Get Updates
Get notified of breaking news, exclusive insights, and must-see stories!

ಕೈಗಾದಲ್ಲಿ ಮತ್ತೆರಡು ಪರಮಾಣು ರಿಯಾಕ್ಟರ್‌ಸ್ಥಾಪನೆ : ಕೃಷ್ಣ ಸ್ವಾಗತ

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ 2856 ಕೋಟಿ ರುಪಾಯಿ ಅಂದಾಜು ವೆಚ್ಚದಲ್ಲಿ ಮತ್ತೆರಡು ಪರಮಾಣು ರಿಯಾಕ್ಟರ್‌ಗಳನ್ನು ಸ್ಥಾಪಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಸ್ವಾಗತಿಸಿದ್ದಾರೆ.

ಕೇಂದ್ರ ಸರಕಾರ ಕೈಗೊಂಡಿರುವ ಈ ತೀರ್ಮಾನದಿಂದ ಪ್ರತಿವರ್ಷ ಹೆಚ್ಚುವರಿಯಾಗಿ 2,420 ದಶಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆ ಆಗಲಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಕೈಗಾದಲ್ಲಿ ಎರಡು ಹೊಸ ರಿಯಾಕ್ಟರ್‌ ಸ್ಥಾಪನೆಗೆ ಆಡಳಿತಾತ್ಮಕ ಮತ್ತು ಆರ್ಥಿಕ ಮಂಜೂರಾತಿ ನೀಡಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.

ಅಣು ವಿದ್ಯುತ್‌ ಸ್ಥಾವರಗಳು ಅಪಾಯಕಾರಿ ಎಂಬ ನಂಬಿಕೆ ತಪ್ಪು, ಈ ಆರೋಪ ಸತ್ಯದೂರವಾದದ್ದು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರತಿಶತ 60ರಷ್ಟು ವಿದ್ಯುತ್‌ ಅಣು ಸ್ಥಾವರಗಳಿಂದಲೇ ದೊರಕುತ್ತಿದೆ ಎಂದರು. ಅಣುಸ್ಥಾವರಗಳಿಂದ ಸುರಕ್ಷಿತವಾಗಿ ವಿದ್ಯುತ್‌ ಪಡೆಯುವ ವಿಜ್ಞಾನ -ತಂತ್ರಜ್ಞಾನವನ್ನು ಈಗ ರಾಷ್ಟ್ರ ಹೊಂದಿದೆ ಎಂದೂ ಕೃಷ್ಣ ಹೇಳಿದರು.

ಕೈಗಾದಲ್ಲಿ ಹಾಲಿ ಎರಡು ರಿಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, 220 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುತ್ತಿವೆ. ಕೇಂದ್ರದ ತೀರ್ಮಾನದ ರೀತ್ಯ ಮೂರನೆ ರಿಯಾಕ್ಟರ್‌ 2008ನೇ ಇಸವಿ ಅಕ್ಟೋಬರ್‌ ವೇಳೆಗೆ ಹಾಗೂ ನಾಲ್ಕನೇ ರಿಯಾಕ್ಟರ್‌ 2009ರ ಅಕ್ಟೋಬರ್‌ ಹೊತ್ತಿಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+