Get Updates
Get notified of breaking news, exclusive insights, and must-see stories!

ರೈಲ್ವೇಸ್‌ ಕನಸು ಭಗ್ನ,ಬರೋಡಕ್ಕೆ ರಣಜಿ ಚಾಂಪಿಯನ್‌ಷಿಪ್‌

ಬರೋಡ : ಸೋಮವಾರ ಇಲ್ಲಿ ಕೊನೆಗೊಂಡ ರೋಮಾಂಚಕ ಪಂದ್ಯದಲ್ಲಿ 44 ವರ್ಷಗಳ ನಂತರ ಬರೋಡ ಮರಳಿ ಪ್ರತಿಷ್ಠಿತ ರಣಜಿ ಟ್ರೋಫಿ ಚಾಂಪಿಯನ್‌ಷಿಪ್‌ ಗಳಿಸಿತು. ರೈಲ್ವೇಸ್‌ ತಂಡವನ್ನು 21 ರನ್‌ಗಳಿಂದ ಮಣಿಸುವುದರೊಂದಿಗೆ ದೇಶೀಯ ಕ್ರಿಕೆಟ್‌ನ ಸಾಮ್ರಾಟ ಎನ್ನುವ ಅಗ್ಗಳಿಕೆ ಬರೋಡದ್ದಾಯಿತು.

ಕೊನೆಯ ಪಾಳಿಯಲ್ಲಿ ಬೌಲರ್‌ಗಳಿಗೆ ಸಹಾಯವಾಗಿದ್ದ ಪಿಚ್‌ನಲ್ಲಿ ಬೌಲ್‌ ಮಾಡಿದ ಭಾರತದ ಭರವಸೆಯ ಬೌಲರ್‌ ಮಧ್ಯಮ ವೇಗಿ ಜಹೀರ್‌ ಖಾನ್‌ ರೈಲ್ವೆ ಬ್ಯಾಟ್ಸ್‌ಮನ್‌ಗಳಗೆ ಸಿಂಹಸ್ವಪ್ನ ವೆನಿಸಿದರು. 5 ವಿಕೆಟ್‌ ಕಿತ್ತ ಜಹೀರ್‌ ಬರೋಡದ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ರೈಲ್ವೇಸ್‌ಗೆ 151 ರನ್‌ಗಳ ಮುನ್ನಡೆ ಬಿಟ್ಟುಕೊಟ್ಟ ಬರೋಡ, ಎರಡನೆ ಪಾಳಿಯಲ್ಲಿ ಅದ್ಭುತ ಆಟವಾಡಿ ಎದುರಾಳಿಗಳನ್ನು ಮಣಿಸಿತು. ಬರೋಡ ಎಸೆದ 223 ರನ್‌ಗಳ ಗುರಿಯನ್ನು ಸುಲಭದ ತುತ್ತೆಂದು ಭಾವಿಸಿದ ರೈಲ್ವೇಸ್‌ ನಿಯಮಿತವಾಗಿ ವಿಕೆಟ್‌ ಕಳೆದುಕೊಳ್ಳುವ ಮೂಲಕ ಮೊದಲ ಬಾರಿಗೆ ರಣಜಿ ಚಾಂಪಿಯನ್‌ಷಿಪ್‌ ಗಳಿಸುವ ಕನಸನ್ನು ನೀಗಿಕೊಂಡಿತು. ಭಾನುವಾರದ ಕೊನೆಗೆ 4 ವಿಕೆಟ್‌ಗಳ ನಷ್ಟಕ್ಕೆ 91 ರನ್‌ ಗಳಿಸಿದ್ದ ರೈಲ್ವೇಸ್‌ ಸೋಮವಾರದ ಆಟದಲ್ಲಿ 201 ರನ್‌ಗಳಿಗೆ ತನ್ನ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್‌ - ಬರೋಡ 243 ಮತ್ತು 373(ಸತ್ಯಜಿತ್‌ ಪರಬ್‌ 141)
ರೈಲ್ವೇಸ್‌ 394 ಹಾಗೂ 201(ಜಹೀರ್‌ ಖಾನ್‌ 43 ಕ್ಕೆ 5 ವಿಕೆಟ್‌)

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+