Get Updates
Get notified of breaking news, exclusive insights, and must-see stories!

ಪೇಸ್‌- ಭೂಪತಿ ಜೋಡಿಗೆ ಅಟ್ಲಾಂಟ ಡಬಲ್ಸ್‌ ಪ್ರಶಸ್ತಿ

ಅಟ್ಲಾಂಟ : ಮೊದಲ ಶ್ರೇಯಾಂಕದ ರಿಚ್‌ ಲೀಚ್‌ (ಅಮೆರಿಕ) -ಡೇವಿಡ್‌ ಮ್ಯಾಕ್‌ಫರ್ಸನ್‌ (ಆಸ್ಟ್ರೇಲಿಯಾ) ಜೋಡಿಯನ್ನು 6-3, 7-6ರಲ್ಲಿ ಮಣಿಸುವುದರೊಂದಿಗೆ ಭಾರತದ ಲಿಯಾಂಡರ್‌ ಪೇಸ್‌- ಮಹೇಶ್‌ ಭೂಪತಿ ಜೋಡಿ ವೆರಿಜಾನ್‌ ಟೆನಿಸ್‌ ಚಾಲೆಂಜ್‌ ಡಬಲ್ಸ್‌ ಪ್ರಶಸ್ತಿಯನ್ನು ಗೆದ್ದಿದೆ.

ಕಳೆದ ವರ್ಷ ಬಾರ್ಸಿಲೋನಾದಲ್ಲಿ ಫೆರೆರಾ ಜೊತೆ ಆಡಿದ್ದ ಲೀಚ್‌ ಇದೇ ಪ್ರಶಸ್ತಿ ದಕ್ಕಿಸಿಕೊಂಡಿದ್ದರು. 1992ರಲ್ಲಿ ಇದೇ ಅಮೆರಿಕ- ಆಸ್ಟ್ರೇಲಿಯನ್‌ ಜೋಡಿ ಈ ಜಾಗದಲ್ಲಿ ಪ್ರಶಸ್ತಿ ಗೆದ್ದಿತ್ತು. ಇಂಥಾ ಸಾಧನೆಯ ಕಲಶ ಹೊತ್ತ ಆಟಗಾರರನ್ನು ಭಾನುವಾರ ಭಾರತದ ಆಟಗಾರರು ತೀವ್ರ ಹೋರಾಟದ ನಡುವೆಯೂ ಪರಾಭವಗೊಳಿಸದರು.

ಬಾರ್ಸಿಲೋನಾದಲ್ಲಿ ಭಾರತದ ಪೇಸ್‌- ಭೂಪತಿ ಜೋಡಿ ಆಡಿದ್ದು ಇದೇ ಮೊದಲು. ತಮ್ಮ ಟೆನಿಸ್‌ ಜೀವನದ 17ನೇ ಎಟಿಪಿ ಟೈಟಲ್‌ ಇದು. ಒಂದು ವಾರದಲ್ಲಿ ಒಂದೇ ಒಂದು ಸೆಟ್ಟನ್ನೂ ಸೋಲದಂತೆ ಆಡಿದ ಭಾರತೀಯ ಜೋಡಿಯ ಪ್ರದರ್ಶನ ಅತ್ಯಮೋಘ . ಈ ಜಯದಿಂದ 175 ಎಟಿಪಿ ಪಾಯಿಂಟ್ಸ್‌ ಗಳಿಸಿರುವ ಭಾರತದ ಜೋಡಿ, ವಿಶ್ವ ಡಬಲ್ಸ್‌ ರ್ಯಾಂಕಿಂಗ್‌ನ ಮೊದಲ 15 ಸ್ಥಾನಗಳ ಯಾದಿಗೆ ಸೇರಿದೆ. 26,650 ಡಾಲರ್‌ ಹಣ ಬಹುಮಾನದ ರೂಪದಲ್ಲಿ ದಕ್ಕಿದೆ. ಈ ಜೋಡಿ ಗಳಿಸಿರುವ 17-7, 15-2 ಸ್ಕೋರ್‌ ಎಟಿಪಿ ಫೈನಲ್ಸ್‌ನ ದಾಖಲೆಯೂ ಹೌದು (ಗ್ರಾಂಡ್‌ಸ್ಲಾಮ್‌ ಮತ್ತು ವಿಶ್ವ ಡಬಲ್ಸ್‌ಗಿಂತ ಕೆಳ ಮಟ್ಟದ ಟೂರ್ನಿ).

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+