ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಲೇ ಭಾರತ ! ಅತಿದೊಡ್ಡ ಗ್ರಾಹಕನ ಬೆನ್ನು ತಟ್ಟಿದ ವಿಶ್ವಬ್ಯಾಂಕ್‌

By Staff
|
Google Oneindia Kannada News

ನವದೆಹಲಿ : ತನ್ನ ಅತಿದೊಡ್ಡ ಗ್ರಾಹಕ ಭಾರತದ ಬಗೆಗೆ ವಿಶ್ವಬ್ಯಾಂಕ್‌ ಅತೀವ ತೃಪ್ತಿ ವ್ಯಕ್ತಪಡಿಸಿದ್ದು, ದೇಶದಲ್ಲಿ ಬಡತನದ ದರ ಇಳಿಮುಖವಾಗುತ್ತಿರುವುದಕ್ಕೆ ಸಮಾಧಾನ ವ್ಯಕ್ತಪಡಿಸಿದೆ. ಭಾರತದ ಆರ್ಥಿಕ ಬೆಳವಣಿಗೆ ಚೇತೋಹಾರಿಯಾಗಿದೆ ಎಂದು ಕೂಡ ಜಾಗತಿಕ ಬ್ಯಾಂಕ್‌ ತನ್ನ ಗ್ರಾಹಕನನ್ನು ಬಣ್ಣಿಸಿದೆ. ಅಂದಹಾಗೆ, ಕಳೆದ ಆರ್ಥಿಕ ವರ್ಷದಲ್ಲಿ 53 ಬಿಲಿಯನ್‌ ಡಾಲರ್‌ಗಳ ನೆರವನ್ನು ವಿಶ್ವಬ್ಯಾಂಕ್‌ ಭಾರತಕ್ಕೆ ನೀಡಿದೆ.

1980 ರಿಂದಲೂ ಭಾರತದ ಆರ್ಥಿಕ ಬೆಳವಣಿಗೆಯ ದರ ಅತ್ಯಂತ ವೇಗವಾಗಿದೆ. ಸಾಮಾಜಿಕ ಪ್ರಗತಿಯ ಸೂಚಿಗಳಾದ ಸಾಕ್ಷರತೆ, ಶೈಕ್ಷಣಿಕ ನೋಂದಣಿ ವಿಭಾಗಗಳಲ್ಲಿ ದೇಶ ಸಾಧನೆಯ ಮೆಟ್ಟಿಲುಗಳನ್ನು ಕ್ರಮಿಸಿದೆ. ಅದೇ ಹೊತ್ತಿನಲ್ಲಿ ಕಾಯಿಲೆ ಹಾಗೂ ಸಾವಿನ ಪ್ರಮಾಣಗಳು ಗಣನೀಯ ದರದಲ್ಲಿ ಕುಸಿದಿದೆ ಎಂದು ಜಾಗತಿಕ ಬ್ಯಾಂಕ್‌ ತಿಳಿಸಿದೆ.

ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ. 1955-56 ರಲ್ಲಿ 734 ಮಿಲಿಯನ್‌ ಡಾಲರ್‌ಗಳಿದ್ದ ಭಾರತದ ಸಾಫ್ಟ್‌ವೇರ್‌ ರಫ್ತು ಪ್ರಮಾಣ, 1999-2000 ವೇಳೆಗೆ 2.65 ಬಿಲಿಯನ್‌ ಡಾಲರ್‌ಗಳಿಗೆ ಮುಟ್ಟಿದೆ ಎಂದು ವಿಶ್ವಬ್ಯಾಂಕ್‌ ವರದಿ ತಿಳಿಸಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X