Get Updates
Get notified of breaking news, exclusive insights, and must-see stories!

ಅಂತರರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿರೂಪುಗೊಳ್ಳುತ್ತಿರುವ ಬಾಗೇವಾಡಿ

ನವದೆಹಲಿ : ಹನ್ನೆರಡನೆ ಶತಮಾನದ ಕ್ರಾಂತಿ ಪುರುಷ ಬಸವಣ್ಣನ ಬೇರುಗಳ ಗಮಲುಳ್ಳ ಬಾಗೇವಾಡಿಯನ್ನು 32 ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು , ಸದ್ಯದಲ್ಲಿಯೇ ಅದು ಅಂತರರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಬದಲಾಗಲಿದೆ ಎಂದು ಕರ್ನಾಟಕದ ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ಅಭಿಪ್ರಾಯ ಪಟ್ಟಿದ್ದಾರೆ.

ಬಸವ ಅಂತರರಾಷ್ಟ್ರೀಯ ಕೇಂದ್ರ ಭಾನುವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ವಚನಗಳು ಪ್ರತಿಯಾಬ್ಬರ ಬದುಕಿನ ಸಂವಿಧಾನವಾದಾಗ ಮಾತ್ರ ಬಸವಣ್ಣನ ಕನಸಿನ ರಾಜ್ಯ ಕಲ್ಯಾಣ ಸಾಧ್ಯವಾಗುತ್ತದೆ . ಬಸವಣ್ಣನವರ ವಚನಗಳನ್ನು ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ತಲುಪಿಸುವ ಉದ್ದೇಶದಿಂದ ಸರ್ಕಾರ 10 ಲಕ್ಷ ರುಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದರು.

ನುಡಿದಂತೆ ನಡೆಯುವವರು ಶರಣರೇ ಹೊರತು, ಹುಟ್ಟಿನಿಂದ(ಲಿಂಗಾಯತ ಮನೆತನದಲ್ಲಿ ಜನಿಸಿದ ಮಾತ್ರಕ್ಕೆ) ಯಾರೂ ಶರಣರಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟ ರಾಣಿ ಸತೀಶ್‌, ಪರಸ್ತ್ರೀ , ಪರಧನ ಹಾಗೂ ವಿದೇಶಿ ಮದ್ಯದ ಬಗೆಗೆ ವ್ಯಾಮೋಹ ಹೆಚ್ಚಿರುವ ಈ ದಿನಗಳಲ್ಲಿ ಬಸವಣ್ಣನವರ ಮಾತುಗಳು ಹೆಚ್ಚು ಪ್ರಸ್ತುತ ಎಂದರು.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+