Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಧರಣಿ ಆಳುವ ಯೋಗ ನೋಡಿ ನಿಮ್ಮ ಸ್ನೇಹಿತರು ನಿಮ್ಮನ್ನು ಮುತ್ತಿಕೊಳ್ಳುತ್ತಾರೆ. ಆದ್ದರಿಂದ ನಿಮ್ಮ ಭಾಗ್ಯವನ್ನು ಕಾಪಾಡಿಕೊಂಡು ಬರುವುದು ಮುಖ್ಯ.

ವೃಷಭ : ಇವತ್ತಿನ ರಿಲ್ಯಾಕ್ಸ್‌ ಮೂಡ್‌ ನಂತರ ನಿಮ್ಮ ಬಳಿ ಸದ್ಯಕ್ಕೆ ಸುಳಿಯುವುದಿಲ್ಲ. ಸಂಜೆಯೆಲ್ಲಾ ಸುಂದರವಾಗಿರುತ್ತದೆ.

ಮಿಥುನ : ನಿಮ್ಮ ಪ್ರೀತಿಯ ತಿಂಡಿ ತಿನಿಸುಗಳನ್ನೆಲ್ಲಾ ನಿಮ್ಮ ಸ್ನೇಹಿತರು ಕೊಡಿಸ್ತಾರೆ. ಸಂಜೆ ಕೂಡ ಮತ್ತೆ ಸ್ನೇಹಿತರ ಗುಂಪಿನಲ್ಲಿಯೇ ಮುಳುಗಿರುತ್ತೀರಿ.

ಕಟಕ : ನೌಕರಿ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ ಇದೆ. ಶಿಫಾರಸುಗಳ ಕುರಿತು ಮಾತುಕತೆ ನಡೆಸಲು ಇದು ಸೂಕ್ತ ದಿನ.

ಸಿಂಹ : ನಿಮ್ಮ ಕಿರಿಕಿರಿ ಮನಸ್ಸಿಗೆ ಇವತ್ತು ತಂಪೆರೆಯುವವರು ನಿಮ್ಮ ಬಳಿ ಸಾಗಿ ಬರುತ್ತಾರೆ. ನಿರೀಕ್ಷೆ ನಿಜವಾದಾಗ ಆಗುವ ಸಂತೋಷಕ್ಕಿಂತ ದೊಡ್ಡದು ಬೇರೇನಿದೆ.

ಕನ್ಯಾ : ನಿಮ್ಮ ನೌಕರಿ ಸ್ವರೂಪಕ್ಕೂ ನಿಮ್ಮ ಮನೋಭಾವಕ್ಕೂ ಸರಿ ಹೊಂದುತ್ತಿಲ್ಲ ಎಂಬ ಕೀಳರಿಮೆ ಬೇಡ. ನಿಮ್ಮ ಸೃಜನ ಶೀಲತೆಗೆ ಒಂದು ವೇದಿಕೆ ಸಿಕ್ಕಿದೆ ಎಂಬುದನ್ನು ಮರೆಯಬೇಡಿ.

ತುಲಾ : ಉತ್ಸಾಹದಲ್ಲಿ ಕೆಲಸಗಳನ್ನು ಆರಂಭಿಸುವಾಗ ಮುಂದಿನ ದಿನಗಳ ಬಗ್ಗೆ ಸರಿಯಾಗಿ ಯೋಚಿಸುವುದು ಸೂಕ್ತ. ಧನಲಾಭವಾದರೆ ಸ್ನೇಹಿತರೂ ಕೂಡ ಹತ್ತಿರದಲ್ಲಿರುತ್ತಾರೆ.

ವೃಶ್ಚಿಕ : ಹೊಸ ಖುಷಿಯಲ್ಲಿದ್ದೀರಿ. ಮನೆಯವರ ಆಕಾಂಕ್ಷೆಗಳು ನಿಮ್ಮೆದೆಯಲ್ಲಿ ನಿಚ್ಚಳವಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳನ್ನೆಲ್ಲಾ ಎದುರಿಸುವುದು ಕಷ್ಟವೇ ?

ಧನಸ್ಸು : ಮತ್ತೆ ಸಂತೋಷದ ದಿನಗಳು ನಿಮ್ಮನು ಹುಡುಕಿಕೊಂಡು ಬಂದಿವೆ. ಕಳೆದೊಂದು ನಿಧಿ ಸಿಕ್ಕಿದಷ್ಟು ಖುಷಿ ಕೊಡುವ ಸ್ನೇಹಿತರು ನಿಮ್ಮ ಭೇಟಿಯಾಗಬಹುದು.

ಮಕರ : ಕೈಗೆ ನಿಲುಕುತ್ತಿದೆ ಎಂದೇ ಅಂದುಕೊಂಡಿರುವ ವಿಷಯಗಳು ದೂರವಿದೆ ಎಂಬುದು ಗೊತ್ತಾದಾಗ ಬೇಜಾರು ಸಹಜ. ಅದರಿಂದ ವಾಸ್ತವದಲ್ಲಿ ನೀವು ಕಳೆದುಕೊಳ್ಳುವುದು ಏನೂ ಇಲ್ಲ.

ಕುಂಭ : ಮನೆಯಲ್ಲಿ ಶುಭ ಕಾರ್ಯಗಳು ನಡೆಯುವಾಗ ನೀವು ಕೈಕೊಡುವುದು ಸರಿಯಲ್ಲ. ಮನೆಯ ರಾಶಿ ಕೆಲಸಗಳನ್ನು ಹಗುರಾಗಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಿ.

ಮೀನ : ದಿನವೂ ನೋವುಂಡ ಮನಸ್ಸಿಗೆ ಇವತ್ತು ಸಾಂತ್ವನ ಸಿಗಲಿದೆ. ತುಂಬಾ ಕೆಲಸಗಳಿವೆ ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವುದು ಬೇಡ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+