ಜನತಾ ದರ್ಶನ ! ಭೂಕಂಪ ಸಂತ್ರಸ್ತ ಮಹಿಳೆ ನೆರವಿಗೆ ಜನಾರ್ಧನ
ಬೆಂಗಳೂರು : ಜನವರಿ 26 ರಂದು ಸಂಭವಿಸಿದ ಸಮೂಹ ನಾಶಕ ಗುಜರಾತ್ ಭೂಕಂಪದಲ್ಲಿ ಗಂಡ, ಮಗ ಹಾಗೂ ಬಲಗೈ ಕಳೆದುಕೊಂಡಿರುವ ಮಹಿಳೆಯಾಬ್ಬರ ಜೀವನೋಪಾಯಕ್ಕಾಗಿ 50 ಸಾವಿರ ರುಪಾಯಿಗಳನ್ನು, ಮಂಗಳವಾರ ತಮ್ಮ ಜನತಾದರ್ಶನ ಕಾರ್ಯಕ್ರಮ ಸಂದರ್ಭದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸ್ಥಳದಲ್ಲೇ ಮಂಜೂರು ಮಾಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರಾಜಾಜಿನಗರದ ಕಿರಣ್ ಬೆನ್ ಎನ್ನುವ ಮಹಿಳೆ, ತಮ್ಮ ಅಳಲನ್ನು ತೋಡಿಕೊಂಡರು. ಸಂತ್ರಸ್ತ ಹೆಣ್ಣು ಮಗಳ ಅಳಲಿಗೆ ತಕ್ಷಣವೇ ಸ್ಪಂದಿಸಿದ ಕೃಷ್ಣ , 50 ಸಾವಿರ ರುಪಾಯಿಗಳನ್ನು ಮಂಜಾರು ಮಾಡಿ, ಅಗತ್ಯ ದಾಖಲೆಗಳನ್ನು ಪೂರೈಸಿ ಹಣ ಪಡೆಯುವಂತೆ ಸೂಚಿಸಿದರು.
ಉದ್ಯೋಗ ಮಾರ್ಗದರ್ಶಿ : ಇದೇ ಸಂರ್ದದಲ್ಲಿ ಬಿಜಾಪುರದ ಅಂಗವಿಕಲ ಮಹಿಳೆ ಲಕ್ಷ್ಮೀಬಾಯಿ ಎನ್ನುವವರಿಗೆ ಬಿಎಚ್ಇಎಲ್ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ನೆರವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೃಷ್ಣ ಸೂಚಿಸಿದರು. ಬಿಎಚ್ಇಎಲ್ ಅಧಿಕಾರಿಗಳನ್ನು ಸೆಲ್ಫೋನ್ನಲ್ಲಿ ಸಂದರ್ಶಿಸಿದ ಮುಖ್ಯಮಂತ್ರಿಗಳು, ನೇಮಕಾತಿ ಸಂದರ್ಭದಲ್ಲಿ ಅಂಗವಿಕಲ ಮಹಿಳೆಗೆ ಸಾಧ್ಯವಾಗುವ ನೆರವು ನೀಡಲು ಸೂಚಿಸಿದರು.
ಬಿಎಚ್ಇಎಲ್ 12 ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು , ಈ ಹುದ್ದೆಗಳಿಗಾಗಿ ಒಟ್ಟು 12 ಸಾವಿರ ಅರ್ಜಿಗಳು ಬಂದಿವೆ. ಅವುಗಳಲ್ಲಿ 850 ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆ ಕಳುಹಿಸಲಾಗಿದ್ದು, ಅವರಲ್ಲಿ ಲಕ್ಷ್ಮೀಬಾಯಿ ಒಬ್ಬರಾಗಿದ್ದಾರೆ.(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications