Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಸಂಭ್ರಮದ ದಿನವನ್ನು ಎದುರು ನೋಡುತ್ತಿರುವ ನಿಮ್ಮ ನಿರೀಕ್ಷೆ ಸುಳ್ಳಾಗುವುದಿಲ್ಲ. ಪುತ್ರನಿಂದ ಶ್ರೇಯಸ್ಸಿನ ವಾರ್ತೆ ಲಭಿಸಲಿದೆ.

ವೃಷಭ : ಆಫೀಸಿನಲ್ಲಿ ಮುಗಿಸಬೇಕಾದ ಅಸೈನ್‌ಮೆಂಟ್‌ ಮುಗಿಸಿದ ಆರಾಮ ನಿಮ್ಮ ಬಳಿಯಿರುತ್ತದೆ. ರಿಲ್ಯಾಕ್ಸ್‌ಗೆಂದು ಸಣ್ಣ ಪಿಕ್‌ನಿಕ್‌ಗೆ ಯಾಕೆ ಹೋಗಬಾರದು?

ಮಿಥುನ : ಬೈಗುಳ, ಜಗಳಗಳಿಂದ ನೀವಿನ್ನೂ ಪೂರ್ತಿ ಮುಕ್ತರಾಗಿಲ್ಲ . ಮನೆಯಿಂದ ನೆಮ್ಮದಿ ತರುವ ಸುದ್ದಿಗಳು ನಿಮ್ಮ ಖುಷಿಯಾಗಿರಿಸಬಲ್ಲವು.

ಕಟಕ : ಇಂದು ಉದ್ಯೋಗ ಬೇಟೆಯಾಡುವವರಿಗೆ ಶುಭವಿದೆ. ಲಕ್ಷ್ಮೀ ಆರಾಧನೆಯಿಂದ ಇಷ್ಟ ಸಿದ್ಧಿಯಾಗಲಿದೆ. ದೇವಸ್ಥಾನಕ್ಕಾದರೂ ಹೋಗುವುದನ್ನು ಮರೆಯಬೇಡಿ.

ಸಿಂಹ : ಪರೀಕ್ಷೆಗಳು ಬದುಕಿನಲ್ಲಿ ಬರುತ್ತಲೇ ಇರುತ್ತವೆ. ಗೆಲವು ಕೂಡ ಹಾಗೇ. ಆದರೆ ಈ ಬಾರಿ ನಿಮಗೆ ಸಿಗುವ ಗೆಲವು ಎಂದಿಗಿಂತ ರೋಮಾಂಚನ ತರುವಂತಹುದು.

ಕನ್ಯಾ : ಪ್ರವಾಸ ಹೊರಟು ಹೋಗಿ ಬಹಳ ದಿನಗಳಾದವು ಹೌದು. ಆದರೆ, ಸದ್ಯಕ್ಕೆ ನಿಮ್ಮ ಆರ್ಥಿಕ ಲಾಭವನ್ನು ಬೇರೆ ಯೋಜನೆಗಳಲ್ಲಿ ತೊಡಗಿಸಬೇಕಾಗಿ ಬರಬಹುದು. ನಿಧಾನ ಲಾಭವಾದರೂ ಸಂತೋಷದ ಸುದ್ದಿ ತಾನೇ?

ತುಲಾ : ಬರೀ ಕಿರಿಕಿರಿ ಮಾಡುವ ಸ್ನೇಹಿತರ ಬಳಿಯೇ ಯಾಕೆ ಹರಟುತ್ತೀರಿ. ಎಲ್ಲ ಕೆಲಸಗಳನ್ನು ಪಕ್ಕಕ್ಕಿಟ್ಟರೆ ಸೋಲುತ್ತೀರಿ ಅಲ್ವಾ?

ವೃಶ್ಚಿಕ : ಮೂಗಿನ ತುದಿಯಲ್ಲಿಯೇ ಇರುವ ಸಿಟ್ಟನ್ನು ಆಚೆಗೆ ದೂಡದಿದ್ದರೆ ಚೆಂದದ ದಿನವನ್ನು ಕಳೆದುಕೊಳ್ಳುತ್ತೀರಿ. ಕಾಯುತ್ತಿರುವ ಸ್ನೇಹಿತರಿಗೆ ನಗು ಮುಖ ತೋರಿಸಿ.

ಧನಸ್ಸು : ನಿರ್ಧಾರಗಳನ್ನು ಮಾಡುವುದರಲ್ಲಿ ಎಷ್ಟು ನಿಸ್ಸೀಮರೋ, ಅದನ್ನು ಮುರಿಯುವುದರಲ್ಲಿಯೂ ಅಷ್ಟೇ ನಿಸ್ಸೀಮರು ನೀವು ಎಂಬುದು ಸ್ನೇಹಿತರಿಗೆ ತಿಳಿದರೆ ಬೇಜಾರಾಗುತ್ತಾರೆ.

ಮಕರ : ಕನಸುಗಳು ಅಪರೂಪಕ್ಕೆ ಮಾತ್ರ ನನಸಾಗುವುದು. ಅವುಗಳನ್ನು ಯಾರೋ ಕಿತ್ತು ಕೊಳ್ಳುತ್ತಾರೆ ಎಂಬ ಭಯದಲ್ಲಿ ಹುರುಳಿಲ್ಲ.

ಕುಂಭ : ಹುಚ್ಚು ಆವೇಶಗಳಿಗೆಲ್ಲಾ ನೀವು ಬಲಿಯಾದರೆ ಹೇಗೆ ? ಇವತ್ತು ಸಂಜೆ ಅಪರೂಪದ ಸ್ನೇಹಿತರನ್ನು ಭೇಟಿಯಾಗುವ ಯೋಗವಿದೆ. ಶುಭ ತಾನೇ?

ಮೀನ : ಅಕ್ಕರೆ ಸಕ್ಕರೆ ನಿಮ್ಮ ಬಳಿಯೂ ಇದೆ ಎಂಬುದನ್ನು ಕಂಡು ನಿಮ್ಮ ಬಂಧುಗಳು ಖುಷಿ ಪಡುತ್ತಾರೆ. ನಿಮ್ಮ ಪ್ಲಾನ್‌ಗಳು ಕಾರ್ಯರೂಪಕ್ಕೆ ಬರುವುದು ತಡವಾದರೂ ಅವು ಸುಂದರವಾಗಿರುತ್ತವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+