Get Updates
Get notified of breaking news, exclusive insights, and must-see stories!

ಕರಾವಳಿ ಕ್ರಿಕೆಟ್‌ ಕ್ಲಬ್‌ನ ಐವರುಹುಡುಗರು ಅಡಿಲೇಡ್‌ನಲ್ಲಿ

ತ್ರಿಶೂರ್‌ : ಆಸ್ಟ್ರೇಲಿಯಾದಲ್ಲಿ ಕಾಣೆಯಾಗಿದ್ದಾರೆಂದು ವರದಿಯಾಗಿದ್ದ ಕರಾವಳಿ ಕ್ರಿಕೆಟ್‌ ಕ್ಲಬ್‌ನ ಐವರು ಕ್ರಿಕೆಟಿಗರು ಅಡಿಲೇಡ್‌ನಲ್ಲಿ ಸುರಕ್ಷಿತವಾಗಿದ್ದಾರೆಂದು, ಆಟಗಾರರ ಕುಟುಂಬದವರು ತಿಳಿಸಿದ್ದಾರೆ.

ಗೆಳೆಯರೊಬ್ಬರ ಮನೆಯಲ್ಲಿ ತಂಗಿರುವ ಕೇರಳ ಮೂಲದ ಈ ಐವರು ಕ್ರಿಕೆಟಿಗರು, ಉದ್ಯೋಗದ ತಲಾಷೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಈ ಮುನ್ನ , ಇದೇ ಊರಿನವರೊಬ್ಬರು ಕ್ರಿಕೆಟ್‌ ತರಬೇತಿಯ ನೆಪದಲ್ಲಿ ಅಡಿಲೇಡ್‌ಗೆ ತೆರಳಿ ಬಹಳ ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದಾರೆ. ಪ್ರಸ್ತುತ , ಅಡಿಲೇಡ್‌ಗೆ ತೆರಳಿರುವ ಯುವಕರು, ಹಿರಿಯರ ಮೇಲ್ಪಂಕ್ತಿಯನ್ನೇ ಅನುಸರಿಸುತ್ತಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ತ್ರಿಶೂರ್‌ನ ಸೈಜಿ, ಸೆಬಿ, ಬಿಜು, ಜೋಫಿ ಕೆ.ಯು. ಹಾಗೂ ಥಾಮಸ್‌ ಇವರುಗಳು ಮಾರ್ಚ್‌ 24 ರಂದು ಕ್ರಿಕೆಟ್‌ ತರಬೇತಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದವರು, ನಾಪತ್ತೆಯಾಗಿದ್ದಾರೆ ಎಂದು ಈ ಮೊದಲು ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಆಟಗಾರರು ಪತ್ತೆಯಾಗಿರುವ ಬಗ್ಗೆ ಈವರೆಗೆ ಕರಾವಳಿ ಕ್ರಿಕೆಟ್‌ ಕ್ಲಬ್‌ ಅಥವಾ ಪೊಲೀಸರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ .

(ಮಂಗಳೂರು ಪ್ರತಿನಿಧಿಯಿಂದ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+