‘ದಳಗಳ ವಿಲೀನದ ಬಗ್ಗೆ ಮಾತಾಡುವಅಧಿಕಾರ ಹೆಗಡೆ ಅವರಿಗಿಲ್ಲ’
ಬೆಂಗಳೂರು : ಜೆ.ಎಚ್.ಪಟೇಲರು ಹೇಳಿದ್ದರು- ‘ಬಿಜೆಪಿ ಕ್ಯಾನ್ಸರ್, ಕಾಂಗ್ರೆಸ್ ಶಾಪ’ ಅಂತ. ಅದು ನಿಜ ಕೂಡ. ಬಹುಶಃ ಹೆಗಡೆ ಅವರಿಗೆ ಪಟೇಲರ ಕನಸ ನನಸು ಮಾಡೋ ಉದ್ದೇಶ ಇಲ್ಲ ಅಂತ ಕಾಣುತ್ತೆ. ಜಾತ್ಯತೀತ ಹಾಗೂ ಸಂಯುಕ್ತ ಜನತಾ ದಳದ ವಿಲೀನದ ಬಗ್ಗೆ ಮಾತಾಡುವ ಅಧಿಕಾರ ಹೆಗಡೆ ಅವರಿಗಿಲ್ಲ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಡಿದ ಮಾತುಗಳಿವು. ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರೂ ಆದ ದೇವೇಗೌಡ ತಮ್ಮ ಮಾತುಗಳಿಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಬಗ್ಗೆ ಟೀಕೆಗಳ ಹರಿಸಿದರು. ಎರಡಾದ ದಳವನ್ನು ಒಂದು ಬಣವಾಗಿ ಮಾಡಲು ಮಾತುಕತೆಗೆ ಚಾಲನೆ ಕೊಟ್ಟಿದ್ದು ನಾನು, ಬೊಮ್ಮಾಯಿ ಹಾಗೂ ಪಟೇಲ್. ಆಗ ಹೆಗಡೆ ಎಲ್ಲಿದ್ದರು ಎಂದು ಸುದ್ದಿಗಾರರ ಪ್ರಶ್ನೆಯಾಂದಕ್ಕೆ ಗೌಡ ಮರು ಪ್ರಶ್ನೆ ಎಸೆದರು.
ನನಗ್ಯಾರ ಹಂಗೂ ಇಲ್ಲ, ಅವರಲ್ಲೇ ಇರಲಿ : ಎರಡೂ ಬಣಗಳ ಒಂದು ಮಾಡುವ ಕುರಿತು ಮಾತಾಡಲು ಈವರೆಗೆ ನನ್ನ ಬಳಿಗೆ ಯಾರೂ ಬಂದಿಲ್ಲ. ವಾಜಪೇಯಿ ಸಂಭಾವಿತರು ಎಂದು ಮಾಧ್ಯಮಗಳಿಗೆ ಹೇಳಿಕೆಯಿತ್ತಿರುವ ಹೆಗಡೆ ಎಲ್ಲಿವರೆಗೆ ಬೇಕೋ ಅಲ್ಲಿವರೆಗೆ ಎನ್‌ಡಿಎ ಬಣದಲ್ಲೇ ಮುಂದುವರೆಯಲಿ. ನನಗೆ ಸೋನಿಯಾ ಗಾಂಧಿ ಅವರದ್ದಾಗಲೀ, ವಾಜಪೇಯಿ ಅವರದ್ದಾಗಲೀ ಹಂಗಿಲ್ಲ. ಲೋಕಸಭೆಗೆ ಹೋಗುವ, ಸಿಎಂ- ಪಿಎಂ ಆಗುವ ಆಸೆಯೂ ಇಲ್ಲ. ಯಾರ್ಯಾರು ಎಲ್ಲೆಲ್ಲಿ ಬೇಕೋ ಅಲ್ಲಲ್ಲೇ ಇರಲಿ ಬಿಡಿ ಎಂದು ಹೆಗಡೆ ಬಗ್ಗೆ ದೇವೇಗೌಡ ವ್ಯಂಗ್ಯದ ಮಾತುಗಳನ್ನಾಡಿದರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications