ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣ್ಣು ಶಿಶು ಮಾರಾಟ : ಆಂಧ್ರದಿಂದ ಸಿಐಡಿ ತನಿಖೆ

By Staff
|
Google Oneindia Kannada News

ಹೈದರಾಬಾದ್‌ : ಹೆಣ್ಣು ಶಿಶುಗಳ ಮಾರಾಟ ಪ್ರಕರಣದ ತನಿಖೆಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರು ಕ್ರೆೃಂ ಬ್ರಾಂಚ್‌ ಸಿಐಡಿ ತನಿಖೆಗೆ ಆದೇಶಿಸಿದ್ದು, ರಾಜ್ಯದ ಎಲ್ಲಾ ಅನಾಥಾಲಯಗಳ ಕೆಲಸ ಕಾರ್ಯಗಳ ಮೇಲೆ ನಿಗಾ ಇಡಲು ಪ್ರತ್ಯೇಕ ಮಂಡಳಿಯಾಂದನ್ನು ರಚಿಸಿದ್ದಾರೆ.

ಗಂಭೀರ ಸ್ವಾಸ್ಥ್ಯ ಸಮಸ್ಯೆಗಳಿಂದ ನರಳುತ್ತಿರುವ ಮಕ್ಕಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ನಂತರ ನಾಯ್ಡು ಈ ಹಗರಣದಲ್ಲಿ ಭಾಗಿಯಾಗಿರುವ ಪಾತಕಿಗಳಲ್ಲೊಬ್ಬನ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದರು.

ಗುಲ್ಬರ್ಗಾವರದಿ : ಲಂಬಾಣಿ ಹೆಣ್ಣು ಶಿಶು ಮಾರಾಟ ಪ್ರಕರಣದ ತನಿಖೆಯನ್ನು ಸಿಓಡಿ ಕೈಗೆತ್ತಿಕೊಂಡಿದೆ. ಕೊಂಚಾವರಂ ಅರಣ್ಯ ವಲಯದ ಚಿಂಚೋಳಿ ತಾಲ್ಲೂಕಿನಲ್ಲಿ ತನಿಖೆ ಕಾರ್ಯವನ್ನು ಆರಂಭಿಸಲಾಗಿದೆ. ಸಿಓಡಿ ಪೊಲೀಸ್‌ ಅಧೀಕ್ಷಕ ಡಾ. ರವೀಂದ್ರನಾಥ್‌ ತನಿಖೆ ಸಂಬಂಧ ಗುಲ್ಬರ್ಗಾಕ್ಕೆ ಆಗಮಿಸಿದ್ದಾರೆ.

ಕಳೆದ ಶನಿವಾರಂದಂದು ಬಂಧಿಸಲಾಗಿದ್ದ ಆರೋಪಿ ಸೂರ್ಯಕುಮಾರ್‌ನ ಅತ್ತೆ ಸರೋಜಾ ಕೂಡ ಶಿಶು ಮಾರಾಟ ಜಾಲದಲ್ಲಿ ಸಕ್ರಿಯವಾಗಿರುವುದು ತಿಳಿದುಬಂದಿದ್ದು, ಆಕೆಯನ್ನೂ ಪೊಲೀಸರು ಬಂಧಿಸಿದ್ದಾರೆ.

ಈ ನಡುವೆ, ಇಲ್ಲಿನ ಓಂ ನಗರದ ಜಾನ್‌ ಅಬ್ರಾಹಂ ಸ್ಮಾರಕ ಬೆಥನಿ ಹೋಂನಲ್ಲಿ ಎರಡರಿಂದ ನಾಲ್ಕು ತಿಂಗಳ ವಯಸ್ಸಿನೊಳಗಿನ ನಾಲ್ಕು ಹೆಣ್ಣು ಮತ್ತು ಒಂದು ಗಂಡು ಹಸುಳೆಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಶಿಶುಗಳನ್ನು ರಾಘವೇಂದ್ರ ಬಡಾವಣೆಯ ನಂದಗೋಕುಲ ಅನಾಥಾಲಯದಲ್ಲಿ ಇರಿಸಲಾಗಿದ್ದು, ಖರ್ಚು ವೆಚ್ಚವನ್ನು ಜಿಲ್ಲಾಡಳಿತವೇ ಭರಿಸುತ್ತಿದೆ.

ಸೇಡಂ ಶ್ಲಾಘನೆ : ಲಂಬಾಣಿ ಹೆಣ್ಣು ಶಿಶುಗಳ ಮಾರಾಟ ಜಾಲದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗುತ್ತಿರುವ ಗುಲ್ಬಾರ್ಗ ಜಿಲ್ಲಾ ಪೊಲೀಸರನ್ನು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ ಶ್ಲಾಘಿಸಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X