಯಲ್ಲಿ 2 ಲಕ್ಷ ಸಸಿಗಳನ್ನು ನೆಡಲಾಗುವುದು.
- ಮಠದ ವತಿಯಿಂದ ಬಡವರಿಗೆ ವಿತರಿಸುವ ಸಲುವಾಗಿ ಒಂದೂವರೆ ಲಕ್ಷ ತೆಂಗಿನ ಕಾಯಿಗಳನ್ನು ಬಿತ್ತನೆ ಮಾಡಲಾಗಿದೆ. 5 ಲಕ್ಷ ತೆಂಗಿನ ಗಿಡಗಳನ್ನು ವಿತರಿಸಲು ಮಠ ಉದ್ದೇಶಿಸಿದೆ.
- ಸಸಿ ಬೆಳೆಸುವ ಯೋಜನೆ 5 ವರ್ಷಗಳದ್ದು . ಮೊದಲ ಮೂರು ವರ್ಷ ಸಸಿಗಳನ್ನು ನೆಡಲಾಗುವುದು, ನಂತರದ ಎರಡು ವರ್ಷಗಳಲ್ಲಿ ಸಸಿಗಳನ್ನು ಸಂರಕ್ಷಿಸಲಾಗುವುದು.
- ಬಿದಿರಿನ 2 ಕೋಟಿ ಗಿಡಗಳನ್ನು ನರ್ಸರಿ ಮಾಡಲು ಉದ್ದೇಶಿಸಿದ್ದು , ಪ್ರತಿ ಜಿಲ್ಲೆಗೆ 10 ಲಕ್ಷ ಸಸಿಗಳನ್ನು ವಿತರಿಸಲಾಗುವುದು .
- ಭಾರೀ ಪ್ರಮಾಣದಲ್ಲಿ ಗಿಡ ನೆಡುವ ಇಂಥಾ ಕಾರ್ಯಕ್ರಮ ವಿಶ್ವದಲ್ಲಿ ಇದೇ ಮೊದಲು. ಈ ಯೋಜನೆಯ ನೇತೃತ್ವವನ್ನು ಆಯಾ ಜಿಲ್ಲೆಗಳ ಮಠಾಧೀಶರು ವಹಿಸುವರು. ಈ ಕಾರ್ಯಕ್ಕೆ ಎಲ್ಲರ ಸಹಕಾರ ಅತ್ಯಗತ್ಯ.
- ಗಿಡ ನೆಡುವ ಯೋಜನೆಗೆ ರಾಜ್ಯ ಸರ್ಕಾರ ಈ ವರ್ಷದ ಆಯವ್ಯಯದಲ್ಲಿ 3 ಕೋಟಿ ನಿಗದಿಪಡಿಸಿದ್ದು , ಹಲವಾರು ಸಂಘ ಸಂಸ್ಥೆಗಳ ಹಾಗೂ ವಿದೇಶಿ ನೆರವು ಯೋಜನೆಗೆ ಬರುತ್ತಿದೆ.
- ಗಿಡ ನೆಡುವುದು ಮಾತ್ರವಲ್ಲದೆ, ರಾಜ್ಯದಲ್ಲಿ ಅಂತರ್ಜಲದ ಮಟ್ಟವನ್ನು ಏರಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications