ವಾಲ್ಷ್ ನಿವೃತ್ತಿಯಾಗುತ್ತಾರಂತೆ... ಅವರಿಗೆ ಗುಡ್ ಬೈ ಹೇಳಿ
ಕಿಂಗ್ಸ್ಟನ್ (ಜಮೈಕಾ) : 500 ವಿಕೆಟ್ಗಳ ವಿಶ್ವ ದಾಖಲೆ ಬೌಲಿಂಗ್ ವೀರ ವಿಂಡೀಸ್ನ ಕರ್ಟ್ನಿ ವಾಲ್ಷ್ಗೆ ಬಾಯ್ ಬಾಯ್ ಹೇಳಿ. ಪ್ರಸ್ತುತ ದಕ್ಷಿಣ ಆಫ್ರಿಕ ವಿರುದ್ಧ ನಡೆಯುತ್ತಿರುವ ಸರಣಿಯ ಅಂತಿಮ ಟೆಸ್ಟೇ ವಾಲ್ಷ್ ಅವರ ಜೀವಮಾನದ ಕೊನೆ ಅಂತರರಾಷ್ಟ್ರೀಯ ಪಂದ್ಯ.
ಕಿಂಗ್ಸ್ಟನ್ನ ಗ್ಲೀನರ್ ಪತ್ರಿಕೆಗೆ ಕೊಟ್ಟಿರುವ ಸಂದರ್ಶನದಲ್ಲಿ ವಾಲ್ಷ್, ಯೆಸ್, ಐ ಹ್ಯಾವ್ ಡಿಸೈಡೆಡ್ ಟು ಕಾಲ್ ಇಟ್ ಎ ಡೇ ಅಂದಿದ್ದಾರೆ. ಈವರೆಗೆ 513 ಟೆಸ್ಟ್ ವಿಕೆಟ್ ಕಿತ್ತಿರುವ ವಾಲ್ಷ್ , ಅಂತರರಾಷ್ಟ್ರೀಯ ಪಂದ್ಯಕ್ಕೆ ವಿದಾಯ ಹೇಳಿದರೂ ಹುಡುಗರ ಜೊತೆ ಕ್ರಿಕೆಟ್ ಆಡುವುದನ್ನು ಮುಂದುವರೆಸುತ್ತಾರಂತೆ. ತಮಗೆ ತಿಳಿದಿರುವ ವಿಷಯಗಳನ್ನು ಉದಯೋನ್ಮುಖರಿಗೆ ಹೇಳಿಕೊಟ್ಟು, ಕ್ರಿಕೆಟ್ಟಿಗೆ ತಮ್ಮ ಕೈಲಾದ ಸೇವೆ ಮಾಡುವರಂತೆ.
ಪ್ರಸ್ತುತ ದಕ್ಷಿಣ ಆಫ್ರಿಕ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ 20.95 ಸರಾಸರಿಯಲ್ಲಿ 19 ವಿಕೆಟ್ ಕಿತ್ತಿರುವ ವಾಲ್ಷ್ ಅವರದು ಸರಣಿಯಲ್ಲಿ ಹೆಚ್ಚು ವಿಕೆಟ್ ಪಡೆದಿರುವ ಅಗ್ಗಳಿಕೆ. 130 ಪಂದ್ಯಗಳನ್ನಾಡಿರುವ ವಾಲ್ಷ್ಗೆ ಈಗ 38 ವರ್ಷ. 17 ವರ್ಷಗಳ ಕಾಲ ಕ್ರಿಕೆಟ್ಟಾಡಿದ್ದಾರೆ. ತಂಡಕ್ಕೆ ಎಷ್ಟೋ ಬಾರಿ ಗೆಲುವು ದಕ್ಕಿಸಿಕೊಟ್ಟಿದ್ದಾರೆ. ಈಗ ತಡಬಡಾಯಿಸುತ್ತಿರುವ ವಿಂಡೀಸ್ ತಂಡಕ್ಕೂ ಅಲ್ಪ ಸ್ವಲ್ಪ ಗೌರವ ದಕ್ಕಿಸಿಕೊಟ್ಟಿದ್ದಾರೆ. ಕ್ರಿಕೆಟ್ಟಿನಲ್ಲಿ ಅವರ ಹೆಸರು ಸದಾ ಉಳಿಯಲಿ. ಗುಡ್ ಬೈ ವಾಲ್ಷ್.
(ಎಎಫ್ಪಿ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications