ಉದ್ಯಮ ನಡೆಸಲು ಬಂದವರು ಹಸಿರು ಬೆಳೆಯತ್ತಾರಾ ?
ಬೆಂಗಳೂರು : ಬೆಂಗಳೂರು ರಸ್ತೆಯ ಕಾಲುದಾರಿಯಲ್ಲಿ ನಡೆಯುವಾಗ ಉಸಿರು ಕಟ್ಟಿಸುವಷ್ಟು ಹೊಗೆ ಮುತ್ತುವುದನ್ನು ತಡೆಗಟ್ಟಲು ಮಹಾನಗರ ಪಾಲಿಕೆ ಹಸಿರು ಬೆಳೆಸುವ ಯೋಜನೆ ಕೈಗೆತ್ತಿಕೊಂಡಿತ್ತು. ರಸ್ತೆಯಿಕ್ಕೆಲದಲ್ಲಿ ವಿಶಾಲವಾದ ಹಸಿರು ಮರಗಳಿದ್ದರೆ ಎಷ್ಟು ಚಂದ ಅಲ್ವಾ ?
ಆದರೆ ಯೋಜನೆ ಫ್ಲಾಪ್ ಆಗಿದೆ. ರಸ್ತೆಯಿಕ್ಕೆಲದಲ್ಲಿ ಹಸಿರು ಬೆಳೆಸಲು ಬಹುರಾಷ್ಟ್ರೀಯ ಕಂಪೆನಿಗಳಿಗೆ ಜವಾಬ್ದಾರಿ ವಹಿಸಿಕೊಟ್ಟು ಬಿಸಿಸಿ ಕೈ ತೊಳೆದುಕೊಂಡಿತ್ತು. ಕೆಲ ತಿಂಗಳ ನಂತರ ಯೋಜನೆ ಪ್ರಗತಿ ಹೇಗಿದೆ ಎಂದು ರೌಂಡ್ಸ್‌ಗೆ ಹೊರಟ ಮಹಾನಗರ ಪಾಲಿಕೆ ಉಪ ಆಯುಕ್ತ ವೈ. ಕೆ. ಮುದ್ದು ಕೃಷ್ಣರ ಕಣ್ಣಿಗೆ ಬಿದ್ದದ್ದು ಬರೀ ಹೋರ್‌ಡಿಂಗ್‌ಗಳು. ಬಹುರಾಷ್ಟ್ರೀಯ ಕಂಪೆನಿಗಳು ಗಿಡ ನೆಟ್ಟು ಹಸಿರು ಬೆಳೆಸುವ ಕೆಲಸವನ್ನು ಮರೆತು ಬಣ್ಣ ಬಣ್ಣದ ಜಾಹೀರಾತು ಬೋರ್ಡ್‌ಗಳನ್ನು ನಿರ್ಮಿಸಿವೆ.
ತಕ್ಷಣವೇ ಮುದ್ದು ಕೃಷ್ಣ ಅವರು ಸುಮಾರು 20 ಕಂಪೆನಿಗಳಿಗೆ ಎರಡರಿಂದ ಮೂರು ವರ್ಷ ಅವಧಿಗೆ ನೀಡಿದ್ದ ಪರವಾನಿಗೆಯನ್ನು ರದ್ದು ಮಾಡಿದ್ದಾರೆ. ಹಸಿರು ಬೆಳೆಸುವ ನೆಪದಲ್ಲಿ ಕಂಪೆನಿಯ ಜಾಹೀರಾತನ್ನು ಬೇಕಾ ಬಿಟ್ಟಿಯಾಗಿ ಬರೆಯಿಸುವ ಈ ಕಂಪೆನಿಗಳು ಇನ್ನು ಮುಂದೆ ಹಸಿರು ಬೆಳೆಯುತ್ತೇವೆ ಎಂದು ಸುಳ್ಳು ಹೇಳುವಂತಿಲ್ಲ.
ಅಲಸೂರು ಕೆರೆ, ಲಾಲ್‌ಬಾಗ್ ಮುಖ್ಯ ದ್ವಾರ, ಕಂಟೋನ್‌ಮೆಂಟ್ ಪ್ರದೇಶಗಳಲ್ಲಿ ಗಿಡ ನೆಟ್ಟು ಬೆಳೆಸುವ ಜವಾಬ್ದಾರಿಯನ್ನು ಹೊಸ್ಮಾಟ್ ಮತ್ತು ಫ್ಯಾಗ್ ಇಂಡಿಯಾ ಕಂಪೆನಿಗಳಿಗೆ ವಹಿಸಲಾಗಿತ್ತು. ಆದರೆ ಫಲಿತಾಂಶ ಗುಣಾತ್ಮಕವಾಗಿಲ್ಲ.
ಕೆಲವು ಕಂಪೆನಿಗಳು ಹೋರ್‌ಡಿಂಗ್‌ಗಳನ್ನು ನೆಡುವಾಗ ಬಿಸಿಸಿ ಅನುಮತಿಯನ್ನೂ ಪಡೆಯುವ ಗೋಜಿಗೇ ಹೋಗಿಲ್ಲ. ಇದನ್ನೆಲ್ಲಾ ಗಮನಿಸಿ ಬಿಸಿಸಿ ಇನ್ನುಳಿದ ಕಂಪೆನಿಗಳ ಜೊತೆಗಿನ ಒಡಂಬಡಿಕೆ ಪತ್ರದಲ್ಲಿ ಕಡ್ಡಾಯ ನಿಯಮಗಳನ್ನು ಸೇರಿಸಿದೆ. ಇನ್ನು ಮುಂದೆ ಬಿಸಿಸಿ ಅಪ್ಪಣೆಯಿಲ್ಲದೆ ಶಾಶ್ವತ ರಚನೆಗಳನ್ನು ಕಟ್ಟುವಂತಿಲ್ಲ ಮತ್ತು ಬಿಸಿಸಿ ಅಧಿಕಾರಿಗಳು ದಿಢೀರ್ ಭೇಟಿ ನೀಡುವ ಸಂದರ್ಭದಲ್ಲಿ ಇಂತಹ ಯಾವುದೇ ಅಕ್ರಮ ಕಂಡು ಬಂದರೂ ಕಂಪೆನಿಗೆ ನೀಡಿದ ಅನುಮತಿ ರದ್ದುಪಡಿಸಲಾಗುವುದು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications