Get Updates
Get notified of breaking news, exclusive insights, and must-see stories!

ಧ್ವನಿಮತದಿಂದ ರೈಲ್ವೆ ಬಜೆಟ್‌ಅಂಗೀಕಾರ, ಉಭಯ ಸದನ ಮುಂದಕ್ಕೆ

ನವದೆಹಲಿ : ಯಾವುದೇ ಚರ್ಚೆಯಿಲ್ಲದೆ ಧ್ವನಿಮತದಿಂದ ರೈಲ್ವೆ ಬಜೆಟ್ಟನ್ನು ಅಂಗೀಕರಿಸುವುದರೊಂದಿಗೆ, ಸಂಸತ್ತಿನ ಉಭಯ ಸದನಗಳು ಸೋಮವಾರ ಮತ್ತೆ ಸೇರುವ ನಿರ್ಣಯದೊಂದಿಗೆ ಶುಕ್ರವಾರದ ಕಲಾಪ ಕೊನೆಗೊಂಡಿತು. ಈ ನಡುವೆ, ತೆಹಲ್ಕಾ ಪ್ರಕರಣದ ತನಿಖೆಗೆ ಸಂಬಂಧಿಸಿ, ಸಂಸದೀಯ ಸಮಿತಿಯನ್ನು ನೇಮಿಸುವ ತನ್ನ ಪಟ್ಟಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಾಂಗ್ರೆಸ್‌ ಸ್ಪಷ್ಟ ಪಡಿಸಿದೆ.

ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆ ಲೋಕಸಭೆಯ ಬಾವಿಗೆ ನುಗ್ಗಿದ ಕಾಂಗ್ರೆಸ್‌ನ ಸದಸ್ಯರು ತಮ್ಮ ಎಂದಿನ ಸಂಸದೀಯ ಸಮಿತಿ ರಚನೆಯ ಒತ್ತಾಯದ ಪ್ರತಿಭಟನೆಯನ್ನು ಮುಂದುವರಿಸಿದರು. ಸಭಾಪತಿ ಬಾಲಯೋಗಿ ಅವರು ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದು ಯಾವುದೇ ಫಲ ನೀಡಲಿಲ್ಲ . ಆನಂತರವೂ ತಮ್ಮ ಪಟ್ಟು ಸಡಿಲಿಸಲೊಪ್ಪದ ಕಾಂಗ್ರೆಸ್ಸಿಗರು, ಕಲಾಪಕ್ಕೆ ತಡೆಯಾಡ್ಡಿದರು.

ಕಾಂಗ್ರೆಸ್‌ ಪಕ್ಷದ ಸದಸ್ಯರ ಅಸಹಕಾರದ ಕಾರಣದಿಂದ, ಯಾವುದೇ ಚರ್ಚೆಯಿಲ್ಲದೆ ಧ್ವನಿಮತದಿಂದ ರೈಲ್ವೆ ಬಜೆಟ್ಟನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿತು. ಧ್ವನಿಮತ ಅಂಗೀಕಾರದ ನಂತರ ಲೋಕಸಭೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು. ರಾಜ್ಯಸಭೆಯದ್ದೂ ಯಥಾವತ್‌ ಪರಿಸ್ಥಿತಿ. ಇನ್ನುಳಿದಿರುವುದು ಸಿನ್ಹಾ ಮಂಡಿಸಿರುವ ಕೇಂದ್ರ ಆಯವ್ಯಯದ ಅಂಗೀಕಾರ ಮಾತ್ರ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+