ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರು ನಾವು, ಚಿನ್ನದ ಹಕ್ಕಿಗಳು,ಚಂದ್ರನ ಶೋಧಿಸ ಹೊರಟಿಹೆವು

By Staff
|
Google Oneindia Kannada News

*ಅಂಕುಶ್‌ ಸೈಕಿಯಾ

ನವದೆಹಲಿ : ಜಿಎಸ್‌ಎಲ್‌ವಿಯ ಯಶಸ್ವೀ ಉಡಾವಣೆಯ ನಂತರ ಇದೀಗ ಚಂದ್ರನತ್ತ ಮಾನವ ರಹಿತ ಅಂತರಿಕ್ಷ ಯಾನ ಕೈಗೊಳ್ಳುವ ಯೋಜನೆಯ ಬಗ್ಗೆ ಇಸ್ರೋ ಪರಿಶೀಲಿಸುತ್ತಿರುವಾಗಲೇ ಅನಿವಾಸೀ ಭಾರತೀಯರ ಪ್ರಶಂಸೆಗಳು ಇಸ್ರೋವನ್ನು ಮುತ್ತುತ್ತಿವೆ.

ಜಿಎಸ್‌ಎಲ್‌ವಿಯ ಯಶಸ್ಸನ್ನು ಶ್ಲಾಘಿಸಿ ಅನಿವಾಸಿ ಭಾರತೀಯರು ಇಸ್ರೋ ವಿಜ್ಞಾನಿಗಳಿಗೆ ಇ- ಮೇಯ್ಲ್‌ ಗಳ ಸುರಿಮಳೆಗೈದಿದ್ದಾರೆ. ನಮ್ಮ ವಿಜ್ಞಾನಿಗಳ ಈ ದೊಡ್ಡ ಸಾಧನೆಯನ್ನು ಕಂಡು ಖುಷಿಯಾಗಿದೆ ಎಂದು ಅಯೋವಾದ ಶಿವ ಅಂಬಾರ್‌ದಾರ್‌ ಹೇಳಿದರೆ, ಭಾರತೀಯರು ಮತ್ತೊಮ್ಮೆ ಚಿನ್ನದ ಹಕ್ಕಿಗಳಾಗುವುದು ಸಾಧ್ಯ, ನಮ್ಮವರು ಭವಿಷ್ಯದ ಬೆಳಕತ್ತ ಸಾಗಲಿ ಎಂದು ಜಿಎಸ್‌ಎಲ್‌ವಿಯನ್ನು ತಯಾರಿಸಿರುವ ಬ್ರಿಟನ್‌ನ ಪ್ರೊ. ಎಸ್‌. ಸುದರ್ಶನಮ್‌ ಹಾರೈಸಿದ್ದಾರೆ. ಚಂದ್ರನತ್ತ ಸಾಗುವ ಪ್ರಯತ್ನ ಮಾಡುವಂತೆ ಅವರು ತಮ್ಮ ಸಂದೇಶದಲ್ಲಿ ಇಸ್ರೋದವರನ್ನು ಹುರಿದುಂಬಿಸಿದರು. ಬಂದಿರುವ ಶುಭ ಕಾಮನೆಗಳಲ್ಲೆಲ್ಲಾ ನನ್ನ ತಾಯ್ನಾಡಿನವರ ಸಾಧನೆಯನ್ನು ಕಂಡು ಧನ್ಯತೆ ಪಡೆದ ಭಾವ ಎದ್ದು ಕಾಣುತ್ತಿತ್ತು.

ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಮಾರ್ಚ್‌ 28ರಂದು ಜಿಎಸ್‌ಎಲ್‌ವಿ-ಡಿ 1 ಉಪಗ್ರಹವನನ್ನು ಕಕ್ಷೆಗೆ ಏರಿಸುವಲ್ಲಿ ಇಸ್ರೋ ವಿಫಲವಾಗಿತ್ತು. ಆದರೆ ಮೂರೇ ವಾರಗಳ ಅವಧಿಯಲ್ಲಿ ಅಂದರೆ ಏಪ್ರಿಲ್‌ 18ರಂದು ಉಪಗ್ರಹವು ಕಕ್ಷೆ ಸೇರಿತ್ತು.

ನೀವೆಲ್ಲಾ ನಮ್ಮ ಹೀರೋಗಳು!

