ಬೆಂಗಳೂರಿನ ಐಟಿ ಪಂಡಿತರೇ, ಸಹಾಯ ಮಾಡಿ -ನಾರ್ವೆ ಪ್ರಧಾನಿ
ಬೆಂಗಳೂರು : ಅಮೆರಿಕಾ ಆರ್ಥಿಕ ಕುಸಿತದ ಹೊಡೆತ ತಿಂದಿರುವ ಸಾಫ್ಟ್‌ವೇರ್ ಪರಿಣತರೇ, ತಲೆ ಮೇಲಿಂದ ಕೈತೆಗೆಯಿರಿ. ಈ ಸುದ್ದಿ ಓದಿ, ಒಮ್ಮೆ ನಕ್ಕುಬಿಡಿ...
ಭಾರತದ, ಅದರಲ್ಲೂ ಬೆಂಗಳೂರಿನ ಐಟಿ ಪರಿಣತರು ತಮ್ಮ ನಾರ್ವೆ ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಸಹಾಯ ಮಾಡಬೇಕು ಎಂದು ನಾರ್ವೆ ಪ್ರಧಾನಿ ಜೀನ್ಸ್ ಟೋಲ್ಟನ್‌ಬರ್ಗ್ ಯಾಚಿಸಿದ್ದಾರೆ.
ಸೋಮವಾರ ನಾಸ್‌ಕಾಂ ಆಯೋಜಿಸಿದ್ದ ಭಾರತ- ನಾರ್ವೆ ಮಾಹಿತಿ ತಂತ್ರಜ್ಞಾನ ಸಂಬಂಧ ಕುರಿತ ವಿಚಾರ ಸಂಕಿರಣದ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡುತ್ತಿದ್ದ ಅವರು ಭಾರತದ ಸಹಾಯ ಕೋರಿದರು. ಯಾವುದೇ ದೇಶದ ಆರ್ಥಿಕ ಕ್ಷೇತ್ರದ ಸರ್ವತೋಮುಖ ಪ್ರಗತಿಗೆ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿ ಪೂರಕವಾದುದು. ಈ ಕಾರಣ ನಮ್ಮ ದೇಶದಲ್ಲಿ ಐಟಿ ಕೈಗಾರಿಕೆ ಅಭಿವೃದ್ಧಿಪಡಿಸಲು ಯೋಜನೆಯಾಂದನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದರು.
ಇ- ಆಡಳಿತ, ಸಾರ್ವಜನಿಕ ಉದ್ದಿಮೆಗಳ ಗಣಕೀಕರಣ ಮೊದಲಾದ ಕಾಯಕ್ರಮಗಳನ್ನು ಇ- ಎನ್‌ನೋವೆ ಎಂಬ ಯೋಜನೆಯಡಿ ಹಮ್ಮಿಕೊಳ್ಳಲಾಗಿದೆ. ಭಾರತೀಯರು ತಮ್ಮೂರಿನಲ್ಲೇ ಕುಂತು ನಮ್ಮ ಯೋಜನೆಯ ಕೆಲಸಗಳನ್ನು ಮಾಡಿಕೊಟ್ಟರೂ ಸೈ. ನಮ್ಮೂರಿಗೇ ಬಂದು ಕೆಲಸ ಮಾಡಿಕೊಟ್ಟರೆ ಇನ್ನೂ ಒಳಿತು ಎಂದು ಟೋಲ್ಟನ್‌ಬರ್ಗ್ ಆಮಂತ್ರಣ ಕೊಟ್ಟರು.
ಪ್ರಸ್ತುತ ನಾರ್ವೆಯ ತೆರಿಗೆ ಪ್ರಾಧಿಕಾರದ ಅಧಿಕಾರಿಗಳು ಸಾಫ್ಟ್‌ವೇರ್ ಖರೀದಿ ಹಾಗೂ ನಾರ್ವೆಯಲ್ಲಿ ತೆರಿಗೆ ವಸೂಲಾತಿಯ ಗಣಕೀಕರಣದ ಕಾರ್ಯವನ್ನು ಸುಗಮಗೊಳಿಸಿಕೊಳ್ಳಲು ಬೆಂಗಳೂರಿನ ಐಟಿ ಪರಿಣತರನ್ನು ಸಂಪರ್ಕಿಸಿದ್ದಾರೆ. ಈ ಸಂಬಂಧ ಹೀಗೇ ಬೆಳೆಯಬೇಕು. ದೂರವನ್ನು ಕಡಿಮೆ ಮಾಡುವ ಮಾಹಿತಿ ತಂತ್ರಜ್ಞಾನವನ್ನು ಎಲ್ಲಾ ದೇಶಗಳೂ ಸರಿಯಾಗಿ ಬಳಸಿಕೊಂಡು ಮುಂದೆ ಬರಬೇಕು ಎಂದರು.
ಭಾರತ, ವಿಶೇಷವಾಗಿ ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಸಾಧಿಸಿದೆ. ದೇಶದಿಂದ ನಾವು ಕಲಿಯುವುದು ಸಾಕಷ್ಟಿದೆ ಎಂದು ಟೋಲ್ಟನ್‌ಬರ್ಗ್ ಶ್ಲಾಘನೆಯ ಮಾತುಗಳನ್ನಾಡಿದರು.
(ಇನ್ಫೋ ವಾರ್ತೆ)
(ಎಎಫ್‌ಪಿ)
ವಾರ್ತಾಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications