ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಲಿದೆ ನಮ್ಮ ನಿಮ್ಮ ಹಂಗೇ ಬೇಕಿಲ್ಲದ ಸ್ವ-ನಿರ್ವಹಣಾ ಕಂಪ್ಯೂಟರ್‌ !

By Staff
|
Google Oneindia Kannada News

ಸ್ಯಾನ್‌ ಫ್ರಾನ್ಸಿಸ್ಕೋ : ಹೀಗೊಂದು ಕಂಪ್ಯೂಟರ್‌. ಒಮ್ಮೆ ಹೀಗೆ ಮಾಡು ಅಂತ ಕೀಲಿ ಹೊಡೆದು ಬಿಟ್ಟರಾಯಿತು. ಮಿಕ್ಕೆಲ್ಲಾ ಕೆಲಸಗಳನ್ನ ತಂತಾನೇ ಮಾಡುತ್ತದೆ- ಬೇಕಾದ ಮಾಹಿತಿಗಳ ತಾನೇ ಅಪ್‌ಲೋಡ್‌ ಮಾಡುವುದು, ತಪ್ಪಿದ್ದಲ್ಲಿ ತಿದ್ದಿ, ಸರಿ ಮಾಡುವುದು, ಮಾಹಿತಿ ಕದಿಯಲು ಬಂದವರ (ಹ್ಯಾಕರ್ಸ್‌) ವಿರುದ್ಧ ಸೆಡ್ಡು ಹೊಡೆದು ನಿಲ್ಲುವುದು. ಇಂಥಾ ಕನಸಿನ ಕಂಪ್ಯೂಟರ್‌ ತಯಾರಿಕೆಗೆ ಕಂಪನಿಯಾಂದು ಸಜ್ಜಾಗಿದೆ.

ಇಸ್ರೇಲ್‌, ಜರ್ಮನಿ, ನ್ಯೂಯಾರ್ಕ್‌, ಟೆಕ್ಸಾಸ್‌, ಉತ್ತರ ಕ್ಯಾರೋಲಿನಾ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ಒಟ್ಟು 7 ಪ್ರಯೋಗಾಲಯಗಳು ಸಿದ್ಧವಾಗಿವೆ. ನೂರಾರು ವಿಜ್ಞಾನಿಗಳ ತಲೆ ತುಂಬಾ ತುಂಬಿರುವುದು ‘ಎಲಿಜಾ’ ಎಂಬ ಸ್ವಯಂ ಚಾಲಿತ ಕಂಪ್ಯೂಟರ್‌ ತಯಾರಿಕಾ ಯೋಜನೆ. ತನ್ನ ಕಾರ್ಪೊರೇಟ್‌ ಕಂಪ್ಯೂಟಿಂಗ್‌ ಬಜೆಟ್ಟಿನ ಕಾಲು ಪಾಲನ್ನು ಇಂಥಾ ಮಹತ್ವದ ಯೋಜನೆಗೆ ಸುರಿಯುತ್ತಿರುವ ಐಬಿಎಂ ಕಂಪನಿಗೆ ಆಲ್‌ ದಿ ಬೆಸ್ಟ್‌ .

ಕಂಪನಿಯ ಡೀಪ್‌ ಕಂಪ್ಯೂಟಿಂಗ್‌ನ ಉಪ ನಿರ್ದೇಶಕ ಟ್ಯುರೆಕ್‌ ಶುಕ್ರವಾರ ಈ ಮಹತ್ವದ ಯೋಜನೆಯನ್ನು ಮಾಧ್ಯಮಗಳಿಗೆ ತಿಳಿಸಿದರು. ಬರಬರುತ್ತಾ ಮಾಹಿತಿ ನದಿ ಸಮುದ್ರವಾಗಿ, ಅದರಲ್ಲಿ ಪ್ರವಾಹವೂ ಏಳುತ್ತಿದೆ. ಇಷ್ಟೆಲ್ಲವನ್ನೂ ಸದಾ ಕಂಪ್ಯೂಟರ್‌ ಮುಂದೆ ಕೂತೇ ನಿಭಾಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ಸದ್ಯಕ್ಕಿದೆ. ದಿನೇದಿನೇ ಕೆಲಸ ಗಣನೀಯವಾಗಿ ಹೆಚ್ಚುತ್ತಿದೆ. ಈ ಒತ್ತಡವನ್ನು ತಾನೇ ಸಂಭಾಳಿಸಬಲ್ಲ ಕಂಪ್ಯೂಟರ್‌ ಕೊಡುವುದೇ ನಮ್ಮ ಉದ್ದಿಶ್ಯ ಎಂದು ಟ್ಯುರೆಕ್‌ ಹೇಳಿದರು.

