ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಏನೆಲ್ಲಾ ಇದ್ದರೂ ಮನಸ್ಸಿಗೆ ಹತ್ತಿರವಿದ್ದ ಸ್ನೇಹಿತರು ಇಲ್ಲವೆಂದರೆ, ಎಲ್ಲ ಸಂತೋಷಗಳೂ ಸಣ್ಣದೆನಿಸುತ್ತವೆ. ಆದರೆ ಆಕಾಶ ಕಳಚಿ ಬೀಳುವಂತಹುದೇನೂ ಆಗಿಲ್ಲ ಎಂಬ ನಿಜವನ್ನು ಮರೆತು ಬಿಡಬೇಡಿ.ವೃಷಭ : ಸಿಟ್ಟು ಬೇಸರಗಳಿಗೆಲ್ಲಾ ಇದು ಕಾಲವಲ್ಲ, ಹರಿ ಅಪ್, ನಿಮ್ಮ ಅದೃಷ್ಟ ಇರುವುದು ಮಾರ್ಕೆಟಿಂಗ್ ಕ್ಷೇತ್ರದಲ್ಲಿ . ಆದ್ದರಿಂದ ಮನೆಯ ವ್ಯವಹಾರಗಳೆಲ್ಲಾ ಸದ್ಯಕ್ಕೆ ಪಕ್ಕದಲ್ಲಿರಲಿ.
ಮಿಥುನ : ನಿಮಗೇ ಅರ್ಥವಾಗದ ಸಮಸ್ಯೆಗಳ ಬಗ್ಗೆಯೆಲ್ಲಾ ಚಿಂತಿಸಲು ಇದು ಸಮಯ ಅಲ್ಲ. ಹೊಡೆಯುವ ದಾರಿಗೆ ಹೋಗುವ ಬಂಡಿಯ ಸಾಮರ್ಥ್ಯ ಕಡಿಮೆ ಆಗದಿದ್ದರೆ ಆಯ್ತು.
ಕಟಕ : ನೀವು ಕಣ್ಣಿಟ್ಟಿರುವುದು ಒಳ್ಳೆಯ ಪ್ರೊಜೆಕ್ಟ್‌ಗೇ. ಆದರೆ ನಿಮ್ಮ ವಿರೋಧಿಗಳು ಹಿಮಾಲಯದಂತೆ ನಿಮಗೆ ಅಡ್ಡ ನಿಂತಿದ್ದಾರಲ್ವಾ?
ಸಿಂಹ : ಪ್ರೀತಿ ಪ್ರೇಮಗಳ ವಿಷಯದಲ್ಲಿ ನೀವು ಸೋಲುತ್ತಿದ್ದರೆ, ಸದ್ಯಕ್ಕೆ ಆ ವಿಷಯವನ್ನು ಕೈಬಿಟ್ಟು ಬೇರೆ ಕೆಲಸಗಳತ್ತ ಗಮನ ಕೊಟ್ಟರಾಯ್ತು.
ಕನ್ಯಾ : ಧನ ಲಾಭವೆಂಬುದು ನಿಮ್ಮ ಚಾಲಾಕಿತನವನ್ನು ಅವಲಂಬಿಸಿ ಬರುತ್ತದೆ. ಮನೆಯಲ್ಲಿ ಸಿಗುವ ಬಿಟ್ಟಿ ಸಲಹೆಯ ಮೂಲೆಯಲ್ಲೂ ಸ್ವಲ್ಪ ಹುರುಳಿರಬಹುದು.
ತುಲಾ : ಬೈಗುಳಗಳ ನಿರೀಕ್ಷೆ ಮಾಡಿ, ದಿನದ ಕೊನೆಗೆ ಅವಾಕ್ಕಾಗುತ್ತೀರಿ. ನೀವು ಪೂರೈಸುತ್ತಿರುವ ಕೆಲಸಗಳಲ್ಲಿ ಆಸ್ಥೆಯಿದ್ದಲ್ಲಿ ಸೋಲು ಹೇಗೆ ತಾನೇ ಹತ್ತಿರ ಸುಳಿಯುತ್ತದೆ?
ವೃಶ್ಚಿಕ : ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಯೋಗ ನಿಮ್ಮ ಬಳಿಗೆ ಬಂದಿದೆ. ಹಾಗೇ ಬುದ್ಧಿ ಹೇಳಿಸಿಕೊಳ್ಳುವುದಕ್ಕೆ, ಚಿಂತನೆಗೆ ಇದು ಸಕಾಲ.
ಧನಸ್ಸು : ಲೆಕ್ಕಾಚಾರಗಳು, ಅಂದಾಜುಗಳು ಎಲ್ಲ ಕಾಲದಲ್ಲಿಯೂ ನಿಜವಾಗಿರುವುದಿಲ್ಲ. ಅದಕ್ಕೆಲ್ಲಾ ಹೆಚ್ಚು ಬೇಜಾರು ಮಾಡಿಕೊಳ್ಳಬಾರದು. ಮಕ್ಕಳ ಆರೈಕೆಯತ್ತ ಗಮನ ಕಡಿಮೆಯಾಗದಿರಲಿ.
ಮಕರ : ನಿಮಿಷಕ್ಕೆಲ್ಲಾ ನೀವು ನೋವು ಬೇಜಾರುಗಳನ್ನು ಮರೆಸುವ, ಮುಗಿಸುವ ಪ್ರಕ್ರಿಯೆಯನ್ನು ಮತ್ತೆ ಚಾಲ್ತಿಗೆ ತರುತ್ತೀರಿ. ಹೆಚ್ಚಿನ ಲಾಭವಿಲ್ಲದಿರಬಹುದು.
ಕುಂಭ : ಇವತ್ತೆಲ್ಲಾ ಸರಸ್ವತಿ ನಿಮಗೊಲಿದಿರುತ್ತಾಳೆ. ಆದರೂ ಸುಮ್ಮಾ ಸುಮ್ಮನೇ ಜಗಳಗಳನ್ನು ಹುಟ್ಟು ಹಾಕುವುದನ್ನು ಕಂಪಲ್‌ಸರಿ ಕಡಿಮೆ ಮಾಡಬೇಕು.
ಮೀನ : ನಿಮ್ಮ ಸಿಹಿ ಮುಖ ಕಂಡು ಕಾಲ ಬಹಳಾಯ್ತು ಎಂದುಕೊಂಡು ಖುಷಿಯಾಗಿರುವ ಗೆಳೆಯರ ಎದೆಗೆ ಕಲ್ಲು ಹಾಕುವುದಿಲ್ಲ ತಾನೇ ? ಮನೆಯಲ್ಲಿನ ಜವಾಬ್ದಾರಿಗಳು ನಿಮ್ಮನ್ನು ಹಣ್ಣಾಗಿಸುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications