ಏಷ್ಯಾದ ಶ್ರೇಷ್ಠ ನಿರ್ವಹಣಾಕಂಪನಿಯಾಗಿ ಹೊಮ್ಮಿದ ಇನ್ಫೋಸಿಸ್
ಲಂಡನ್ : ಭಾರತದ ಸಿಲಿಕಾನ್ ಕಣಿವೆಯ ಗೋಪುರ ಎಂದು ಬಿಂಬಿಸಲಾಗುತ್ತಿರುವ ಇನ್ಫೋಸಿಸ್ ಟೆಕ್ನಾಲಜೀಸ್, ಏಷ್ಯಾ ವಿಭಾಗದಲ್ಲಿ ಅತ್ಯುತ್ತಮ ನಿರ್ವಹಣಾ ಕಂಪನಿ ಎಂದು ಭಾನುವಾರ ಇಲ್ಲಿ ಪ್ರಕಟವಾಗಿರುವ ಸಮೀಕ್ಷೆಯಾಂದು ತಿಳಿಸಿದೆ.
ಫೈನಾನ್ಸ್ ಏಷ್ಯಾ ಎನ್ನುವ ಪ್ರಮುಖ ಹಣಕಾಸು ಪತ್ರಿಕೆ ನಡೆಸಿರುವ ಸಮೀಕ್ಷೆಯಲ್ಲಿ ಈ ವಿಷಯ ಹೊರಬಿದ್ದಿದೆ. ಹೆಸರಾಂತ ಅಂತರರಾಷ್ಟ್ರೀಯ ವಿಶ್ಲೇಷಕರು ಹಾಗೂ ಬಂಡವಾಳ ಹೂಡಿಕೆ ನಿರ್ಣಯಕಾರರ ಅಭಿಪ್ರಾಯಗಳನ್ನು ಸಮೀಕ್ಷೆ ಯ ಮಾನದಂಡವಾಗಿ ಪತ್ರಿಕೆ ಅನುಸರಿಸಿದೆ. ಅತ್ಯುತ್ತಮ ನಿರ್ವಹಣೆಯಲ್ಲಿ ಇನ್ಫೋಸಿಸ್ ನಂತರದ ಸ್ಥಾನವನ್ನು ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ತನ್ನದಾಗಿಸಿಕೊಂಡಿರುವುದು ವಿಶೇಷ.
ಸ್ಪರ್ಧಾತ್ಮಕ ವಾತಾವರಣಕ್ಕೆ ತಕ್ಕುದಾದ ವಾಣಿಜ್ಯ ಆಡಳಿತ, ಪಾರದರ್ಶಕತೆ, ನುರಿತ ಆಡಳಿತ ವರ್ಗ ಹಾಗೂ ವ್ಯಾಪಾರೀ ಸಂಸ್ಕೃತಿಯನ್ನು ಇನ್ಫೋಸಿಸ್ ಒಳಗೊಂಡಿದೆ ಎಂದು ಸಮೀಕ್ಷೆ ಬಣ್ಣಿಸಿದೆ. ಇವೇ ಅಂಶಗಳು ಆದಾಯ ಹಾಗೂ ಷೇರುದರಗಳನ್ನು ನಿರ್ಣಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದೂ ಸಮೀಕ್ಷೆ ಹೇಳಿದೆ.
ಅತ್ಯುತ್ತಮ ನಿರ್ವಹಣಾ ಕಂಪನಿ, ಅತ್ಯುತ್ತಮ ಹೂಡಿಕೆ ಸಂಬಂಧಗಳು, ಷೇರುದಾರರೊಂದಿಗಿನ ಬದ್ಧತೆ ಹಾಗೂ ಇ- ಕಾಮರ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಜರುಗಿತ್ತು .
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications