ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್‌ನಲ್ಲಿ ನಿಮ್ಮ ಕೈಗೆ ಯಕ್ಷಗಾನ ಮೇಳಗಳ ಡೈರೆಕ್ಟರಿ

By Staff
|
Google Oneindia Kannada News

ಮಂಗಳೂರು : ಯಕ್ಷಗಾನ ಎಂದರೆ ಕರಾವಳಿಯ ಸೊಬಗು ಕಣ್ಮುಂದೆ ಬಂದು ನಿಲ್ಲುತ್ತದೆ. ಬಯಲಾಟ, ಮೇಳದಾಟ, ಟೆಂಟಿನಾಟ, ಹವ್ಯಾಸಿ ಬಳಗದವರು ಅಪರೂಪಕ್ಕೊಮ್ಮೊಮ್ಮೆ ಆಡುವ ಆಟ... ಹೀಗೆ.

ಯಕ್ಷಗಾನವನ್ನು ನೆಚ್ಚಿಕೊಂಡಿರುವ, ಹುಚ್ಚು ಹಿಡಿಸಿಕೊಂಡಿರುವ ಎಷ್ಟು ಗುಂಪುಗಳು ಕರಾವಳಿ ಮತ್ತು ಮಲೆನಾಡಿನಲ್ಲಿವೆ ಎಂದು ಕೇಳಿದರೆ ಎಲ್ಲಿಯೂ ಅಂಕಿ ಅಂಶಗಳು ನಿಮಗೆ ಸಿಗುವುದಿಲ್ಲ. ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನ ಮಾಡಲು ಪುತ್ತೂರಿನ ಯಕ್ಷ ಕೂಟದವರು ಮುಂದೆ ಬಂದಿದ್ದಾರೆ. ಮುಂದಿನ ದೀಪಾವಳಿ ಹೊತ್ತಿಗೆ ಯಕ್ಷಗಾನ ಮೇಳಗಳಿಗೆ ಸಂಬಂಧಿಸಿದ ಡೈರೆಕ್ಟರಿ ಒಂದು ರೆಡಿಯಾಗುತ್ತದೆ.

ಯಕ್ಷಗಾನದಲ್ಲಿ ಮತ್ತೆ ವಿಧಗಳಿವೆ. ತೆಂಕು ತಿಟ್ಟು, ಬಡಗುತಿಟ್ಟು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತುಳುತಿಟ್ಟು . ಮಹಿಳಾ ಯಕ್ಷಗಾನ ಕಲಾವಿದೆಯರ ಗುಂಪೂ ಆಗಲೇ ಯಕ್ಷವಾಹಿನಿಗೆ ಸೇರಿಕೊಂಡಿದೆ. ಶಿವಮೊಗ್ಗ, ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇರುವ ಎಲ್ಲ ತರಾವಳಿಯ ಯಕ್ಷಗಾನ ಮೇಳಗಳ ಮಾಹಿತಿ ಕಲೆ ಹಾಕಿ ಡೈರೆಕ್ಟರಿ ತರುವ ಜವಾಬ್ದಾರಿಯನ್ನು ಯಕ್ಷಕೂಟ ಹೊತ್ತುಕೊಂಡಿದೆ.

ಯಕ್ಷಕೂಟ ಈ ಬಾರಿ ದಶಮಾನೋತ್ಸವ ಆಚರಿಸುತ್ತಿದೆ. ಆ ನೆನಪಿಗಾಗಿ ಕೂಟ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ದಶಮಾನೋತ್ಸವದಲ್ಲಿ ಡೈರೆಕ್ಟರಿ ಬಿಡುಗಡೆಯಾಗುವುದು ಅಂತ ಯಕ್ಷಕೂಟದ ಸಂಯೋಜಕ ನಾರಾಯಣ ಕಾರಂತ್‌ ಹೇಳುತ್ತಾರೆ.

ನೀವೂ ಯಾವುದಾದರೂ ಮೇಳಕ್ಕೆ ಸೇರಿದವರಾ ? ಅಥವಾ ನಿಮಗೆ ಯಾವುದಾದರೂ ಮೇಳದ ಬಗ್ಗೆ ಮಾಹಿತಿ ಗೊತ್ತಿದೆಯಾ ? ಹಾಗಾದರೆ ಯಕ್ಷಕೂಟದವರಿಗೆ ಒಂದು ಪತ್ರ ಬರೆದು ಎಲ್ಲ ವಿವರ ತಿಳಿಸಿ. ಅವರು ಮಾಡುತ್ತಿರುವ ಯಜ್ಞದಲ್ಲಿ ನಿಮ್ಮ ಪಾಲಿನ ಹವಿಸ್ಸಿರಲಿ. ವಿಳಾಸ ನಾವು ಕೊಡುತ್ತೇವೆ. ಯಕ್ಷಕೂಟ c/o ರಮಾನಂದ ನೆಲ್ಲಿತ್ತಾಯ , ಕೊಂಬೆಟ್ಟು , 11-526 , ಪುತ್ತೂರು - 574 201

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X