ಶ್ರೀಮತಿ ಶ್ರೀ ಅಮಿತಾಭ್ : ಬಚ್ಚನ್151 ದಶಲಕ್ಷ ರು. ತೆರಿಗೆ ಬಾಕಿ !
ನವದೆಹಲಿ : ಬಿಗ್ ಬೀ ಅಮಿತಾಭ್ ಬಚ್ಚನ್ ಹಾಗೂ ಇವರ ಪತ್ನಿ ಜಯಾ ಆದಾಯ ತೆರಿಗೆ ಇಲಾಖೆಗೆ 15 ಕೋಟಿ 10 ಲಕ್ಷ ರುಪಾಯಿ ಬಾಕಿ ಕಟ್ಟಬೇಕಿದೆ !
ಲೋಕಸಭೆಯಲ್ಲಿ ಶುಕ್ರವಾರ ಪ್ರಶ್ನೆಯಾಂದಕ್ಕೆ ಉತ್ತರಿಸುತ್ತಾ ಕೇಂದ್ರ ವಿತ್ತ ಖಾತೆಯ ರಾಜ್ಯ ಸಚಿವ ಜಿ.ಎನ್.ರಾಮಚಂದ್ರನ್ ಈ ವಿಷಯ ತಿಳಿಸಿದರು. ಅಮಿತಾಭ್ 126.72 ದಶಲಕ್ಷ ಹಾಗೂ ಜಯಾ 24.35 ದಶಲಕ್ಷ ರುಪಾಯಿ ತೆರಿಗೆ ಕಟ್ಟಬೇಕಿದೆ. ನಟ ಶಾರುಖ್‌ಖಾನ್ ತೆರಿಗೆ ಇಲಾಖೆಗೆ 27.14 ದಶಲಕ್ಷ ರುಪಾಯಿ ಬಾಕಿ ಪಾವತಿ ಮಾಡಬೇಕಿದೆ ಎಂದು ಹೇಳಿದರು.
ಸುಮಾರು 94 ಸಿನಿಮಾ ನಟ- ನಟಿಯರು, ನಿರ್ಮಾಪಕ ಹಾಗೂ ನಿರ್ದೇಶಕರಿಂದ ತೆರಿಗೆ ಇಲಾಖೆಗೆ ಬಾಕಿ ಕಟ್ಟಬೇಕಿದೆ. ಈ ಪೈಕಿ ಬಸಂತ್‌ಕುಮಾರ್ ಪಾಟೀಲ್ 30.71 ದಶಲಕ್ಷ, ಸುಭಾಶ್ ಘಾಯ್ 7.84 ದಶಲಕ್ಷ , ಎಂ.ಸಿ.ಬೋಕಾಡಿಯಾ 7.61 ದಶಲಕ್ಷ, ಯಶ್‌ರಾಜ್ ಚೋಪ್ರ 10.21 ದಶಲಕ್ಷ ರುಪಾಯಿ ಬಾಕಿಯನ್ನು ತೆರಿಗೆ ಇಲಾಖೆಗೆ ಕಟ್ಟಬೇಕಿದೆ. ಬಡ್ಡಿ ಸಮೇತ ತೆರಿಗೆ ವಸೂಲಾತಿ ಪ್ರಕ್ರಿಯೆ ಚುರುಕಾಗಿದ್ದು, ಕ್ಷಿಪ್ರವಾಗಿ ನೋಟೀಸುಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಗವಾಸ್ಕರ್, ಕಪಿಲ್ ಅಮರೀಶ್‌ಪುರಿ ವಿರುದ್ಧ ಫೆರಾ ಪ್ರಕರಣ
ಫೆರಾ ಉಲ್ಲಂಘನೆಗೆ ಸಂಬಂಧಿಸಿದಂತೆ ಸುಮಾರು ಏಳು ಮಂದಿ ಸಿನಿಮಾದವರು ಹಾಗೂ ಕ್ರಿಕೆಟಿಗರ ವಿರುದ್ಧ ಸರ್ಕಾರ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದೆ. ಈ ಪೈಕಿ ಗವಾಸ್ಕರ್, ಕಪಿಲ್ ದೇವ್ ಹಾಗೂ ನಟ ಅಮರೀಶ್ ಪುರಿ ಪ್ರಮುಖರು. ಚಿತ್ರನಟ ಕಿಶನ್ ಕುಮಾರ್, ಕ್ರಿಕೆಟಿಗರಾದ ನವಜೋತ್ ಸಿಂಗ್ ಸಿಧು ಹಾಗೂ ಮನೋಜ್ ಪ್ರಭಾಕರ್ ಅವರ ವಿರುದ್ಧ ಕೂಡ ಫೆರಾ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಅಜರುದ್ದೀನ್, ಕಪಿಲ್ ದೇವ್, ಅಜಯ್ ಜಡೇಜಾ, ಮನೋಜ್ ಪ್ರಭಾಕರ್, ಅಜಯ್ ಶರ್ಮ, ನಿಖಿಲ್ ಚೋಪ್ರಾ ಹಾಗೂ ನವಜೋತ್ ಸಿಧು ಅವರ ತಾಣಗಳಲ್ಲಿ ತೆರಿಗೆ ಇಲಾಖೆ ನಡೆಸಿದ ಹುಡುಕಾಟದ ನಂತರವೇ ಫೆರಾ ಪ್ರಕರಣ ದಾಖಲಿಸಿಕೊಂಡಿರುವುದು ಎಂದು ಸಚಿವರು ಲಿಖಿತ ಪ್ರಶ್ನೆಯಾಂದಕ್ಕೆ ಉತ್ತರ ಕೊಟ್ಟರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications