ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೋಳಿನ ಚಿಕಿತ್ಸೆಗೆ ಮತ್ತೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಅನಿಲ್‌ ಕುಂಬ್ಳೆ

By Staff
|
Google Oneindia Kannada News

Anil kumbleಬೆಂಗಳೂರು : ಬಲತೋಳಿನ ತೊಂದರೆಯಿಂದ ನರಳುತ್ತಿರುವ ಖ್ಯಾತ ಲೆಗ್‌ಸ್ಪಿನ್ನರ್‌ ಅನಿಲ್‌ಕುಂಬ್ಳೆ ಅವರು ಖ್ಯಾತ ವೈದ್ಯ ಮಾರ್ಕ್‌ ಫರ್ಗುಸನ್‌ ಅವರಿಂದ ಚಿಕಿತ್ಸೆ ಪಡೆಯಲು ಮತ್ತೊಮ್ಮೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ.

ಕಳೆದ ಜನವರಿ ತಿಂಗಳಿನಲ್ಲಿ ಕುಂಬ್ಳೆ ಅವರ ಬಲತೋಳಿನ ಶಸ್ತ್ರಚಿಕಿತ್ಸೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. ಈಗ ಮತ್ತೊಮ್ಮೆ ತಮ್ಮ ತೋಳಿನ ಚಿಕಿತ್ಸೆಯ ಸಂಬಂಧ ವೈದ್ಯರನ್ನು ಭೇಟಿ ಮಾಡಲು ಕುಂಬ್ಳೆ ಜೋಹನ್ಸ್‌ಬರ್ಗ್‌ಗೆ ತೆರಳಿದ್ದು, ಮುಂದಿನ ತಿಂಗಳು ಬೆಂಗಳೂರಿಗೆ ಹಿಂತಿರುಗುವರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ತೋಳಿನ ತೊಂದರೆಯಿಂದ ಕೆಲವು ತಿಂಗಳುಗಳಿಂದ ಕುಂಬ್ಳೆ ಅವರು ಕ್ರಿಕೆಟ್‌ ಮೈದಾನದಿಂದ ಹೊರಗುಳಿಯುವಂತಾಗಿದೆ. ಇದರಿಂದಾಗಿಯೇ ಭಾರತ - ಆಸ್ಟ್ರೇಲಿಯಾ ನಡುವಣ ಮಹತ್ವದ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಸಹ ಕುಂಬ್ಳೆ ಕಳೆದುಕೊಂಡರು.

ಮತ್ತೊಮ್ಮೆ ತಮ್ಮ ಬೌಲಿಂಗ್‌ ದಾಳಿಯಿಂದ ಭಾರತ ತಂಡವನ್ನು ಬಲಪಡಿಸುವ ಮಹದಾಸೆ ಕುಂಬ್ಳೆ ಅವರದು. ಹೆಸರಾಂತ ಮೂಳೆ ತಜ್ಞ ಡಾ. ಫರ್ಗುಸನ್‌ ಅವರಿಂದ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಕುಂಬ್ಳೆ ಅವರ ತೋಳಿನ ಸಮಸ್ಯೆ ಬಗೆಹರಿಸಲು ಹಲವು ಹೊಸ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿಸಿದ್ದಾರೆ. ಸಲಹೆ - ಸೂಚನೆಗಳನ್ನೂ ನೀಡಿದ್ದಾರೆ. ಕುಂಬ್ಳೆ ಅವರು ಕಟ್ಟು ನಿಟ್ಟಾಗಿ ವೈದ್ಯರ ಸಲಹೆ ಪಾಲಿಸುತ್ತಿದ್ದು, ಅದು ಉತ್ತಮ ಪರಿಣಾಮ ಬೀರಿವೆ.

ಕುಂಬ್ಳೆ ಅವರು ತೋಳಿನ ತೊಂದರೆಯಿಂದ ಗುಣಮುಖರಾಗುತ್ತಿರುವ ಬಗ್ಗೆ ವೈದ್ಯ ಫರ್ಗುಸನ್‌ ಸಹ ಸಂತಸ ವ್ಯಕ್ತಪಡಿಸಿದ್ದಾರೆ. ವೈದ್ಯರ ಈ ಭೇಟಿ ಬಳಿಕ ಭಾರತಕ್ಕೆ ಮರಳಲಿರುವ ಕುಂಬ್ಳೆ ಅವರ ಸೇವೆ ಎಂದಿನಿಂದ ಭಾರತ ತಂಡಕ್ಕೆ ದೊರಕಲಿದೆ ಎನ್ನುವುದು ಕೂಡ ತಿಳಿದುಬರಲಿದೆ. ಇನ್ನೇನು ಜಿಂಬಾಬ್ವೆ ಪ್ರವಾಸ ಹತ್ತಿರ ಬರುತ್ತಿದೆ.

(ಯುಎನ್‌ಐ )

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X