ಮೈಸೂರು ಅರಮನೆ ಪ್ರವೇಶ ಶುಲ್ಕದಲ್ಲಿ ಭಾರಿ ಹೆಚ್ಚಳ
ಬೆಂಗಳೂರು : ಬೇಸಿಗೆ ರಜೆ ಪ್ರಾರಂಭವಾಗಿದೆ. ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶ್ವವಿಖ್ಯಾತ ಅರಮನೆಗಳ ನಗರಿ ಮೈಸೂರಿನ ಅರಮನೆಗಳ ಸೊಬಗನ್ನು ಕಾಣಲು ನೂರಾರು ಪ್ರವಾಸಿಗರು ದಿನನಿತ್ಯವೂ ಬರುತ್ತಿರುವ ಈ ಹೊತ್ತಿನಲ್ಲಿ ಅರಮನೆ ವೀಕ್ಷಣೆಯ ಪ್ರವೇಶ ಶುಲ್ಕ ಹಾಗೂ ವಾಹನ ನಿಲುಗಡೆ ಶುಲ್ಕವನ್ನು ಏರಿಸಲಾಗಿದೆ.
ಹೊಸ ದರಗಳು ಮೇ 1ರಿಂದ ಜಾರಿಗೆ ಬರಲಿವೆ. ಹೊಸ ದರದ ರೀತ್ಯ ಅರಮನೆ ಪ್ರವೇಶ ಶುಲ್ಕ ಈಗಿರುವ 10 ರುಪಾಯಿಯ ಬದಲು 15 ರುಪಾಯಿ ಆಗಲಿದೆ.
ಅರಮನೆ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದಲ್ಲದೆ ಅರಮನೆ ಆವರಣಕ್ಕೆ ಬರುವ ಖಾಸಗಿ ಪ್ರವಾಸಿ ಬಸ್ಗಳ ಹಾಗೂ ಇನ್ನಿತರ ವಾಹನಗಳ ನಿಲುಗಡೆ ಶುಲ್ಕವನ್ನೂ ಏರಿಸಲು ನಿರ್ಧರಿಸಲಾಗಿದೆ. ಈಗ ಬಸ್ ನಿಲುಗಡೆಗೆ 8 ರುಪಾಯಿ ಇದ್ದು ಅದು ಹೆಚ್ಚೂಕಡಿಮೆ ಮೂರು ಪಟ್ಟು ಏರಲಿದೆ. ಅಂದರೆ ಬಸ್ ಪಾರ್ಕಿಂಗ್ ಶುಲ್ಕ 20 ರುಪಾಯಿ ಆಗಲಿದೆ.
ಮೆಟಡಾರ್ ವ್ಯಾನುಗಳ ನಿಲುಗಡೆ ಶುಲ್ಕ 5 ರುಪಾಯಿಯಿಂದ 15 ರುಪಾಯಿ, ಕಾರುಗಳ ನಿಲುಗಡೆ ಶುಲ್ಕ 3 ರಿಂದ 10 ರುಪಾಯಿಗೆ ಏರಲಿದೆ. ಆಡಳಿತಾತ್ಮಕ ವೆಚ್ಚ ಭರಿಸಲು ಈ ಏರಿಕೆ ಅನಿವಾರ್ಯವಾಗಿದೆ ಎಂದೂ ಅರಮನೆ ಆಡಳಿತ ಮಂಡಲಿ ಮೂಲಗಳು ತಿಳಿಸಿವೆ.
(ಮೈಸೂರು ಪ್ರತಿನಿಧಿಯಿಂದ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications