Get Updates
Get notified of breaking news, exclusive insights, and must-see stories!

ತಿಂಗಳೊಳಗೆ ಮಾಹಿತಿ ತಂತ್ರಜ್ಞಾನಕಾರ್ಯಪಡೆ ಸಿದ್ಧ - ಮಹಾಜನ್‌

ನವದೆಹಲಿ : ಮಾಹಿತಿ ತಂತ್ರಜ್ಞಾನವನ್ನು ಸಾಮಾನ್ಯ ಮನುಷ್ಯನಿಗೂ ತಲುಪಿಸಲು ಸರಕಾರವು ‘ಮಾಹಿತಿ ತಂತ್ರಜ್ಞಾನ ಕಾರ್ಯಪಡೆ’ ಯನ್ನು ಅತಿ ಶೀಘ್ರದಲ್ಲಿಯೇ ಆರಂಭಿಸುವುದು ಎಂದು ಕೇಂದ್ರ ಮಾಹಿತಿತಂತ್ರಜ್ಞಾನ ಖಾತೆ ಸಚಿವ ಪ್ರಮೋದ್‌ ಮಹಾಜನ್‌ ಹೇಳಿದ್ದಾರೆ.

ಇನ್ನು ಒಂದು ತಿಂಗಳೊಳಗೆ ಐಟಿ ಕಾರ್ಯಪಡೆ ಸಿದ್ಧವಾಗಲಿದೆ ಎಂದು ಅವರು ಗುರುವಾರ ರಾಜ್ಯ ಸಭೆಯಲ್ಲಿ ಕಾಂಗ್ರೆಸ್‌ನ ಅಂಬಿಕಾ ಸೋನಿ ಅವರಿಗೆ ತಿಳಿಸಿದರು. ವಿತ್ತ ಸಚಿವ ಯಶವಂತ ಸಿನ್ಹ ಅವರ ನೇತೃತ್ವದಲ್ಲಿ ಐಟಿ ಮತ್ತು ಟೆಲಿಕಾಂ ಸಚಿವರುಗಳ ಗುಂಪು ಕೆಲಸ ಮಾಡುತ್ತಿದೆ. ಖಾಸಗಿಯವರು ಗ್ರಾಮೀಣ ಪ್ರದೇಶದವರಿಗೂ ಟೆಲಿಕಾಂ ಸಂಪರ್ಕಗಳನ್ನು ಒದಗಿಸಲು ಸಹಾಯವಾಗುವಂತೆ ಕಡ್ಡಾಯ ನೀತಿಯಾಂದನ್ನು ರೂಪಿಸಲಾಗುವುದು ಎಂದರು.

ದಕ್ಷಿಣ ಭಾರತ ರಾಜ್ಯಗಳಿಂದ ಮಾಹಿತಿ ತಂತ್ರಜ್ಞಾನ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಉತ್ತರ ಭಾರತ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಐಟಿಯನ್ನು ಪಸರಿಸುವ ಮೂಲಕ ಭಾರತವನ್ನು ಐಟಿ ಸುಪರ್‌ ಪವರ್‌ ದೇಶವನ್ನಾಗಿ ಮಾಡಬಹುದು ಎಂದು ಮಹಾಜನ್‌ ಹೇಳಿದರು. ಪ್ರಸ್ತುತ 220 ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದಾಯ ಮಾಹಿತಿ ಕೇಂದ್ರಗಳನ್ನು ಈಶಾನ್ಯ ರಾಜ್ಯಗಳಲ್ಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+