ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಹತ್ತಿರವಿದ್ದಾಗ ಬರೇ ಜಗಳ, ಮಾತು, ಕಾದಾಟಗಳಲ್ಲೇ ಸಮಯ ದೂಡಿ, ಬಳಿಯಿಲ್ಲದಾಗ ಮರುಗುವ ಯಾತನೆ ನಿಮ್ಮ ಸ್ನೇಹಿತರದು. ಅದನ್ನು ಗಮನಿಸಿ ಸಂಕಟಪಡುವ ಭಾಗ್ಯ ನಿಮ್ಮದು.ವೃಷಭ : ನಿಮ್ಮ ಕೈಗುಣವನ್ನು ಬಂಧುಗಳು ಇವತ್ತೆಲ್ಲಾ ಕೊಂಡಾಡುತ್ತಾರೆ. ಉಬ್ಬಿ ಹೋಗದಿದ್ದರಾಯ್ತು. ಮತ್ತೆ ನಿಮ್ಮ ಬಳಿಗೆ ಅಸೈನ್‌ಮೆಂಟ್‌ಗಳು ಬರುತ್ತವೆ.
ಮಿಥುನ : ನಿಮ್ಮ ನಿತ್ರಾಣದಿಂದ ಇನ್ನೊಬ್ಬರಿಗೆ ನೋವಾಗದ ಹಾಗೋ ಸ್ವಲ್ಪ ಜಾಗರೂಕರಾಗಿರಬೇಕು. ನಿರೀಕ್ಷೆಗಳನ್ನು ಸುಳ್ಳು ಮಾಡಿಯೇ ಸಣ್ಣವರಾಗುತ್ತೀರಿ.
ಕಟಕ : ಎಲ್ಲ ವಿಷಯಗಳ ಬಗ್ಗೆಯೂ ‘ಚಲ್ತಾ ಹೈ’ ಅನ್ನುವ ಮನೋಭಾವ ಬೇಡ. ಕೆಲವರು ನಿಮ್ಮ ನಡವಳಿಕೆಗಳನ್ನು ಸೂಕ್ಷ್ಮ ವಾಗಿ ಗಮನಿಸುತ್ತಾರೆ.
ಸಿಂಹ : ದೂರ ಪ್ರಯಾಣ ಹೊರಟಿದ್ದೀರಿ. ಅಲ್ಲಿಂದಲೇ ನಿಮ್ಮವರಿಗೆ ಆಜ್ಞೆಗಳನ್ನು ಕಳುಹಿಸುತ್ತಿರುತ್ತೀರಿ. ಆದರೆ ನೀವು ಅಂದುಕೊಂಡಷ್ಟು ಪರಿಸ್ಥಿತಿಗಳು ಗಂಭೀರವಾಗಿಲ್ಲ.
ಕನ್ಯಾ : ನಿಮ್ಮ ಕಿತಾಪತಿಗಳು ನಿಮ್ಮ ಮನೋವಲಯದಾಚೆಗೆ ಕಾಣಿಸುವುದಿಲ್ಲ ಎಂದುಕೊಂಡರೆ ನೀವು ಜಾಣರಲ್ಲ ಎಂದರ್ಥ. ಇಷ್ಟಕ್ಕೂ ಆಫೀಸಿನಲ್ಲಿ ನಿಮ್ಮ ವಿರುದ್ಧ ಪಿತೂರಿ ನಡೆಸುವವರು ಯಾರೂ ಇಲ್ಲ.
ತುಲಾ : ಪುಟ್ಟ ಮಕ್ಕಳು ತರುವ ಕಿರಿಕಿರಿಗೆಲ್ಲಾ ಸಿಟ್ಟಾಗಬಾರದು. ಮನಸ್ಸನ್ನು ಸ್ವಸ್ಥವಾಗಿಟ್ಟುಕೊಳ್ಳುವುದೂ ಒಂದು ಕಲೆ ಅಲ್ವೇ?
ವೃಶ್ಚಿಕ : ಸ್ನೇಹಿತರು ಬಂಧುಗಳ ಅಗಲಿಕೆಯಿದ್ದರೂ, ಅವರಿಗಿಂತಲೂ ಆಪ್ತರನ್ನು ಭೇಟಿಯಾಗುತ್ತಿರುವುದರಿಂದ ದುಃಖ ಸ್ವಲ್ಪ ಕಡಿಮೆ ಇರುತ್ತದೆ.
ಧನಸ್ಸು : ಪ್ರವಾಸ ಹೋಗುವ ಯೋಚನೆಯೇನೂ ಒಳ್ಳೆಯದೆ. ಆದರೆ ಸ್ನೇಹಿತರ ಮೂಡ್ ಕೂಡ ತಿಳಿದುಕೊಳ್ಳುವುದು ಅಗತ್ಯ.
ಮಕರ : ಎಲ್ಲರೂ ಕೈ ಕೊಟ್ಟು ಹೋಗಿದ್ದಾರೆ ಎಂಬ ಬೇಜಾರು ಬೇಡ. ಬೇಕಾಗಿರುವುದು ತುಸು ಪ್ರೀತಿ ಅಷ್ಟೆ. ಕೊಟ್ಟು ಪಡೆದುಕೊಂಡರಾಯ್ತು.
ಕುಂಭ : ನಿಮ್ಮ ಸಂಗಾತಿಯ ಮನಸ್ಸಿನೊಳಗಿನ ಗೊಂದಲವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟದ ಕೆಲಸವಾದರೂ, ಪ್ರಯತ್ನಿಸಬೇಕಾದ್ದು ನಿಮ್ಮ ಧರ್ಮ ತಾನೇ ?
ಮೀನ : ನಿಮ್ಮ ಕೆಲಸ ಕಾರ್ಯಗಳೆಲ್ಲವೂ ಮುಖ್ಯವಾದದ್ದೇ. ಆದರೂ ಅವಕಾಶವಾದಿಯಾಗಲು ಬಯಸುವ ಮನಸ್ಸಿಗೆ ಲಂಗರು ಹಾಕಬೇಕಲ್ವಾ ? ಇಂದೆಲ್ಲಾ ನಿಮ್ಮ ಬಳಿ ಶ್ಲಾಘನೆಗಳಿರುತ್ತವೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications