ಶಿಶು ಕೊಳ್ಳುವಿಕೆಗೂ, ನನಗೂಸಂಬಂಧವಿಲ್ಲ- ಅಮಲಾ ಸ್ಪಷ್ಟನೆ
ಹೈದರಾಬಾದ್ : ಮಾಧ್ಯಮಗಳಲ್ಲಿ ವರದಿಯಾಗಿರುವ ಶಿಶು ದತ್ತು ಅವ್ಯವಹಾರ ಪ್ರಕರಣಗಳಲ್ಲಿ ತಾನು ಭಾಗಿಯಾಗಿದ್ದೇನೆ ಎಂಬುದು ಹುರುಳಿಲ್ಲದ್ದು ಎಂದು ಚಿತ್ರ ನಟಿ ಅಮಲಾ ಅಕ್ಕಿನೇನಿ ಪ್ರತಿಕ್ರಿಯಿಸಿದ್ದಾರೆ.
ಗುಲ್ಬರ್ಗಾದ ಲಂಬಾಣಿ ತಾಂಡಾದಿಂದ ಹೆಣ್ಣು ಮಕ್ಕಳ ಕೊಂಡುಕೊಂಡಿದೆ ಎಂಬ ಆರೋಪ ಹೊತ್ತಿರುವ ಸೇಂಟ್ ಥೆರೆಸಾ ಅನಾಥಾಲಯದ ಅಧ್ಯಕ್ಷ ಅಥವಾ ನಿರ್ದೇಶಕ ಹುದ್ದೆಯಲ್ಲಿ ನಾನಿಲ್ಲ. ಸಲಹಾ ಮಂಡಳಿಯ 9 ಗೌರವ ಸದಸ್ಯರಲ್ಲಿ ನಾನೂ ಒಬ್ಬಳಷ್ಟೆ . ನಡೆದಿದೆ ಎನ್ನಲಾಗಿರುವ ತಪ್ಪನ್ನು ಪತ್ತೆ ಹಚ್ಚುವ ಕೆಲಸ ಆಗಬೇಕು. ಕರ್ನಾಟಕ ಪೊಲೀಸರು ಯಾವುದೇ ಸಾಕ್ಷ್ಯಗಳಿಲ್ಲದಿದ್ದರೂ ಇಬ್ಬರು ಹೆಣ್ಣು ಶಿಶುಗಳ ಕೊಂಡುಕೊಳ್ಳುವಿಕೆಯಲ್ಲಿ ನಾನೂ ಭಾಗಿ ಎಂದು ಹುಯಿಲೆಬ್ಬಿಸಿರುವುದು ಸರಿಯಲ್ಲ. ಯಾರೊಬ್ಬರ ಚಾರಿತ್ರ್ಯದ ಮೇಲೆ ಮಸಿ ಬಳಿಯುವ ಕೆಲಸ ಮಾಡುವುದು ತರವಲ್ಲ ಎಂದು ಅಮಲಾ ಟೀಕಿಸಿದ್ದಾರೆ.
ಮಾಧ್ಯಮಗಳಿಗೆ ಮತ್ತೊಂದು ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿರುವ ಸಲಹಾ ಸಮಿತಿ ಸದಸ್ಯೆ ಸಿಸ್ಟರ್ ಜೋಸೆಫೈನ್ ಗೋಪು, ಅನಾಥಾಲಯವನ್ನು ಸ್ಥಾಪಿಸಿ, ನಡೆಸಿಕೊಂಡು ಬರುತ್ತಿರುವುದು ಜೀಸಸ್ ಮೇರಿ ಜೋಸೆಫ್ ಸೊಸೈಟಿ. ಇದು ಕೇರಾದಿಂದ ಮಾನ್ಯತೆ ಪಡೆದಿದೆ. ಗುಲ್ಬರ್ಗಾದ ಲಂಬಾಣಿ ತಾಂಡಾಗಳಿಂದ ಯಾವುದೇ ಹೆಣ್ಣು ಶಿಶುಗಳನ್ನು ಸಂಸ್ಥೆ ಕೊಂಡುಕೊಂಡಿಲ್ಲ. ನ್ಯಾಯಯುತವಾದ ತನಿಖೆಗೆ ಒಳಗಾಗಲು ಸಂಸ್ಥೆ ಸಿದ್ಧವಿದೆ ಎಂದು ತಿಳಿಸಿದ್ದಾರೆ.
(ಯುಎನ್‌ಐ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications