ಸಚಿನ್ ಹುಟ್ಟುಹಬ್ಬಕ್ಕೆ ಮಾರ್ಕ್ ವಾ ವಿಶೇಷ ಉಡುಗೊರೆ
ಮೆಲ್ಬೋರ್ನ್ : ಸಚಿನ್ ತೆಂಡೂಲ್ಕರ್‌ಗೆ ತನ್ನ 28ನೇ ಹುಟ್ಟು ಹಬ್ಬಕ್ಕೆ ವಿಶೇಷ ಉಡುಗೊರೆಯಾಂದು ಸಿಕ್ಕಿದೆ. ಕೊಟ್ಟಿರುವವರು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮಾರ್ಕ್ ವಾ.
ನನ್ನ ಪ್ರಕಾರ ಸಚಿನ್ ಜಗತ್ತಿನ ಬೆಸ್ಟ್ ಬ್ಯಾಟ್ಸ್‌ಮನ್- ಎಂದು ಮಂಗಳವಾರ ಪತ್ರಿಕೆಯ ಅಂಕಣವೊಂದರಲ್ಲಿ ಮಾರ್ಕ್ ವಾ ಬರೆದಿದ್ದಾರೆ. ಅವರ ಬರೆಹದ ಸಂಕ್ಷಿಪ್ತ ವಿವರ ಇಂತಿದೆ...
1990ರ ದಶಕದಲ್ಲಿ ಬ್ರಿಯಾನ್ ಲಾರಾ, ಇಂಜಮಾಮ್ ಉಲ್ ಹಕ್, ಜನ ಹೇಳಿದಂತೆ ನಾನು ಹಾಗೂ ತೆಂಡೂಲ್ಕರ್ ಉತ್ತಮ ಬ್ಯಾಟ್ಸ್‌ಮನ್ ಯಾದಿಯಲ್ಲಿ ಇದ್ದೆವು. ಈ ಪೈಕಿ ಸಚಿನ್‌ಗೇ ನನ್ನ ಹೆಚ್ಚು ಮಾರ್ಕ್ಸ್. ತಾಂತ್ರಿಕವಾಗಿ ಆತ ಶ್ರೇಷ್ಠ. ಹೊತ್ತಗೆಯ ಎಲ್ಲಾ ಪ್ರಕಾರದ ಹೊಡೆತಗಳನ್ನೂ ಹೊಮ್ಮಿಸಬಲ್ಲ ಚತುರಮತಿ. ಮೇಲಾಗಿ ಕನ್ಸಿಸ್ಟೆಂಟ್. ಸ್ಲಿಪ್‌ನಲ್ಲಿ ನಿಂತು, ಆತ ಔಟ್ ಆದರೆ ಸಾಕಪ್ಪಾ ಅಂತ ಕಾಯುವ ನಾನು ಆತನ ಆಟದ ಪ್ರೇಕ್ಷಕನೂ ಹೌದು. ಸಚಿನ್ ಹೊಡೆತಗಳು ಮುದಕೊಡುವ ಒಂದು ಟ್ರೀಟ್ ಇದ್ದಂತೆ.
ನನ್ನ ಅಂದಾಜಿನ ಪ್ರಕಾರ ಸಚಿನ್ ಇನ್ನೂ 8- 10 ವರ್ಷ ಕ್ರಿಕೆಟ್ ಆಡುತ್ತಾರೆ. ರನ್ ಗಳಿಕೆಯ ಅವರ ದಾಹ ನೋಡಿದರೆ, 40ಕ್ಕೂ ಹೆಚ್ಚು ಶತಕ ದಾಖಲಿಸೋದು ಗ್ಯಾರಂಟಿ. ಆತ ಜನರ ರಂಜಿಸಲು, ತಂಡ ಉಳಿಸಲು ಬ್ಯಾಟ್ ಮಾಡುತ್ತಾರೆ. ತಂಡಕ್ಕೆ ಅಗತ್ಯ ಬಿದ್ದಾಗ ಒತ್ತಡದಲ್ಲೂ ಬಚಾವು ಮಾಡಿರುವ ಆತ ನಿಜವಾಗಿಯೂ ಅತ್ಯುತ್ತಮ ತಂತ್ರಜ್ಞ. 1998ರಲ್ಲಿ ಶಾರ್ಜಾದಲ್ಲಿ ನಮ್ಮ ತಂಡದ ವಿರುದ್ಧ 143 ರನ್ ಸಿಡಿಸಿ ಭಾರತ ಫೈನಲ್ಸ್ ತಲುಪಲು ಕಾರಣರಾಗಿದ್ದರು. ತಮ್ಮ 25ನೇ ಹುಟ್ಟುಹಬ್ಬದ ದಿನ ತಂಡವನ್ನು ಗೆಲ್ಲಿಸಲು ಶತಕದ ಕಾಣಿಕೆ ಕೊಟ್ಟರು. ದಕ್ಷಿಣ ಆಫ್ರಿಕದಲ್ಲಿ 1996ರಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಜಿಂಬಾಬ್ವೆಯನ್ನು ಹೊರಗೋಡಿಸಲು ಕೇವಲ 97 ಎಸೆತಗಳಲ್ಲಿ 104 ರನ್ ಸಿಡಿಸಿದರು. ಇವೆಲ್ಲಾ ಸಚಿನ್ ಆಪದ್ಬಾಂಧವ ಅನ್ನೋದಕ್ಕೆ ನಿದರ್ಶನಗಳು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications