ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಕೆಲಸದಲ್ಲಿರುವ ಏಕತಾನತೆ ಮಾಯವಾಗಿ ಸೃಜನ ಶೀಲ ಕೆಲಸಗಳನ್ನು ಆಸ್ಥೆಯಿಂದ ಮಾಡುತ್ತೀರಿ. ಅದಕ್ಕೆ ಮತ್ತೆ ತುಂಬು ಪ್ರೋತ್ಸಾಹ ಕೂಡ ದೊರಕಲಿದೆ.ವೃಷಭ : ಇವತ್ತು ನಿಮಗೆ ರಿಲ್ಯಾಕ್ಸಿಂಗ್ ಮೂಡ್ ಇರುತ್ತದೆ. ಆದರೆ ಅದಕ್ಕೆ ಅವಕಾಶ ಇರುವುದಿಲ್ಲ ಎಂಬುದು ಬೇಸರದ ಸಂಗತಿ. ಸ್ನೇಹಿತರ ಸಾಂತ್ವನ ನಿಮ್ಮ ತಟ್ಟಲಿದೆ.
ಮಿಥುನ : ಓದು, ಬರಹ ಎನ್ನುವುದನ್ನೆಲ್ಲಾ ಮೂಲೆಗೆ ತಳ್ಳಿರುವ ನಿಮಗೆ ತಕ್ಕ ಶಾಸ್ತಿಯಾಗಲಿದೆ. ಆದ್ದರಿಂದ ನೀವು ಈಗಲೇ ಚೇತರಿಸಿಕೊಳ್ಳಬೇಕು.
ಕಟಕ : ಮನೆಯಲ್ಲಿ ಸಂತೋಷದ ವಾತಾವರಣ ಇರುವುದರಿಂದ ಮನಸ್ಸು ಕೂಡ ಉಲ್ಲಾಸವಾಗಿರುತ್ತದೆ. ಕೆಲಸಗಳೆಲ್ಲ ಚಕಚಕಾಂತ ಮುಗಿದುಹೋಗುತ್ತದೆ.
ಸಿಂಹ : ಕೈ ತುಂಬಾ ಕೆಲಸಗಳು ನಿಮ್ಮ ಹೆಗಲ ಮೇಲೆ ಬಿದ್ದಿವೆ. ಅದಕ್ಕೆ ಅನುಕೂಲಕರ ವಾತಾವರಣ ಇದೆ ಎನ್ನುವುದು ಒಂದು ಪಾಸಿಟಿವ್ ಪಾಯಿಂಟ್.
ಕನ್ಯಾ : ಎಂದೋ ಹೇಳಿರುವ ಸುಳ್ಳು ನಿಮ್ಮ ಕತ್ತಿಗೆ ಬಂದಿರಬಹುದು. ಅದನ್ನು ನಿವಾರಿಸಲು ಮತ್ತೊಂದು ಸುಳ್ಳು ಹೇಳದೇ ಇದ್ದರೆ ಆಯ್ತು. ಎಲ್ಲವೂ ನಿರಾಳವಾಗುತ್ತದೆ.
ತುಲಾ : ಧನಲಾಭಕ್ಕಾಗಿ ಕಾಯುತ್ತಿರುವ ನಿಮಗೆ ಸದ್ಯಕ್ಕೆ ಶುಭ ಸುದ್ದಿ ಇಲ್ಲ. ಹಣದ ಅಡಚಣೆಯಿಂದ ಎಲ್ಲ ಕೆಲಸಗಳನ್ನೂ ಹಾಳು ಮಾಡಿಕೊಳ್ಳಬೇಡಿ.
ವೃಶ್ಚಿಕ : ಸ್ನೇಹಿತರಿಗೆ ಸಿಹಿ ಕೊಡಿಸಿದ ಖುಷಿ ನಿಮ್ಮ ಮನಸ್ಸಿನ ತುಂಬಾ ಇರುತ್ತದೆ. ಸುಳ್ಳು ಹೇಳುವುದನ್ನು ಬಿಟ್ಟು ಬಿಟ್ಟರೆ ಚೆಂದ ಎನಿಸುತ್ತದೆ ಅನ್ನುತ್ತಾರೆ ಗೆಳೆಯರು.
ಧನಸ್ಸು : ಅಪರೂಪಕ್ಕೆ ಸಿಗುವ ಸ್ನೇಹಿತರನ್ನು ಕಾಳಜಿಯಿಂದ ಮಾತನಾಡಿಸಿದರೆ ಸಾಲದು. ವರ್ತನೆಯಲ್ಲಿಯೂ ತೋರಿಸಬೇಕು. ಆಗ ನಿಮ್ಮನ್ನು ಅವರು ಮೆಚ್ಚಿಕೊಳ್ಳುತ್ತಾರೆ.
ಮಕರ : ನಿಮ್ಮ ಯೋಚನೆಗಳು ಗುಣಾತ್ಮಕವಾಗಿದ್ದರೆ, ಕೆಲಸ ಕಾರ್ಯಗಳೂ ಗುಣಾತ್ಮವಾಗಿರುತ್ತವೆ. ಆದರೆ ತೀರಾ ಸುಳ್ಳು ಹೇಳುವುದು ನಿಮ್ಮ ಕೈಲಾಗದ ವಿಷಯ.
ಕುಂಭ : ಪುತ್ರವರ್ಗದಿಂದ ಯಶಸ್ಸಿದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿನ ಆಸಕ್ತಿಗೆ ಪೂರಕ ವಾತಾವರಣವೂ ಒದಗಿ ಬರುವುದರಿಂದ ಆರಾಮವಾಗಿರುತ್ತೀರಿ.
ಮೀನ : ಧನಲಾಭವಿದೆ. ಹಾಗಂತ ಸ್ನೇಹಿತರನ್ನೆಲ್ಲಾ ಕಲೆ ಹಾಕಿಕೊಳ್ಳುವ ಗೋಜಿಗೆ ಹೋಗಬೇಡಿ. ಅಧ್ಯಾತ್ಮದತ್ತ ಒಲವಿದ್ದರೆ ಅತ್ತ ಗಮನ ಹರಿಸುವುದು ಒಳ್ಳೇದು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications