Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಸಂಜೆಯೆಲ್ಲಾ ಚೆನ್ನಾಗಿರುತ್ತದೆ. ಕೃಷಿ ಕ್ಷೇತ್ರದಲ್ಲಿ ದುಡಿಯುವವರಾದರೆ ತುಂಬಾ ತಲೆ ಖರ್ಚು ಮಾಡಿ ಮುಂದಿನ ವರ್ಷದ ಯೋಜನೆ ಸಿದ್ಧಪಡಿಸಿ. ಬರಲಿರುವ ಲಾಭ ನಷ್ಟವನ್ನು ತುಂಬುತ್ತದೆ, ಆದ್ದರಿಂದ ತಲೆ ಬಿಸಿ ಬೇಡ.

ವೃಷಭ : ಬರೀ ಫಿಲಾಸಫೀ ಮಾತಾಡುತ್ತಾ ಯಾಕೆ ಸಮಯ ಹಾಳು ಮಾಡುತ್ತೀರಿ. ನಿಜ ಹೇಳಬೇಕೆಂದರೆ ನೀವು ಯೋಚನೆಯೇ ಮಾಡಿರದ ಹಲವು ಒಳ್ಳೆಯ ಘಟನೆಗಳು ನಡೆಯುತ್ತಿವೆ.

ಮಿಥುನ : ಜಗತ್ತಿನಲ್ಲಿ ಚೆಂದ ಕಂಡದ್ದೆಲ್ಲಾ ಅನುಭವಿಸುವುದಕ್ಕೆ ಆಪ್ಯಾಯಮಾನವಾಗಿರುವುದಿಲ್ಲ ಅನ್ನುವ ಮಾತಿಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಬಾರದು. ಈಗ ಸಮಯ ಬಹಳ ಅಮೂಲ್ಯ.

ಕಟಕ : ಆಫೀಸಿನಲ್ಲಿ ಕೀಟಲೆ ಮಾಡುವವರು ಜಾಸ್ತಿಯಾಗಿದ್ದಾರೆ. ಹಾಗಂತ ನಿಮ್ಮ ಕೆಲಸದ ಮೇಲೆಯೇ ಜಿಗುಪ್ಸೆ ಬಂದರೆ ದೊಡ್ಡ ನಷ್ಟವಾಗುವುದು ನಿಮಗೇ ತಾನೇ ? ಆದ್ದರಿಂದ ಕೂಲ್‌ ಆಗಿರಲು ಪ್ರಯತ್ನಿಸಿ.

ಸಿಂಹ : ಜಂಭ ಎನ್ನುವುದನ್ನು ನೀವು ಗುತ್ತಿಗೆಗೆ ಪಡೆದಿದ್ದೀರೇನೋ ಅಂತ ನಿಮ್ಮ ಸ್ನೇಹಿತರು ಆಶ್ಚರ್ಯ ಪಡುತ್ತಾರೆ. ಆದರೆ ಪ್ರಾಮಾಣಿಕ ಕೆಲಸಗಳು ಮತ್ತು ಪ್ರಯತ್ನದಿಂದ ಅವರಲ್ಲಿರುವ ಇಂಪ್ರೆಷನ್‌ನ್ನು ಬದಲಿಸಬಹುದು.

ಕನ್ಯಾ : ಮಾತು ಆಡಿದ ಮೇಲೆ ಮುಗಿಯಿತು, ನಂತರ ನಿಮ್ಮದೇನೂ ಕೆಲಸವಿರುವುದಿಲ್ಲ ಎಂಬುದನ್ನು ಎಷ್ಟೇ ಕಷ್ಟಪಟ್ಟರೂ ನಿಮ್ಮ ಸ್ನೇಹಿತರು ಅರ್ಥ ಮಾಡಿಕೊಳ್ಳುವುದಿಲ್ಲ. ಇವತ್ತು ಚಾಲೆಂಜ್‌ಗಳ ಗೋಜಿಗೆ ಹೋಗಬೇಡಿ.