ಸಾಯಿ 9 ಎಂಬ ಇ- ಮೇಯ್ಲ್‌ ವಿಳಾಸದಿಂದ ಬಂದಿರುವ ಪತ್ರದಲ್ಲಿ ಭಾರತೀಯರು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿದ ಸಾಧನೆ ಐಟಿ, ಬಯೋಟೆಕ್‌, ಔಷಧಿ ಮತ್ತು ಕೃಷಿ ಕ್ಷೇತ್ರದಲ್ಲಿಯೂ ಜಗತ್ತಿನಲ್ಲಿಯೇ ಒಂದನೇ ಸ್ಥಾನದಲ್ಲಿ ನಿಲ್ಲಬೇಕು ಎಂಬ ಆಕಾಂಕ್ಷೆ ಇದೆ. ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲೀಸ್‌ನಿಂದ ವಿಜಯ ಚಿದಂಬರಂ ಮತ್ತು ಸುಂದರ್‌ ಆರ್ಮುಗಂ ಅವರು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುತ್ತಾ, ಈ ರೋಮಾಂಚಕ ಕ್ಷಣಕ್ಕಾಗಿ ತುಂಬ ದಿನದಿಂದ ನಾವು ಕಾಯುತ್ತಿದ್ದೆವು. ನೀವೆಲ್ಲಾ ನಮ್ಮ ಹೀರೋಗಳು ಎಂದು ಬರೆದಿದ್ದಾರೆ.

ಈ ಎಲ್ಲ ಶ್ಲಾಘನೆಗಳ ನಡುವೆ ಅಪಸ್ವರ ಇದ್ದೇ ಇದೆ. ಇದು ಸಾಧನೆ ಹೌದಾದರೂ ಬಡತನ, ಕಾಶ್ಮೀರದಲ್ಲಿ ಮಣ್ಣಾಗುತ್ತಿರುವ ಚಿಗುರು ಕನಸುಗಳು, ಕೊಲೆ ಸುಲಿಗೆಗಳ ನಡುವೆ ಈ ಉಡಾವಣೆಗಳ ಉಸಾಬರಿ ಯಾಕೆ ಎಂಬ ವಾದಗಳೂ ಎದ್ದಿವೆ.

ಏನೇ ಇದ್ದರೂ ಭಾರತೀಯ ವಿಜ್ಞಾನಿಗಳನ್ನು ಅಭಿನಂದಿಸಿ ಬಂದಿರುವ ಸಂದೇಶಗಳಲ್ಲಿ ಖುಷಿ, ಇನ್ನಷ್ಟು ಸಾ

ಧನೆಗೆ ಪ್ರೋತ್ಸಾಹ, ಎತ್ತರವನ್ನು ತಲುಪುವ ಹಂಬಲವಿದೆ. ಈ ನಡುವೆ ಚಂದ್ರನತ್ತ ಮಾನವ ರಹಿತ ಯಾನ ಸಾಧ್ಯತೆಯ ಪರಿಶೀಲನೆಯ ಬಗ್ಗೆ ಅಧ್ಯಯನ ತಂಡವು ವರದಿ ನೀಡಿ, ಇಸ್ರೋ ಅದನ್ನು ಪರಿಗಣಿಸಿದ ನಂತರವಷ್ಟೇ ಅದಕ್ಕೆ ಹಣಕಾಸಿನ ನೆರವು ಒದಗಿಸಲಾಗುವುದು ಎಂದು ಬಾಹ್ಯಾಕಾಶ ಖಾತೆ ಸಚಿವೆ ವಸುಂಧರಾ ರಾಜೇ ಬುಧವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ಕಸ್ತೂರಿ ರಂಗನ್‌ ಮತ್ತು ಪ್ರಧಾನಿ ಭೇಟಿ

ಇಸ್ರೋ ಅಧ್ಯಕ್ಷ ಕಸ್ತೂರಿ ರಂಗನ್‌ ಅವರು ಜಿಎಸ್‌ಎಲ್‌ವಿಯ ಮಾದರಿ ಪ್ರತಿಕೃತಿಯನ್ನು ಪ್ರಧಾನಿ ವಾಜಪೇಯಿ ಅವರಿಗೆ ಬುಧವಾರ ಹಸ್ತಾಂತರಿಸಿದರು.

(ಐಎಎನ್‌ಎಸ್‌)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X