ಕಾರು ಅಗ್ಗವಾದರೂ ಕೊಂಡುಕೊಳ್ಳೋರು ಕಡಿಮೆ ಆಗಿದಾರಂತೆ
ನವದೆಹಲಿ : ಕಾರಿನ ಬೆಲೆಗಳನ್ನು ಕಡಿಮೆ ಮಾಡಿದಾಗ್ಯೂ ಮಾರ್ಚ್ ತಿಂಗಳಲ್ಲಿ ಅವುಗಳ ಮಾರಾಟ ಪ್ರಮಾಣ ಶೇ.11ರಷ್ಟು ಕುಸಿದಿದೆ.
ವಾರ್ಷಿಕ ಬಜೆಟ್ 2001-02 ರಲ್ಲಿ ಸರ್ಕಾರ ಕಾರು ಉತ್ಪನ್ನ ಸುಂಕದಲ್ಲಿ 8 ಪ್ರತಿಶತ ಕಡಿತ ಮಾಡಿದಾಗ ಕಂಪನಿಗಳು ಹಿರಿಹಿರಿ ಹಿಗ್ಗಿದವು. ಆದರೀಗ ಮಾರುತಿ, ಟಾಟಾ ಎಂಜಿನಿಯರಿಂಗ್ (ಟೆಲ್ಕೋ), ದೇವೂ ಹಾಗೂ ಹಿಂದೂಸ್ತಾನ್ ಮೋಟಾರ್ಸ್ ಮಾರಾಟದಲ್ಲಿ ಭಾರೀ ಇಳಿಕೆ ಅನುಭವಿಸಿವೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 73,089 ಕಾರುಗಳು ಮಾರಾಟವಾಗಿದ್ದವು. ಆದರೆ ಈ ವರ್ಷ 65,107 ಕಾರುಗಳು ಮಾತ್ರ ಮಾರಾಟವಾಗಿವೆ. ಸೊಸೈಟಿ ಆಫ್ ಇಂಡಿಯನ್ ಆಟೋ ಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಸಿಯಾಂ) ಮಂಗಳವಾರ ಹೊರಟಿಸಿರುವ ಸುದ್ದಿ ಪ್ರಕಟಣೆಯಲ್ಲಿ ಈ ವಿಷಯ ಸ್ಪಷ್ಟಪಡಿಸಿದೆ.
ಮಾರುಕಟ್ಟೆ ದಿಗ್ಗಜ ಮಾರುತಿ 38,961 ಕಾರುಗಳನ್ನು ಮಾರ್ಚ್ ತಿಂಗಳಲ್ಲಿ ಮಾರಾಟ ಮಾಡಿದೆ. ಕಂಪನಿಗೆ ಕಳೆದ ವರ್ಷದ ಮಾರ್ಚ್ ತಿಂಗಳಿಗಿಂತ 6.7 ಪ್ರತಿಶತ ಮಾರಾಟ ಕಡಿಮೆಯಾಗಿದೆ. 2000ನೇ ವಿತ್ತ ವರ್ಷದಲ್ಲೂ ಕಂಪನಿಯ ಕಾರುಗಳ ಮಾರಾಟ ಪ್ರಮಾಣ ಶೇ13.3ರಷ್ಟು ಇಳಿಮುಖವಾಗಿದೆ.
ವಾಣಿಜ್ಯ ವಾಹನಗಳ ಮಾರಾಟದಲ್ಲೂ 12.2 ಪ್ರತಿಶತ ಇಳಿಮುಖ ಕಂಡು ಬಂದಿದೆ. 2000ನೇ ವಿತ್ತ ವರ್ಷದಲ್ಲಿ ಒಟ್ಟು ಕಾರು ಮಾರಾಟ ಪ್ರಮಾಣದಲ್ಲಿ 7.4 ಪ್ರತಿಶತ ಇಳಿಕೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಮಾರುಕಟ್ಟೆ ಸೊರಗುತ್ತಿದೆ. ಅದೂ ಬೆಲೆ ಕಡಿಮೆಯಾದರೂ ಗ್ರಾಹಕರನ್ನು ತಮ್ಮತ್ತ ಸೆಳೆಯಲು ವಿಫಲವಾಗುತ್ತಿರುವ ಕಂಪನಿಗಳು ತಲೆ ಮೇಲೆ ಕೈಹೊತ್ತು ಕೂತಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications