ಜಿಂಬಾಬ್ವೆ ಪ್ರವಾಸ : ತರಬೇತಿ ಶಿಬಿರಕ್ಕೆ 26 ಮಂದಿ ತಂಡ ಆಯ್ಕೆ
ಬರೋಡಾ : ಜಿಂಬಾಬ್ವೆ ಪ್ರವಾಸಕ್ಕೆ ಮುನ್ನ ನಡೆಯುವ ತರಬೇತಿ ಶಿಬಿರಕ್ಕೆ ರಾಷ್ಟ್ರೀಯ ಆಯ್ಕೆದಾರರ ಸಮಿತಿ 7 ಮಂದಿ ವೇಗದ ಬೌಲರ್‌ಗಳೂ ಸೇರಿದಂತೆ ಒಟ್ಟು 26 ಮಂದಿ ಸಂಭವನೀಯ ಆಟಗಾರರನ್ನು ಆರಿಸಿದೆ. ತೋಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ವೈದ್ಯಕೀಯ ತಪಾಸಣೆಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಅನಿಲ್ ಕುಂಬ್ಳೆ ಹಾಗೂ ಕರ್ನಾಟಕದ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವರು ಸಂಭವನೀಯರ ಪಟ್ಟಿಯಲ್ಲಿ ಸ್ಥಾನಪಡೆದಿಲ್ಲ.
ವಿಕೆಟ್ ಕೀಪರ್ ಸ್ಥಾನಕ್ಕೆ ನಯನ್ ಮೊಂಗಿಯಾ, ವಿಜಯ್ ದಹಿಯಾ ಇಬ್ಬರನ್ನೂ ಕೈಬಿಟ್ಟು, ಮುಂಬೈನ ಸಮೀರ್ ದಿಘ ಹಾಗೂ ಅಜಯ್ ರಾತ್ರಾ ಅವರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಬೆಂಗಳೂರಿನಲ್ಲಿ ಮೇ 13ರಿಂದ 18ರವರೆಗೆ ತರಬೇತಿ ಶಿಬಿರ ನಡೆಯಲಿದೆ. ತರಬೇತಿ ಶಿಬಿರದ ನಂತರ ಅಂತಿಮ ತಂಡವನ್ನು 18ರಂದು ಪ್ರಕಟಿಸಲಾಗುವುದು.
ಈ ವಿಷಯವನ್ನು ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಜಯವಂತ ಲೆಲೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಸಂಭವನೀಯರ ಪಟ್ಟಿಯಲ್ಲಿರುವವರು ಇವರು:
ಸೌರವ್ ಗಂಗೂಲಿ (ನಾಯಕ) ರಾಹುಲ್‌ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿ.ವಿ.ಎಸ್. ಲಕ್ಷ್ಮಣ್, ಹೇಮಾಂಗ್ ಬದಾನಿ, ಸಡಗೋಪನ್ ರಮೇಶ್, ಶಿವಸುಂದರ ದಾಸ್, ಮೊಹ್ಮದ್ ಕೈಫ್, ಯುವರಾಜ್‌ಸಿಂಗ್, ವೀರೇಂದ್ರ ಶೇಹ್ವಾಗ್, ದಿನೇಶ್ ಮೊಂಗಿಯಾ, ಸಮೀರ್ ದಿಘ, ಅಜಯ್ ರಾತ್ರಾ, ದೀಪ್‌ದಾಸ್ ಗುಪ್ತಾ, ಜಾವಗಲ್ ಶ್ರೀನಾಥ್, ಅಜಿತ್ ಅಗರ್‌ಕರ್, ಜಹೀರ್‌ಖಾನ್, ಹರ್ವೀಂದರ್‌ಸಿಂಗ್, ಅಶಿಶ್ ನೇಹ್ರ, ದೇಬಶಿಷ್ ಮೊಹಂತಿ, ರಾಖೇಶ್ ಪಾಟೀಲ್, ರಿತೇಂದ್ರ ಸಿಂಗ್ ಸೋಧಿ, ಹರಭಜನ್ ಸಿಂಗ್, ಶರಣದೀಪ್ ಸಿಂಗ್, ರಾಹುಲ್ ಸಾಂಘ್ವಿ ಹಾಗೂ ಸಾಹಿರಾಜ್‌ಬಹುತಲೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications