ಅಮೆರಿಕ ಅಧ್ಯಕ್ಷರ ಕುಡಿದ ಮಗಳಿಗೆ ಪೊಲೀಸ್ ನೋಟೀಸು
ಆಸ್ಟಿನ್ : ಈ ಅಮೆರಿಕಾದಲ್ಲಿ ಅಧ್ಯಕ್ಷರು, ಇಲ್ಲಾ ಅವರ ಕುಟುಂಬ ಒಂದಿಲ್ಲ ಒಂದು ರೀತಿ ಸುದ್ದಿಯಾಗುವುದು ಮುಂದುವರೆದಿದೆ. ಮೊನ್ನೆ ತಾನೆ ಅಧ್ಯಕ್ಷ ಗಾದಿ ಏರಿದ ಜಾರ್ಜ್ ಡಬ್ಲ್ಯು ಬುಶ್ ಅವರ 19 ವರ್ಷದ ಮಗಳು ಜೆನ್ನಾ ಬಾರೊಂದರಲ್ಲಿ ಕುಡಿಯುತ್ತಿದ್ದಾಗ, ಪೊಲೀಸರಿಗೆ ಸಿಕ್ಕಿಬಿದ್ದು ನೋಟೀಸಿನ ಉಡುಗೊರೆ ಪಡೆದಿದ್ದಾಳೆ.
ಟೆಕ್ಸಾಸ್‌ನಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮದ್ಯ ಕುಡಿಯೋದು ನಿಷಿದ್ಧ. ಲವಲವಿಕೆಯ ಹುಡುಗಿ ಜೆನ್ನಾ ‘ಚೀರ್ಸ್ ಶಾಟ್ ಬಾರ್’ನಲ್ಲಿ ಕೂತು ಹೆಂಡ ಹೀರುತ್ತಿದ್ದಾಗ, ಕಂಡ ಪೊಲೀಸನೊಬ್ಬ ಅಧ್ಯಕ್ಷರ ಮಗಳೆಂಬ ಮುಲಾಜು ಕೊಡದೆ ಪ್ರಾಮಾಣಿಕವಾಗಿ ತನ್ನ ಕೆಲಸ ಮಾಡಿದ್ದಾನೆ. ಶುಕ್ರವಾರ ಆಕೆಗೆ ನೋಟೀಸು ಕೊಡಲಾಗಿದೆ ಎಂದು ಟೆಕ್ಸಾಸ್ ಪೊಲೀಸರು ತಿಳಿಸಿದ್ದಾರೆ.
ಆಸ್ಟಿನ್‌ನ 6ನೇ ಬೀದಿಯಲ್ಲಿ ಬಾರುಗಳ ಸಾಲಿದೆ. ನಗರದ ವಿದ್ಯಾರ್ಥಿಗಳ ಸಂಜೆಯ ಹರಟೆಯ ಪ್ರಸಿದ್ಧ ಬೀದಿ ಇದು. ಅಧ್ಯಕ್ಷರ ಮಗಳು ಕುಡಿದದ್ದು ಈ ಬೀದಿಯ ಬಾರಿನಲ್ಲೇ. ಶ್ವೇತ ಭವನದ ವಕ್ತಾರ ಸ್ಕಾಟ್ ಮೆಕ್‌ಲೀನ್ ಅವರನ್ನು ಈ ವಿಷಯದ ಬಗ್ಗೆ ಕೇಳಿದರೆ, ಇದು ಒಂದು ಸಂಸಾರದ ಖಾಸಗಿ ವಿಚಾರ ಎಂದಷ್ಟೆ ಹೇಳುತ್ತಾರೆ.
ಜೆನ್ನಾ, ಟೆಕ್ಸಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ಪಬ್ಲಿಕ್ ಇಂಟಾಕ್ಸಿಕೇಶನ್ ಪ್ರಕರಣದಲ್ಲಿ ಈಕೆಯ 18 ವರ್ಷ ವಯಸ್ಸಿನ ಸಹಪಾಠಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಾಗ, ಕಳೆದ ಫೆಬ್ರವರಿಯಲ್ಲಿ ಜೆನ್ನಾಗೂ ಕಾನೂನಿನ ಬಿಸಿ ತಟ್ಟಿತ್ತು. ಆದರೆ ಅದರಿಂದ ಆಕೆ ಪಾಠ ಕಲಿಯಲಿಲ್ಲ ಅಂತ ಕಾಣ್ತದೆ.
ಅಮೆರಿಕಾದಲ್ಲಿ ಅಧ್ಯಕ್ಷರ ಕುಟುಂಬದ ಖಾಸಗೀ ವಿಚಾರಗಳು ಬಯಲಿಗೆ ಬರುತ್ತಿರುವುದು ಇದೇ ಮೊದಲಲ್ಲ . ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಪುತ್ರಿಚೆಲ್ಸಿ ಬಗೆಗೂ ಮಾಧ್ಯಮಗಳು ಬರೆಯ ತೊಡಗಿದ್ದವು. ಅಧ್ಯಕ್ಷ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಿಲ್, ಅಧ್ಯಕ್ಷರ ಕುಟುಂಬದ ಖಾಸಗಿ ವಿಚಾರಗಳನ್ನು ಬಯಲಾಗಿಸುವುದು ತರವಲ್ಲ ಎಂದು ಹೇಳಿದ್ದರು ಕೂಡ.
ಅಂದಹಾಗೆ ಅಧ್ಯಕ್ಷರ ಮಗಳ ಈ ತಪ್ಪಿಗೆ ಜೈಲುವಾಸವೇನೂ ಇಲ್ಲ. ಸಮುದಾಯ ಸೇವೆ ಮಾಡಬೇಕು, ಇಲ್ಲವೇ ದಂಡ ಕಟ್ಟಬೇಕು.
(ಎಎಫ್‌ಪಿ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications