ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣರಿಗೆ ಹುಟ್ಟುಹಬ್ಬದ ಶುಭಾಶಯಗಳು..

By Staff
|
Google Oneindia Kannada News

ಬೆಂಗಳೂರು : ಮೇ 1 ಕಾರ್ಮಿಕರ ದಿನವಷ್ಟೇ ಅಲ್ಲ. ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಹುಟ್ಟಿದ ದಿನ ಕೂಡ. 1932ರ ಮೇ 1ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಸೋಮನಹಳ್ಳಿಯಲ್ಲಿ ಜನಿಸಿದ ಕೃಷ್ಣ, 70ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಕೃಷ್ಣರ ಅಭಿಮಾನಿಗಳು ಅದ್ಧೂರಿಯಾಗಿ ಮುಖ್ಯಮಂತ್ರಿಗಳ ಹುಟ್ಟುಹಬ್ಬ ಆಚರಿಸಲು ಉತ್ಸುಕರಾಗಿದ್ದಾರಾದರೂ, ಎಸ್‌.ಎಂ.ಕೆ. ಮಾತ್ರ ಅತ್ಯಂತ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸುವ ನಿರ್ಧಾರ ತಳೆದಿದ್ದಾರೆ. ಈ ವಿಷಯವನ್ನು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿಯೂ ಬಿಟ್ಟರು. ಪತ್ರಕರ್ತರು ಒಂದು ದಿನ ಮುಂಚಿತವಾಗಿಯೇ ಶುಭಾಶಯವನ್ನೂ ಕೋರಿದರು.

ಕರ್ನಾಟಕದ 16ನೇ ಮುಖ್ಯಮಂತ್ರಿಯಾಗಿರುವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ , ಪ್ರತಿಪಕ್ಷಗಳ ರೀತ್ಯ ಹೈಟೆಕ್‌ ಮುಖ್ಯಮಂತ್ರಿ. ಜೂನ್‌ 5 ಮತ್ತು 6 ರಂದು ಜಾಗ-ತಿ-ಕ ಬಂಡ-ವಾ-ಳ-ಗಾ-ರ-ರ ಸಮ್ಮೇ-ಳ-ನ ನಡೆ-ಸಿ, 20 ಸಾವಿ-ರ ಕೋಟಿ-ಗೂ ಮಿಕ್ಕ ಬಂಡ-ವಾ-ಳವನ್ನು -ಕ-ರ್ನಾ-ಟ-ಕ-ಕ್ಕೆ ಹರಿ--ಸಿದ ಕೃಷ್ಣ, ಐ.ಟಿ. ಮೇಳ, ಬಯೋಟೆಕ್‌ ಮೇಳಗಳನ್ನೂ ನಡೆಸಿ, ವಿಶ್ವಾದ್ಯಂತ ಹೆಸರು ಮಾಡಿದವರು.

ಈಗ ಕೃಷ್ಣ ಕೇವಲ ಕರ್ನಾಟಕ ರಾಜ್ಯದ ನಾಯಕರಷ್ಟೇ ಅಲ್ಲ. ಕಾಂಗ್ರೆಸ್‌ ಪಕ್ಷ ಅವರನ್ನು ರಾಷ್ಟ್ರನಾಯಕ ಎಂದು ಗುರುತಿಸಿದೆ. ಚುನಾವಣೆ ಪ್ರಚಾರಕ್ಕೆ ಕೂಡ ನೆರೆ ರಾಜ್ಯಗಳಿಂದ ಕೃಷ್ಣರಿಗೆ ಬುಲಾವ್‌ ಬರುತ್ತಿದೆ. ಮೈಸೂ-ರಿ-ನ ಮಹಾ-ರಾ-ಜ ಕಾಲೇ-ಜು, -ಬೆಂ-ಗ-ಳೂ-ರಿ-ನ ಸರ್ಕಾ-ರಿ ಲಾ ಕಾಲೇ-ಜು, ಸದರ್ನ್‌ ಮೆಥೋಡಿ-ಸ್ಟ್‌ ಯೂನಿ-ವ-ರ್ಸಿ-ಟಿ- ಯುಎ-ಸ್‌-ಎ, ಜಾ-ರ್ಜ್‌ ವಾಷಿಂ-ಗ್ಟ-ನ್‌ ಯೂನಿ-ವ-ರ್ಸಿ-ಟಿಗಳ-ಲ್ಲಿ ವ್ಯಾಸಂಗ ಮಾಡಿದ ಕೃಷ್ಣ ನುರಿತ ರಾಜಕಾರಣಿಯಷ್ಟೇ ಅಲ್ಲ. ಟೆನಿಸ್‌ ಪ್ರಿಯರೂ ಹೌದು.

ಪ್ರಜಾ ಸೋಷಲಿಸ್ಟ್‌ ಪಕ್ಷದ ಸದಸ್ಯರಾಗಿ ರಾಜಕೀಯಕ್ಕೆ ಧುಮುಕಿದ ಕೃಷ್ಣ ಕಾಂಗ್ರೆಸ್‌ ಕಾರ್ಯಕರ್ತರಾಗಿ, ಲೋಕಸಭಾ ಸದಸ್ಯರಾಗಿ, ವಿಧಾನಪರಿಷತ್‌ ಸದಸ್ಯರಾಗಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ, ಸಚಿವರಾಗಿ ಅಪಾರ ಅನುಭವಗಳಿಸಿದ ಬಳಿಕ ಈಗ ಮುಖ್ಯಮಂತ್ರಿಯಾಗಿ ಯಶಸ್ಸು ಗಳಿಸಿದ್ದಾರೆ. 70ಕ್ಕೆ ಕಾಲಿಡುತ್ತಿರುವ ಎಸ್‌.ಎಂ. ಕೃಷ್ಣರಿಗೆ ಹುಟ್ಟು ಹಬ್ಬದ ಶುಭಾಶಯಗಳು.

(ಇನ್‌ಫೋ ವರದಿ)

ವಾರ್ತಾಸಂಚಯ
ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X