ತುಲಾ : ನಿಮ್ಮದಲ್ಲದ ಕೆಲಸಗಳನ್ನು ಮಾಡಲು ಹೋದರೆ ಶುರುವಿಗೆ ಸೋಲು ಸ್ವಲ್ಪ ಎಡತಾಕುತ್ತದೆ. ಆದರೆ ನಿಮ್ಮ ಬಳಿ ಜಮೆಯಾಗುವ ಅನುಭವ ಸಾಮರ್ಥ್ಯ, ಮುಂದೆ ನಿಮ್ಮ ಕೈ ಹಿಡಿಯುತ್ತದೆ.

ವೃಶ್ಚಿಕ : ಮನೆಯಲ್ಲಿ ದೇವರ ಕಾರ್ಯ ನಡೆಸುವ ನಿಮ್ಮ ಯೋಚನೆಗೆ ದೊಡ್ಡದೊಂದು ಕಲ್ಲು ಬೀಳುತ್ತದೆ. ಅದಕ್ಕೆ ನೀವು ಬೇಜಾರು ಪಡುವುದಿಲ್ಲ. ಇವತ್ತು ಆಫೀಸಿನಲ್ಲಿ ತುಂಬಾ ಕೆಲಸಗಳು ನಿಮ್ಮ ಕಾದಿರುತ್ತವೆ.

ಧನಸ್ಸು : ಇವತ್ತೆಲ್ಲಾ ಬರೀ ಯೋಚನೆಯಲ್ಲಿಯೇ ದಿನ ಕಳೆಯಬೇಡಿ. ಬಂಧುಗಳ ತೊಳಲಾಟ ನಿಮಗೆ ಅರ್ಥವಾಗುವುದರಿಂದಲೇ ಇಷ್ಟು ಬೇಜಾರು ಪಟ್ಟುಕೊಳ್ಳಬೇಕಾಗುತ್ತಲ್ಲಾ ಅಂತ ಮತ್ತಷ್ಟು ನೋಯುತ್ತೀರಿ.

ಮಕರ : ನಿಮ್ಮ ಓದಿನ ಮರ್ಜಿಯನ್ನು ನಿಮ್ಮ ಕೈಯಲ್ಲಿಯೇ ಉಳಿಸಿಕೊಳ್ಳುತ್ತಿದ್ದ ಕಾಲದ ಬಗ್ಗೆ ಯೋಚನೆ ಮಾಡುತ್ತಾ ಸಮಯ ಹಾಳು ಮಾಡಿಕೊಳ್ಳುತ್ತೀರಿ. ಪ್ರಯಾಣ ಹೋಗಬೇಕೆಂಬ ಆಸೆಗೆ ಯಾವ ಕಡೆಯಿಂದಲೂ ನೀರು ಸಿಗದು.

ಕುಂಭ : ಪ್ರಯಾಣ ಯೋಗವಿದೆ. ತತ್ವಗಳಿಗೆ ನೀವು ಬದ್ಧರಾಗಿದ್ದುಕೊಂಡು ಅಲ್ಪ ಸ್ವಲ್ಪ ಕಳೆದುಕೊಂಡರೆ ಅದಕ್ಕಾಗಿ ಬೇಜಾರು ಮಾಡಿಕೊಳ್ಳುವುದು ಸರಿ ಅಲ್ಲ . ಅಲ್ವೇ?

ಮೀನ : ಸಿಂಪಥಿ ಎನ್ನುವುದು ಎಲ್ಲಾ ದಿಕ್ಕಿನಿಂದಲೂ ನಿಮ್ಮ ಬಳಿ ಹರಿದು ಬರುತ್ತದೆ. ಆ ವಿಷಯದಲ್ಲೂ ನೀವು ಲಕ್ಕಿ. ನಿಮ್ಮ ಸಾಮರ್ಥ್ಯದಿಂದ ಅಂದುಕೊಂಡ ಕೆಲಸಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತೀರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+