ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿವಿಯಿಂದ ಪ್ರಾಯೋಗಿಕಹವಾಮಾನ ವೀಕ್ಷಣಾಲಯ

By Staff
|
Google Oneindia Kannada News

ಕೋಣಾಜೆ : ಮಂಗಳೂರು ವಿಶ್ವ ವಿದ್ಯಾಲಯದ ಭೌತಶಾಸ್ತ್ರ ವಿಭಾಗವು ಕರಾವಳಿ ಕರ್ನಾಟಕದ ಹವಾಮಾನ ಪರಿಸ್ಥಿತಿಯನ್ನು ಕಂಡು ಹಿಡಿಯುವ ಹವಾಮಾನ ಪರಿವೀಕ್ಷಣಾಲಯವನ್ನು ಪ್ರಾಯೋಗಿಕವಾಗಿ ಆರಂಭಿಸಿದೆ.

27 ಲಕ್ಷ ರೂಪಾಯಿ ವೆಚ್ಚದಲ್ಲಿ ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಮತ್ತು ತಾಂತ್ರಿಕ ಸಂಸ್ಥೆಯ ನೆರವಿನೊಂದಿಗೆ ಕಳೆದ ವಾರದಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸರಿಯಾದ ಅಂಕಿ ಅಂಶಗಳನ್ನು ನೀಡುತ್ತಿದೆ.

ದಕ್ಷಿಣ ಕನ್ನಡ, ಉಡುಪಿ, ಕರಾವಳಿ ಮತ್ತು ಒಳನಾಡು ಪ್ರದೇಶದಲ್ಲಿ ಮಳೆ, ಗಾಳಿ, ಮೋಡ, ತೇವಾಂಶ, ಸೌರಶಕ್ತಿ ಮತ್ತಿತರ ಸೂಕ್ಷ್ಮಾತಿ ಸೂಕ್ಷ್ಮ ಪರಿಸ್ಥಿತಿಗಳನ್ನು ಈ ಕೇಂದ್ರವು ಅಧ್ಯಯನ ಮಾಡುತ್ತಿದೆ. ಮೂರು ವರ್ಷಗಳ ಕಾಲ ಈ ರೀತಿ ಅಂಕಿ ಅಂಶಗಳನ್ನು ಸಂಗ್ರಹಿಸಿ ಪ್ರಾಯೋಗಿಕ ಅಧ್ಯಯನ ಮಾಡಿದ ನಂತರ ಸಾರ್ವಜನಿಕರಿಗೆ ಹವಾಮಾನ ಮಾಹಿತಿಯನ್ನು ನೀಡಲಾರಂಭಿಸಲಾಗುವುದು.

ಹವಾಮಾನ ಕೇಂದ್ರದ ಒಂದು ಗಾಳಿ ಗೋಪುರವನ್ನು ಕೋಣಾಜೆಯಲ್ಲಿರುವ ಮಂಗಳೂರು ವಿವಿ ಆವರಣದಲ್ಲಿಯೇ (ಸಮುದ್ರ ಮಟ್ಟದಿಂದ 80 ಮೀ ಎತ್ತರದಲ್ಲಿ ) ನಿಲ್ಲಿಸಲಾಗಿದೆ. ಇನ್ನೊಂದನ್ನು ಸಿಡಿಲು ನಿರೋಧಕ ಪ್ರದೇಶವಾದ ಪೆರಾಜೆ ಬಳ್ಳ ಮಜಲಿನಲ್ಲಿ (ಸಮುದ್ರ ಮಟ್ಟದಿಂದ 200 ಮೀ. ಎತ್ತರದಲ್ಲಿ ) ನಿಲ್ಲಿಸಲಾಗಿದೆ.

ಪ್ರಾಯೋಗಿಕ ಹಂತ ದಾಟಿ ಜನ ಸಾಮಾನ್ಯರಿಗೆ ಮಾಹಿತಿ ಒದಗಿಸಲು ಆರಂಭಿಸಿದಲ್ಲಿ ಮಂಗಳೂರು ವಿವಿಯ ಈ ಹವಾಮಾನ ಪರಿವೀಕ್ಷಣಾಲಯ ಭಾರತದಲ್ಲಿ ಮೂರನೇ ಮೈಕ್ರೋ ಮಿಟಿರಾಲೋಜಿಕಲ್‌ ಕೇಂದ್ರ ಎಂದು ಗುರುತಿಸಿಕೊಳ್ಳಲಿದೆ.

(ಮಂಗಳೂರು ಪ್ರತಿನಿಧಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X