Get Updates
Get notified of breaking news, exclusive insights, and must-see stories!

ಕೊಲ್ಲೂರು - ಗುರುವಾಯೂರು ನಡುವೆ ಹೊಸ ಬಸ್‌ ಸಂಚಾರ

ಕುಂದಾಪುರ : ಮೂಕಾಂಬಿಕೆಯ ಕ್ಷೇತ್ರವಾದ ಕೊಲ್ಲೂರಿನಿಂದ ಶ್ರೀಕೃಷ್ಣ ನೆಲೆಸಿಹ ಗುರುವಾಯೂರಿಗೆ ಏ.24ರ ಮಂಗಳವಾರದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಸಂಚಾರವನ್ನು ಆರಂಭಿಸಿದೆ.

ಕುಂದಾಪುರ ಘಟಕ ಆರಂಭಿಸಿರುವ ಈ ಹೊಸ ವೇಗದೂತ ಬಸ್‌ ಪ್ರತಿದಿನ ರಾತ್ರಿ 8.30ಕ್ಕೆ ಕೊಲ್ಲೂರಿನಿಂದ ಹೊರಟು ಮಾರನೆಯ ದಿನ ಬೆಳಗ್ಗೆ 6-55ಕ್ಕೆ ಗುರುವಾಯೂರು ತಲುಪಲಿದೆ. ಗುರುವಾಯೂರಿನಿಂದ ರಾತ್ರಿ 7.20ಕ್ಕೆ ಬಿಡುವ ಬಸ್‌ ಮರುದಿನ ಬೆಳಗ್ಗೆ 5.45ಕ್ಕೆ ಕೊಲ್ಲೂರಿಗೆ ಮರಳಲಿದೆ.

ಕೊಲ್ಲೂರಿನಿಂದ ಗುರುವಾಯೂರಿಗೆ ಹೊರಡುವ ಬಸ್‌ ಕುಂದಾಪುರ ಬಸ್‌ ನಿಲ್ದಾಣವನ್ನು 9-25ಕ್ಕೆ ಬಿಡಲಿದೆ. ಉಡುಪಿ ಹಾಗೂ ಕುಂದಾಪುರಗಳಲ್ಲಿ ಸ್ಥಳ ಕಾಯ್ದಿರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಕುಂದಾಪುರ ಘಟಕದ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+