ಟ್ಯುರೆಕ್‌ ಹೇಳುವಂತೆ ಸಾಧನೆಯ ಹಾದಿಯಲ್ಲಿ ಐಬಿಯಂ ಹೆಜ್ಜೆಗಳಿವು...

ಇಲೆಕ್ಟ್ರಾನಿಕ್‌ ಲಿಜಾರ್ಡ್‌ ಎಂಬುದರ ಸಣ್ಣ ಪದ ಎಲಿಜಾ. ಕಂಪ್ಯೂಟರ್‌ ಪಠ್ಯಗಳ ಸಿದ್ಧಪಡಿಸುವುದರಲ್ಲಿ ಹೆಸರು ಮಾಡಿರುವ ರೇ ಕುರ್ಜ್‌ವೆಲ್‌ ಸೂಚಿಸಿರುವ ಹೆಸರಿದು. ಈ ಮೊದಲು ಕಂಪನಿ ಸಿದ್ಧ ಪಡಿಸಿದ ಡೀಪ್‌ ಬ್ಲೂ ಎಂಬ ಚೆಸ್‌ ಕಂಪ್ಯೂಟರ್‌ ಗ್ಯಾರಿ ಕ್ಯಾಸ್ಪರಾವ್‌ ಮಿದುಳಿಗೇ ಕೈಹಾಕಿತ್ತು.

ಬ್ಲೂ ಜೀನ್‌ ಎಂಬ ಇನ್ನೊಂದು ವಿಶೇಷ ಕಂಪ್ಯೂಟರನ್ನೂ ಕಂಪನಿಯ ವಿಜ್ಞಾನಿಗಳು ಸಿದ್ಧಪಡಿಸಿದ್ದು, ಮಾನವನ ದೇಹದಲ್ಲಿ ಪ್ರೊಟೀನ್‌ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಇದು ಪತ್ತೆ ಹಚ್ಚುವ ಕೆಲಸದಲ್ಲಿ ನಿರತವಾಗಿದೆ. ಈ ಕೆಲಸಕ್ಕೆ ಬರೋಬ್ಬರಿ ಒಂದು ವರ್ಷ ಕಂಪ್ಯೂಟರ್‌ ಚಾಲನೆಯಲ್ಲೇ ಇರಬೇಕು. ಸಾವಿರಾರು ಮೈಕ್ರೋ ಪ್ರೊಸೆಸಿಂಗ್‌ ಚಿಪ್‌ಗಳಿರುವ ಈ ಕಂಪ್ಯೂಟರ್‌ ಕೂಡ ತಂತಾನೇ ಕಾರ್ಯ ನಿರ್ವಹಿಸುತ್ತದೆ. ತೀರಾ ಅಗತ್ಯ ಬಿದ್ದಾಗ ಮಾತ್ರ ಸಹಾಯ ಕೇಳುತ್ತದೆ.

ಇಂಥಾ ಸಾಧನೆಗಳನ್ನು ಮಾಡಿರುವ ಕಂಪನಿ ಕಂಪ್ಯೂಟರ್‌ ಅಭಿವೃದ್ಧಿ ಎಂಬ ಸಾದಾ ಸಂದೇಶಕ್ಕೇ ಅಂಟಿಕೊಂಡಿಲ್ಲ. ಹೊಸತುಗಳ, ಅದರಲ್ಲೂ ಪ್ಲಗ್‌- ಅನ್‌ಪ್ಲಗ್‌ ಉಪಕರಣಗಳಿಗೂ ಮೀರಿದ ಕಾಂಪೋನೆಂಟ್‌ಗಳ ಹೊಂದಿದ ಕಂಪ್ಯೂಟರ್‌ ತಯಾರಿಕೆಗೇ ಇದರ ಒತ್ತು . ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎಲಿಜಾ ಯೋಜನೆ ಒಂದು ಮೈಲುಗಲ್ಲಾಗಲಿದೆ.

(ಎಎಫ್‌ಪಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X