ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಹಾಸಿಗೆ ಹಿಡಿದಿರುವ ಗೆಳೆಯನಿಗೆ ಇವತ್ತು ನೀವು ಮಾಡುವ ಸಹಾಯ ಜೀವನೋತ್ಸಾಹ ತುಂಬಲಿದೆ. ಆತನ ದೇಹ ಸ್ಥಿತಿ ಸುಧಾರಿಸದಿದ್ದರೂ ನೀವು ಆತನೊಟ್ಟಿಗೆ ಕಳೆಯುವ ಕಾಲ ಅಮೂಲ್ಯವಾದದ್ದು.ವೃಷಭ : ವೃಥಾ ಕೋಪ ತರವಲ್ಲ. ಆಗಿರುವ ಅನರ್ಥ ಅರಿತು, ಅದಕ್ಕೆ ಕಾರಣ ಹುಡುಕಿ, ಸರಿ ಪಡಿಸಿಕೊಳ್ಳಿ. ಕಿರುಚಾಟದಿಂದ ಮನಸ್ಸು ಮತ್ತಷ್ಟು ಹಾಳಾಗುವುದಷ್ಟೆ.
ಮಿಥುನ : ರಾತ್ರಿಯೆಲ್ಲಾ ನಿದ್ದೆಗೆಟ್ಟು ಕೆಲಸ ಮಾಡುತ್ತಿರುವ ನಿಮಗೆ ರೆಸ್ಟ್ ಬೇಕಿದೆ. ಕೆಲಸದಲ್ಲೇ ಮುಳುಗಿ ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳೋದು ಬೇಡ.
ಕಟಕ : ಗೊಂದಲ. ಏನು ನಡೀತೀದೆ ಅಂಬೋದೇ ತಿಳಿಯೋದಿಲ್ಲ. ಮಾತು ಕಡಿಮೆ ಮಾಡಿ, ಬೇರೆಯವರ ಮಾತಿಗೆ ಕಿವಿಕೊಡಿ. ಆಗ ಎಲ್ಲಾ ತಂತಾನೇ ಅರ್ಥವಾಗುತ್ತೆ.
ಸಿಂಹ : ಆರೋಗ್ಯದ್ದೇ ಚಿಂತೆ. ಯೋಚನೆ ಬಿಡಿ. ವೈದ್ಯರು ಮಾಡಿರುವ ಪರೀಕ್ಷೆಯ ಫಲಿತಾಂಶ ಕೆಟ್ಟ ಸುದ್ದಿಯನ್ನೇನೂ ತರದು. ನಿಮ್ಮ ಆರೋಗ್ಯ ಸರಿಯಾಗಿದೆ ಎಂಬ ಕ್ಲೀನ್ ಚಿಟ್ ನಿಮ್ಮ ಕೈಗೆ ಸಿಗಲಿದೆ.
ಕನ್ಯಾ : ಮೆಚ್ಚಿದವರೊಟ್ಟಿಗೆ ಸುಂದರ ಸಂಜೆ ನಿಮ್ಮ ಡೈರಿಯಲ್ಲಿ ನಿಗದಿತವಾಗಿದೆ. ಸಿಕ್ಕಾಪಟ್ಟೆ ಮಾತನಾಡಿ ಸಂಜೆಯ ಹಾಳು ಮಾಡಿಕೊಳ್ಳಬೇಡಿ.
ತುಲಾ : ಇವತ್ತು ನೀವು ಎಲ್ಲರ ಕಣ್ಮಣಿ. ಸ್ನೇಹಿತರು, ಬಂಧುಗಳು, ನೆರೆಹೊರೆಯವರು ಎಲ್ಲರ ಬಾಯಲ್ಲೂ ನಿಮ್ಮ ಹೆಸರೇ. ನೀವು ಮಾಡಿರುವ ಸಹಾಯಕ್ಕೆ ದೊಡ್ಡ ಪ್ರತಿಫಲ ಇದು.
ವೃಶ್ಚಿಕ : ಗೆಳೆಯರಿಗೆ ಊಟ ಹಾಕಿಸಬೇಕೆನ್ನುವ ಪ್ರೋಗ್ರಾಂ ಮುಂದೆ ಹಾಕುತ್ತಲೇ ಬಂದಿದ್ದೀರಿ. ಇವತ್ತು ಅದಕ್ಕೆ ಕಾಲ ಕೂಡಿ ಬರಲಿದೆ.
ಧನಸ್ಸು : ಈಗಿರುವ ಕೆಲಸ ತೃಪ್ತಿ ತರದ ಕಾರಣ ಹೊಸ ಕೆಲಸ ಹುಡುಕಿ ಹೋರಟಿದ್ದೀರಿ. ಮೈಯೆಲ್ಲಾ ಕಣ್ಣಾಗಿರಲಿ. ಹಳ್ಳಕ್ಕೆ ಬೀಳುವ ಅಪಾಯ ಇದೆ.
ಮಕರ : ಮಕ್ಕಳಿಗೆ ನಿಮ್ಮ ಅಗತ್ಯ ಇದೆ. ಕೆಲಸದಲ್ಲೇ ಕಳೆದು ಹೋಗಿರುವ ನೀವು ಒಂದೆರಡು ದಿನ ಅವರೊಟ್ಟಿಗೆ ಕಾಲ ಕಳೆಯೋದು ಅತ್ಯವಶ್ಯಕ.
ಕುಂಭ : ಲಾಟರಿ ಹೊಡೆಯುವ ಅದೃಷ್ಟದ ಗೆರೆ ಕಾಣುತ್ತಿದೆ. ಟ್ರೆೃ ಮಾಡಿ ನೋಡಿ. ನೀವೂ ಮುಟ್ಟಿದ್ದೆಲ್ಲಾ ಚಿನ್ನ ಆಗುವ ಕಾಲ ಹತ್ತಿರವಾಗುತ್ತಿದೆ.
ಮೀನ : ಮರೀಚಿಕೆಯ ಬೆನ್ನೇರಿ ಓಡೋದನ್ನ ನಿಲ್ಲಿಸಿ. ಓದು- ಬರಹದತ್ತ ಗಮನ ಹರಿಸಿ. ಕೃಷಿ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications