ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಕಾರು ಕೊಳ್ಳುವ ಕನಸಿಂದು ಗರಿಗಟ್ಟಲಿದೆ. ಇದು ಆರಂಭ ಅಷ್ಟೆ. ಮುಂದಿನ ದಿನಗಳು ಚಿನ್ನದವು, ಚೆನ್ನದವು.ವೃಷಭ : ಆಫೀಸಿನ ಉಸಾಬರಿಯಿಂದ ಹೊರಬಂದ ನಿಮಗೆ ನಿಂತಲ್ಲಿ ನಿಲ್ಲಲು, ಕುಂತಲ್ಲಿ ಕೂರಲು ಆಗುತ್ತಿಲ್ಲ. ಇವತ್ತಿನ ಮಟ್ಟಿಗೆ ನೀವು ಆಫೀಸಿನ ಯೋಚನೆಯನ್ನು ಮನದಿಂದ ಕಿತ್ತೆಸೆಯಿರಿ.
ಮಿಥುನ : ಸಿಕ್ಕಾಪಟ್ಟೆ ಬಳಿದು ತಿನ್ನುವುದು ತರವಲ್ಲ. ಸಿಕ್ಕಿ ಬಿದ್ದರೆ ಪೆಟ್ಟು ಗ್ಯಾರಂಟಿ. ಇಂಥಾ ಭಯದ ಸೂಚನೆಗಳು ನಿವ್ವಳವಾಗಿವೆ. ಎಚ್ಚರ.
ಕಟಕ : ಕುಂಟುತ್ತಿದ್ದ ಹೊಸ ಯೋಜನೆಗೆ ಮಿಂಚಿನ ಚಾಲನೆ. ಇನ್ನು ನೀವು ಸಿಕ್ಕಾಪಟ್ಟೆ ಬ್ಯುಸಿಯಾಗಲಿದ್ದೀರಿ.
ಸಿಂಹ : ಅಡಿಕೆ ಕತ್ತರಿಗೆ ಸಿಕ್ಕಿರುವ ನಿಮ್ಮನ್ನು ಕಾಪಾಡಲು ಆ ದೇವರಿಗೆ ಮಾತ್ರ ಸಾಧ್ಯ. ಆತನ ಮೊರೆಹೋಗಿ.
ಕನ್ಯಾ : ಬಿಸಿಲ ಬೇಗೆಯಲ್ಲಿ ವಿಪರೀತ ಸುತ್ತಾಡಿದ್ದಕ್ಕಷ್ಟೆ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿರುವುದು. ಹಠ ಬಿಟ್ಟು ವೈದ್ಯರ ಬಳಿಗೆ ಹೋಗಿ, ಎಲ್ಲಾ ಸರಿ ಹೋಗುತ್ತೆ.
ತುಲಾ : ಒಂದು ದೀರ್ಘ ನಿದ್ದೆಯಿಂದ ಎದ್ದ ಅನುಭವ. ನೀಗಿದ ಜಡ ನಿಮ್ಮನ್ನು ಚೈತನ್ಯದ ಬುಗ್ಗೆಯಾಗಿಸಲಿದೆ.
ವೃಶ್ಚಿಕ : ನಗು ಮುಖ ಮೇಲೆ, ವೇದನೆ ಒಳಗೆ. ಇದು ಸಲ್ಲ. ಒಳಗಿನ ಕೊಳಕ ಹೊರಚೆಲ್ಲಿ. ಹೃದಯ ಹಗೂರಾಗುತ್ತೆ.
ಧನಸ್ಸು : ಆಡಿದೊಂದು ಮಾತಿಗೆ ನೀವು ತಪ್ಪಿರುವುದೇ ಇಷ್ಟೆಲ್ಲಾ ಆಭಾಸಕ್ಕೆ ಕಾರಣ. ಇವಕ್ಕೆಲ್ಲಾ ಫುಲ್‌ಸ್ಟಾಪ್ ಹಾಕಬೇಕಾದರೆ ನೀವೇ ರಾಜಿಯಾಗಬೇಕು.
ಮಕರ : ಮಧುರ ನೆನಪುಗಳ ಮರುಕಳಿಕೆ ಹಾಯ್ ಅನ್ನಿಸುತ್ತದೆ. ಕೆಲಸದ ಬಿಡುವಿನ ಈ ದಿನದ ಹರಟೆ ದಿನಾ ಇದ್ದರೆಷ್ಟು ಚೆನ್ನ ಅಂದುಕೊಳ್ಳುವಿರಿ.
ಕುಂಭ : ಬಹು ದಿನಗಳಿಂದ ದೇವಸ್ಥಾನದ ಕಡೆಗೆ ತಿರುಗಿಯೂ ನೋಡಿಲ್ಲ. ಇವತ್ತು ಹೋಗಿಬನ್ನಿ . ಮನಸ್ಸು ತಿಳಿಯಾಗುತ್ತೆ.
ಮೀನ : ನಿಮ್ಮ ನೆಚ್ಚಿನ ಆಟ ಆಡುವ ಯೋಗ ಇಂದಿ-ಲ್ಲ . ಮೈಕೈ ನೋವನ್ನು ಎಳೆದುಕೊಳ್ಳುವ ಮನಸ್ಸಿದ್ದಲ್ಲಿ ಮಾತ್ರ ನುಗ್ಗಬೇಕಷ್ಟೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications