ಭಾರತದ ವಿರುದ್ಧ ದಿಗ್ಬಂಧನ ವಾಪಸ್ಸಿಗೆ ಕಾತರಿಸುತ್ತಿರುವ ಅಮೆರಿಕ
*ಅಜೀಜ್ ಹನೀಫಾವಾಷಿಂಗ್ಟನ್ : ಭಾರತದ ವಿರುದ್ಧ ಹೇರಲಾಗಿರುವ ಎಲ್ಲ ವಿಧದ ದಿಗ್ಭಂಧನಗಳನ್ನು ಶೀಘ್ರವೇ ತೆರವುಗೊಳಿಸುವ ಸೂಚನೆಗಳನ್ನು ಅಮೆರಿಕದ ಟ್ರೆಜರಿ ಕಾರ್ಯದರ್ಶಿ ಪಾಲ್ ಓ ನೀಲ್ ನೀಡಿದ್ದಾರೆಂದು ಭಾರತದ ಹಣಕಾಸು ಸಚಿವ ಯಶವಂತ ಸಿನ್ಹಾ ಹೇಳಿದ್ದಾರೆ.
ವಾಷಿಂಗ್ಟನ್‌ನಲ್ಲಿರುವ ಸಿನ್ಹಾ , ಅಂತರರಾಷ್ಟ್ರೀಯ ಆರ್ಥಿಕ ನಿಧಿ ಮತ್ತು ವಿಶ್ವಬ್ಯಾಂಕ್‌ನ ಸಭೆಗಳಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಭಾರತದ ವಿರುದ್ಧ ವಿಧಿಸಲಾಗುವ ದಿಗ್ಬಂಧನಗಳು, ಭಾರತಕ್ಕಿಂತ ಹೆಚ್ಚಾಗಿ ಅಮೆರಿಕದ ಹಿತಾಸಕ್ತಿಗೇ ಮಾರಕವಾಗಿರುತ್ತವೆ ಎನ್ನುವುದನ್ನು ಪ್ರಾರಂಭದಿಂದಲೂ ಹೇಳುತ್ತಾ ಬಂದಿದ್ದೇವೆ ಎಂದು ಸಿನ್ಹಾ ಭಾರತದ ನಿಲುವನ್ನು ಬಲವಾಗಿ ಪ್ರತಿಪಾದಿಸಿದರು.
ವಾಸ್ತವವಾಗಿ ದಿಗ್ಭಂಧನವನ್ನು ಸಾಧ್ಯವಾದಷ್ಟು ಬೇಗನೇ ತೆರವು ಮಾಡುವ ಬಗೆಗೆ ಅವರೇ ಆಸಕ್ತಿ ತೋರಿಸಿದ್ದಾರೆ ಎಂದು ಸಿನ್ಹಾ ಹೇಳಿದರು. ಏಪ್ರಿಲ್ 6 ರಂದು ಭಾರತದ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರೊಂದಿಗಿನ ಸಭೆಯಲ್ಲಿ ಸೆಕ್ರಟರಿ ಆಫ್ ದ ಸ್ಟೇಟ್ ಕೊಲಿನ್ ಪೊವೆಲ್ ಅವರು ಕೂಡ ದಿಗ್ಬಂಧನ ತೆರವು ಮಾಡುವ ವಿಷಯವನ್ನು ಪ್ರಸ್ತಾಪಿಸಿದ್ದರು.
ಭಾರತೀಯ ರಾಯಭಾರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿನ್ಹಾ , ಭಾರತದ ವಿರುದ್ಧ ದಿಗ್ಬಂಧನ ತೆರವು ಮಾಡುವ ವಿಷಯವನ್ನು ಪಾಲ್ ಓ ನೀಲ್ ಅವರೊಂದಿಗೆ ತಾವಾಗಿಯೇ ಪ್ರಸ್ತಾಪಿಸಲಿಲ್ಲ . ಆದರೆ, ಅವರ ಅಭಿಪ್ರಾಯವನ್ನು ಕೇಳಿದ ನಂತರ, ದಿಗ್ಬಂಧನ ತೆರವು ಮಾಡುವುದರಿಂದ ಉಭಯ ದೇಶಗಳ ಹಿತಾಸಕ್ತಿಗೆ ಒಳಿತಾಗುತ್ತದೆಂದು ತಿಳಿಸಿದ್ದೇನೆ ಎಂದರು. ದಿಗ್ಬಂಧನಗಳನ್ನು ತೆರವುಗೊಳಿಸುವ ಕುರಿತು ಅಮೆರಿಕ ತಳೆದಿರುವು ನಿಲುವು, ಅಲ್ಲಿನ ನೂತನ ಆಡಳಿತ ಭಾರತ ಪರ ತಾಳಿರುವ ಮನೋಭಾವವನ್ನು ತೋರಿಸುತ್ತದೆ ಎಂದು ಸಿನ್ಹಾ ಬಣ್ಣಿಸಿದರು.
(ಐಎಎನ್‌ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications