ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಟೈಟಾನಿಕ್‌ : ಎನ್‌ಐಐಟಿ ಲಾಭದಲ್ಲಿ ಶೇ.30- 40 ಖೋತಾ

By Staff
|
Google Oneindia Kannada News

ನವದೆಹಲಿ : ಬರುವ ಸೆಪ್ಟೆಂಬರ್‌ನಲ್ಲಿ ಮುಗಿಯಲಿರುವ ವಿತ್ತ ವರ್ಷದಲ್ಲಿ ನಮ್ಮ ಕಂಪನಿಯ ಲಾಭದಲ್ಲಿ 30- 40 ಪ್ರತಿಶತ ಕಡಿತ ಆಗಲಿದೆ ಎಂದು ಸಾಫ್ಟ್‌ವೇರ್‌ ಸಂಸ್ಥೆ ಎನ್‌ಐಐಟಿ ಅಧ್ಯಕ್ಷರು ಗುರುವಾರ ತಿಳಿಸಿದ್ದಾರೆ. ಅಮೆರಿಕಾದಲ್ಲಿನ ಆರ್ಥಿಕ ದುಸ್ಥಿತಿಯ ಹೊಡೆತದ ಇನ್ನೊಂದು ಉದಾಹರಣೆ ಇದು.

ಮುಂದೇನು ಎಂಬ ಪ್ರಶ್ನೆಯನ್ನು ಎದುರಿಸುತ್ತಿರುವ ನಾವು ಈಗ ತರಪೇತಿ ನೀಡಿರುವ ವಿದ್ಯಾರ್ಥಿಗಳ ಭವಿತವ್ಯದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿದೆ. ಈಗ ಔಟ್‌ ಡೇಟೆಡ್‌ ಅನ್ನುವಂಥಾ ಕೋರ್ಸುಗಳನ್ನು ಕಲಿತಿರುವ ವಿದ್ಯಾರ್ಥಿಗಳಿಗೆ ಹೊಸ ಅಗತ್ಯಕ್ಕೆ ತಕ್ಕಂತೆ ಮತ್ತೆ ಬೋಧಿಸಬೇಕಾದ ಪ್ರಸಂಗ ಬಂದೊದಗಿದೆ. ಮುಂದಿನ 6- 9 ತಿಂಗಳು ಒಂದು ವಿಧದಲ್ಲಿ ಗೊತ್ತು ಗುರಿಯಿಲ್ಲದ ಅವಧಿಯಾಗಲಿದೆ ಎಂದು ಎನ್‌ಐಜಿಟಿ ಅಧ್ಯಕ್ಷ ರಾಜೇಂದ್ರ ಎಸ್‌.ಪವಾರ್‌ ಹೇಳಿದ್ದಾರೆ.

ಅಮೇರಿಕಗೆ ಬಿದ್ದಿರುವ ಆರ್ಥಿಕ ಹೊಡೆತಕ್ಕೆ ಮತ್ತಷ್ಟು ಉಪ್ಪು ಖಾರ ಹಾಕಿ ಮಾಧ್ಯಮಗಳು ಬಣ್ಣಿಸುತ್ತಿರುವುದೇ ನಮಗೆ ಮಾರಕವಾಗಿದೆ. ಭಾರತದಲ್ಲಿ ಐಟಿಗೆ ಭವಿಷ್ಯವೇ ಇಲ್ಲವೆಂದು ಕೆಲವರು ಭಾವಿಸಿದ್ದಾರೆ. ಈ ಕಾರಣ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಲಿದೆ. ಆದರೂ ಅಮೆರಿಕ ಆರ್ಥಿಕತೆ ಸುಧಾರಿಸಿದ ಬಗ್ಗೆ ಸಣ್ಣ ಸುದ್ದಿ ಹೊರಬಿದ್ದರೂ ಇಲ್ಲೂ ಉದ್ಯಮ ಚೇತರಿಸಿಕೊಳ್ಳಲಿದೆ ಎಂಬ ವಿಶ್ವಾಸ ನಮ್ಮದು ಎಂಬುದು ಪವಾರ್‌ ಅಂಬೋಣ.

(ಎಎಫ್‌ಪಿ)

ವಾರ್ತಾಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X