ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಕಾಡಿದ ಸಿಐಎಚ್‌ ಎಂಬ ಕಂಪ್ಯೂಟರ್‌ ಹಾಳುಗೆಡುಕ

By Staff
|
Google Oneindia Kannada News

ಬೆಂಗಳೂರು : ಹಾಸನ, ಮಂಗಳೂರು, ಮೈಸೂರು, ತಾಲ್ಲೂಕು ಕೇಂದ್ರಗಳಿಂದ ಹಿಡಿದು ವಿದೇಶಗಳ ಅನೇಕ ಕಂಪ್ಯೂಟರ್‌ಗಳಲ್ಲಿನ ದಾಖಲೆಗಳು ಏಪ್ರಿಲ್‌ 26, ಗುರುವಾರ ಅಳಿಸಿ ಹೋಗಿವೆ, ಇಲ್ಲ ಹಾಳಾಗಿವೆ.

ಇದು ಈ ವರ್ಷದ ತಲೆನೋವಲ್ಲ. 1998ರಿಂದ ಪ್ರತಿ ವರ್ಷ ಏಪ್ರಿಲ್‌ 26ರಂದು ಇದ್ದಕ್ಕಿದ್ದಂತೆ ವೈರಸ್ಸೊಂದು ಜಗದ ಅನೇಕ ಕಂಪ್ಯೂಟರ್‌ಗಳಿಗೆ ಇಂಟರ್ನೆಟ್‌ ಮೂಲಕ ಲಗ್ಗೆ ಇಟ್ಟು, ಅಧ್ವಾನ ಮಾಡಿಬಿಡುತ್ತಿದೆ. ಇದೇ ಸಿಐಎಚ್‌.

1998ರಲ್ಲಿ ತೈವಾನ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಬ್ಬ ‘ದಿ ವೈಲ್ಡ್‌’ ಎಂಬ ಹೆಸರಿನಲ್ಲಿ ಈ ವೈರಸ್ಸನ್ನು ಸ್ಥಳೀಯರಿಗೆ ಇಂಟರ್ನೆಟ್‌ನಲ್ಲಿ ಹರಿಬಿಟ್ಟ . ಇದು ಅಮೆರಿಕಾ, ರಷ್ಯಾ, ಆಸ್ಟ್ರೇಲಿಯಾ, ಇಸ್ರೇಲ್‌ ಮೊದಲಾದ ರಾಷ್ಟ್ರಗಳಿಗೆ ಹರಿದು ಕೊನೆಗೆ ಭಾರತದ ಕಂಪ್ಯೂಟರ್‌ಗಳಿಗೂ ಬಂದು ಬಿತ್ತು . ಈ ವೈರಸ್ಸನ್ನು ನಾಶ ಮಾಡುವಂಥ ಯಾವುದೇ ನೇರ ದಾರಿಯನ್ನ ನಮ್ಮ ತಂತ್ರಜ್ಞರು ಇನ್ನೂ ತೋರಿಲ್ಲ. ದಿನಾಂಕ ಬದಲಿಸುವುದು ಮೊದಲಾದ ಬೀಸೋ ದೊಣ್ಣೆಯಿಂದ ಬಾಗಿ ಪಾರಾಗುವಂಥ ಓಬಿರಾಯನ ಕಾಲದ ಉಪಾಯಗಳನ್ನು ಅನುಸರಿಸುವ ಜನರ ಕಂಪ್ಯೂಟರ್‌ಗಳು ಈ ವೈರಸ್‌ನಿಂದ ಬಚಾವಾಗಿವೆ. ಇನ್ನಾದರೂ ನಮ್ಮ ತಂತ್ರಜ್ಞರು ಈ ವೈರಸ್ಸನ್ನು ಕೊಲ್ಲಲು ಮನಸ್ಸು ಮಾಡುವರೆ?

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X