Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ನಿಮ್ಮ ಪ್ರಗತಿಯನ್ನು ಕಂಡು ಸಹಿಸಲಾರದವರು ಹೆಚ್ಚು ಹೆಚ್ಚು ಪ್ರಬಲರಾಗುವಂತೆ ಮಾಡಬೇಡಿ. ನಿಮ್ಮ ಸೋಮಾರಿತನ ನಿಮ್ಮ ನಿರೀಕ್ಷೆಗಿಂತ ಹೆಚ್ಚು ಸೋಲು ತರುತ್ತದೆ.

ವೃಷಭ : ನೀವು ಗೆಲ್ಲುತ್ತಿರುವುದು ಬರೇ ಲಕ್‌ನಿಂದ. ಆದ್ದರಿಂದ ಹೆಚ್ಚಿನ ಜಂಭ ಮತ್ತು ಸ್ನೇಹಿತರನ್ನು ಕಲೆ ಹಾಕುವುದು, ಇನ್ನೇನೋ ಎಲ್ಲ ಕಿತಾಪತಿಗಳಿಗೆ ಕೈ ಹಾಕಬೇಡಿ.

ಮಿಥುನ : ಕೆಲವರು ಹೀಗೇ ಬದುಕಬೇಕೆಂದು ಯಾರೋ ಬರೆದು ಬಿಟ್ಟಿರುತ್ತಾರೆ. ಅದರಾಚೆಗಿನ ಎಲ್ಲ ಪ್ರಯತ್ನಗಳು ಶೂನ್ಯ’ ಅಂತ ಯೋಚಿಸಿದರೆ ಹೇಗೆ ಸ್ವಾಮಿ?

ಕಟಕ : ನಿಮಗೆ ಒಲಿಯುವ ಭಾಗ್ಯಲಕ್ಷ್ಮಿಯನ್ನು ಕಾಯ್ದುಕೊಳ್ಳುವುದು ನಿಮ್ಮ ಕೈಯಲ್ಲಿದೆ. ಮನೆಯಲ್ಲಿ ಪಾರ್ಟಿ, ಕಾರ್ಯಕ್ರಮಗಳ ಹೆವಿನೆಸ್‌ಗೆ ಹೆಚ್ಚು ಸಮಯ ವ್ಯರ್ಥ ಮಾಡುತ್ತೀರಿ.

ಸಿಂಹ : ಇವತ್ತಿನ ಮಟ್ಟಿಗೆ ಸ್ವಲ್ಪ ಕೆಲಸಗಳು ಹಂಚಿ ಹೋಗುತ್ತವೆ. ನಿಮ್ಮ ಮನೆಯಲ್ಲಿ ಅಪ್ಪ ಅಮ್ಮ ಹೇಳುತ್ತಿರುವುದು ಬರೇ ನಿಮ್ಮ ಉದ್ಧಾರಕ್ಕೆ ಮಾತ್ರ. ಆದ್ದರಿಂದ ಅದರತ್ತ ಸಂಶಯಗಳು ಬೇಡ.

ಕನ್ಯಾ : ಮನೆಯ ಅಪರೂಪದ ಹಿರಿಯರ ಭೇಟಿಯಾಗುತ್ತದೆ. ಆಗೆಲ್ಲಾ ನೀವು ಖರ್ಚು ವೆಚ್ಚಗಳನ್ನೇ ತೂಗಿ ತೂಗಿ ನೋಡಿದರೆ ಎಡವಟ್ಟಾಗುತ್ತದೆ. ಧನಲಾಭ ನಿರೀಕ್ಷಿಸಬಹುದು.

ತುಲಾ : ನೀವು ಕೊಡುವ ಅಸೈನ್‌ಮೆಂಟ್‌ಗಳನ್ನು ಮತ್ತೊಮ್ಮೆ ನೀವೇ ಪರಾಮರ್ಶಿಸಿದರೆ ಒಳ್ಳೆಯದು. ಕೆಲಸಗಳು ತುಂಬಾ ಇರುವುದರಿಂದ ಎಲ್ಲವೂ ನಿಮ್ಮ ಜಾಣ್ಮೆಯನ್ನು ಅವಲಂಬಿಸಿರುತ್ತದೆ.

ವೃಶ್ಚಿಕ : ಬ್ಯಾಂಕ್‌ ವ್ಯವಹಾರಗಳೇನಾದರೂ ಇದ್ದಲ್ಲಿ ಇವತ್ತು ಅದೃಷ್ಟ ನಿಮ್ಮ ಬಳಿ ಇದೆ. ಆದ್ದರಿಂದ ಬೇರೆ ವ್ಯವಹಾರಗಳತ್ತ ಕಡಿಮೆ ಗಮನವಿಟ್ಟಾದರೂ, ಆ ಕಡೆಗೆ ಗಮನ ಕೊಡಿ.

ಧನಸ್ಸು : ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆ ಎನ್ನುವುದು ಯಾರಿಗೂ ತಿಳಿಯಲ್ಲ ಬಿಡಿ. ಎಲ್ಲ ವ್ಯವಹಾರಗಳನ್ನು ಅಪರಿಚಿತರಿಗೆ ಒಪ್ಪಿಸಿ ಆರಾಮ ಇರಬಾರದು.

ಮಕರ : ಎಲ್ಲ ವಿಷಯಗಳೂ ಸರಳರೇಖೆಯಲ್ಲಿ ಇರುವುದಿಲ್ಲ. ಹಾಗೆ ನೋಡಿದರೆ ಸರಳ ರೇಖೆಯಲ್ಲಿಯೇ ಇರಲೂ ಬಾರದು ಬಿಡಿ. ಇವತ್ತು ಉಡುಪುಗಳತ್ತ ಹೆಚ್ಚು ಗಮನ ಕೊಡುತ್ತೀರಿ.

ಕುಂಭ : ಪ್ರತಿದಿನದಂತೆ ಇವತ್ತು ಕೂಡ ಬರೇ ಕೆಲಸಗಳ ಒತ್ತಡದಲ್ಲಿ ನಿಮ್ಮ ನಿರೀಕ್ಷೆಗಳನ್ನು ಖಾಲಿ ಮಾಡಿಕೊಳ್ಳಬೇಡಿ. ಸಹೋದ್ಯೋಗಿಗಳೊಂದಿಗಿನ ವ್ಯವಹಾರದಲ್ಲಿ ನಾಜೂಕಿರಲಿ.

ಮೀನ : ಪ್ರಯಾಣ ಹೊರಡಬೇಕು ಎಂಬ ನಿಮ್ಮ ಕನಸುಗಳು ಎಲ್ಲಿಯೋ ಒಡೆದು ಹೋಗಿವೆ. ನೀವು ಹುಡುಕುತ್ತಿರುವುದು ನಿಮ್ಮ ಬಳಿಯೇ ಇರುವಾಗ ಯಾಕೆ ನೋವು?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+