ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮಗೆ ಜಗತ್ತಿನಲ್ಲಿ ಸುಂದರವೆನಿಸುವ ಎಲ್ಲ ವಸ್ತುಗಳು ನಿಮ್ಮ ಸ್ನೇಹಿತರಿಗೂ ಸುಂದರವೆನಿಸುವ ಅಕಸ್ಮಿಕವನ್ನು ಗಮನಿಸಿ ಅವಾಕ್ಕಾಗುತ್ತೀರಿ. ಇವತ್ತು ಸಂಜೆ ಮತ್ತೆ ನಿಮ್ಮ ಬಳಿ ಒಳ್ಳೇ ಐಡಿಯಾಗಳಿರುತ್ತವೆ.ವೃಷಭ :ನಿಮ್ಮೊಡನೆ ವ್ಯವಹರಿಸುವುದು ತುಂಬಾ ಕಷ್ಟವಪ್ಪಾ. ಎಲ್ಲ ಇನಿಷಿಯೇಟಿವ್‌ಗಳನ್ನು ಬೇರೆಯವರೇ ತೆಗೆದುಕೊಳ್ಳಲಿ ಎಂದು ಯಾಕೆ ನಿರೀಕ್ಷಿಸುತ್ತೀರೋ ಗೊತ್ತಾಗುವುದಿಲ್ಲ. ಲಾಭ ವ್ಯವಹಾರಗಳಲ್ಲಿ ಇದೆಲ್ಲಾ ನಡೆಯುವುದಿಲ್ಲ.
ಮಿಥುನ : ಇವತ್ತಾದರೂ ತಲೆ ಮತ್ತು ಮನಸ್ಸು ಒಂದೇ ಕಡೆ ಇಟ್ಟುಕೊಂಡು ಕೆಲಸ ಮಾಡಲು ಪ್ರಯತ್ನಿಸಿ. ಮನೆಯವರ ನಿರೀಕ್ಷೆ ಮತ್ತು ಆಸೆಗಳಿಗೆ ಬಂಡೆಗಲ್ಲೆಳೆಯಬೇಡಿ.
ಕಟಕ : ಬೇರೆಯವರ ನಿರೀಕ್ಷೆಯನ್ನು ಪೂರ್ತಿ ಗೊಳಿಸಬೇಕು ಎಂಬ ಅಕಾರಣ ಛಲದಿಂದ ಸುಮ್ಮನೇ ಸೋಲುತ್ತೀರಿ. ನಿಮ್ಮ ಹಠ ನಿಮಗೇ ನಷ್ಟ ತರುತ್ತದೆ.
ಸಿಂಹ : ಬಾಕಿ ಉಳಿಸಿಕೊಂಡಿರುವವರ ಪಾಡು ಚೆಂದಾಗಿರುವುದಿಲ್ಲ. ನೀವು ಯಾವತ್ತೋ ಮಾಡಿದ ಸಾಲ ನಿಮ್ಮ ತಲೆ ತಿನ್ನುತ್ತದೆ. ಮತ್ತೆ ನಿಮ್ಮ ಸ್ನೇಹಿತರೇ ಸಹಾಯಕ್ಕೆ ಬರುವುದು.
ಕನ್ಯಾ : ಆರೋಗ್ಯ ಸಮಸ್ಯೆಯಿಂದ ಮನಸ್ಸು ಕೆಡಿಸಿಕೊಂಡು ತುಂಬಾ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳುತ್ತೀರಿ. ಸದ್ಯಕ್ಕೆ ಹೊಸ ಹೊಸ ಯೋಚನೆಗಳಿಗೆ ಸ್ಥಳವಿಲ್ಲ.
ತುಲಾ : ಬ್ಯಾಂಕ್ ಕೆಲಸಗಳೆಲ್ಲಾ ಇವತ್ತು ಸುಲಭವಾಗಿ ನಡೆಯುವುದಿಲ್ಲ. ಸದ್ಯದಲ್ಲಿಯೇ ನೀವು ಇನ್‌ಫ್ಲುಯೆನ್ಸ್‌ಗಾಗಿ ಓಡಾಡುತ್ತೀರಿ.
ವೃಶ್ಚಿಕ : ಮನೆಯಲ್ಲಿ ಪುಟ್ಟ ಪುಟ್ಟಿಯರ ಹತ್ತಿರವೆಲ್ಲಾ ಯಾಕೆ ಗುಬ್ಬಿ ಮುನಿಸು ? ಸಣ್ಣ ಮಕ್ಕಳಿಗೆಲ್ಲಾ ಸುಳ್ಳು ಹೇಳಲು ಕಲಿಸಬಾರದಲ್ವೇ?
ಧನಸ್ಸು : ಇವತ್ತಿನ ರಿಲ್ಯಾಕ್ಸ್ ಮೂಡ್ ಮತ್ತೆ ಬರುವುದಿಲ್ಲ. ಆದ್ದರಿಂದ ಆರಾಮ ಮಾಡಿಕೊಳ್ಳಿ. ಸಂಗಾತಿ ನಿಮ್ಮ ಮಾತಿಗೆ ಎದುರಾಡುವುದೇ ಇಲ್ಲವಾದ್ದರಿಂದ ನಿಮಗೆ ಜಗತ್ತೇ ಸುಂದರವೆನಿಸುವುದು.
ಮಕರ : ಎಲ್ಲ ಬದಲಾವಣೆಗಳ ಬಗ್ಗೆ ಕೊರಗುವುದು ಅಷ್ಟು ತರವಲ್ಲ ಅಲ್ವೇ ? ಕೆಲಸಗಳನ್ನು ನಿರ್ವಹಿಸುವಾಗಲೆಲ್ಲಾ ಏಕಾಗ್ರತೆ ಇರಲಿ.
ಕುಂಭ : ನಿಮ್ಮದು ಬರೀ ಮೊಂಡು ರಾಗ. ಯಾರೂ ಇದರಿಂದ ಖುಷಿಯಾಗಿರುವುದಿಲ್ಲ. ಸದ್ಯಕ್ಕೆ ಗಳಿಸಿಕೊಂಡದ್ದನ್ನು ಉಳಿಸಿಕೊಳ್ಳಿ.
ಮೀನ : ರಜೆಯ ಮಜಾ ಅನುಭವಿಸಲು ಪ್ಲಾನ್‌ಗಳು ಯೋಚನೆಗಳು ಅಡ್ಡ ಬರುತ್ತವೆ. ಸ್ನೇಹಿತರಿಗೆ ಸ್ವೀಟ್ ಕೊಡಿಸಿ ಉತ್ತಮರೆನಿಸಿಕೊಳ್ಳುತ್ತೀರಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications