Get Updates
Get notified of breaking news, exclusive insights, and must-see stories!

ಹಾಸನದ ನಿಯಂತ್ರಣ ಕಚೇರಿ ಕಣ್ಣಿನಿಂದತಪ್ಪಿಸಿಕೊಂಡ ಜಿ ಸ್ಯಾಟ್‌-1

ಬೆಂಗಳೂರು : ಇನ್ನೇನು ಎಲ್ಲ ಸರಿಯಾಯಿತು ಅಂದುಕೊಳ್ಳುತ್ತಿರುವಾಗಲೇ, ಏಪ್ರಿಲ್‌ 18 ರಂದು ಉಡಾಯಿಸಿದ್ದ ಪ್ರಾಯೋಗಿಕ ಉಪಗ್ರಹ ಜಿಸ್ಯಾಟ್‌- 1 ಹಾಸನದ ಪ್ರಧಾನ ನಿಯಂತ್ರಣ ಕಚೇರಿಯ ಹದ್ದಿನ ಕಣ್ಣಿನ ಸಂಪರ್ಕದಿಂದ ಮಂಗಳವಾರ ತಪ್ಪಿಸಿಕೊಂಡಿದೆ.

ಭೂಸ್ಥಿರ ಉಪಗ್ರಹ ವಾಹಕ (ಜಿಎಸ್‌ಎಲ್‌ವಿ) ಮೂಲಕ ಕಕ್ಷೆಗೆ ಉಡಾಯಿಸಲಾಗಿದ್ದ ಈ ಪ್ರಾಯೋಗಿಕ ಉಪಗ್ರಹವನ್ನು ಪ್ರಸ್ತುತ ಕೆನಡಾದಲ್ಲಿರುವ ಭೂಕೇಂದ್ರ ಗಮನಿಸುತ್ತಿದ್ದು , ಸದ್ಯದಲ್ಲಿಯೇ ಹಾಸನದ ಕೇಂದ್ರದ ಹದ್ದಿನ ಕಣ್ಣಿನ ವ್ಯಾಪ್ತಿಗೆ ಉಪಗ್ರಹವನ್ನು ತರಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ. ಡಿಜಿಟಲ್‌ ರೇಡಿಯೋ ಪ್ರಸಾರಕ್ಕೆ ಹಾಗೂ ಇಂಟರ್‌ನೆಟ್‌ ಸೇವೆಗಳಿಗೆ ಈ ಉಪಗ್ರಹವನ್ನು ಬಳಸಲು ಉದ್ದೇಶಿಸಲಾಗಿತ್ತು .

ಇಂಧನ ಕೊರತೆಯಿಂದಾಗಿ ಇಸ್ರೋ ವಿಜ್ಞಾನಿಗಳಿಗೆ ಉಪಗ್ರಹ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ. ಭೂಸ್ಥಿರ ಕಕ್ಷೆಯ ಪೂರ್ವ ಅಕ್ಷಾಂಶದ 48 ಡಿಗ್ರಿಯಲ್ಲಿರುವ ಅಂತರಿಕ್ಷ ಸ್ಥಳದಲ್ಲಿ ಉಪಗ್ರಹವನ್ನು ನಿಗದಿಪಡಿಸಬೇಕಾಗಿದ್ದು , ಸುಮಾರು 10 ಕೆಜಿ ಇಂಧನದ ಕೊರತೆಯಿಂದಾಗಿ ವಿಜ್ಞಾನಿಗಳ ಉದ್ದೇಶ ಯಶಸ್ವಿಯಾಗಿಲ್ಲ .

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+